Career Tips: ಉದ್ಯೋಗಿಗಳಿಗೆ ಸ್ಯಾಲರಿ ಹೈಕ್ ಸಿಗದಿರಲು ಈ ವಿಷಯಗಳು ಕಾರಣವಾಗಿರಬಹುದು
ಪ್ರತಿಯೊಬ್ಬ ಉದ್ಯೋಗಿಗೂ ಒಳ್ಳೆಯ ಸಂಬಳದ ಕೆಲಸವೇ ಬೇಕು. ವರ್ಷ ವರ್ಷಕ್ಕೆ ಸ್ಯಾಲರಿ ಹೆಚ್ಚಾಗುತ್ತಿರಬೇಕು, ದೊಡ್ಡ ಹೈಕ್ ಸಿಗಬೇಕು ಎಂದು ಬಯಸುತ್ತಾರೆ. ಆದರೆ ಆಸೆಗೂ ವಾಸ್ತವಕ್ಕೂ ತುಂಬಾನೇ ವ್ಯತ್ಯಾಸ ಇರುತ್ತದೆ. ಬಯಸಿದಂತೆ ಸ್ಯಾಲರಿ ಹೈಕ್ ಸಿಗುವುದಿಲ್ಲ.
ಉದ್ಯೋಗಿಯಾಗಿ ನಿಮ್ಮಲ್ಲಿನ ಯಾವುದೋ ಒಂದು ಗುಣ ನಿಮ್ಮ ಏಳಿಗೆಗೆ ಅಡ್ಡಗಾಲು ಹಾಕುತ್ತಿರಬಹುದು. ಅಂತಹ ಅಂಶವನ್ನು ಕಂಡುಕೊಂಡು ಸುಧಾರಿಸಿಕೊಳ್ಳುವುದು ನಿಜಕ್ಕೂ ಉತ್ತಮ. ನಿಮಗೆ ಹೆಚ್ಚಿನ ವೇತನ ಸಿಗಲಿಲ್ಲ ಎಂದು ಬೈದಾಡಿಕೊಂಡು ಓಡಾಡುವ ಬದಲು ಬಾಸ್ / ಮ್ಯಾನೇಜರ್ ಜೊತೆ ಸೂಕ್ತ ರೀತಿಯಲ್ಲಿ ಮಾತನಾಡಿ.
2/ 7
ನೀವು ಬಯಸಿದಂತೆ ನಿಮ್ಮ ಸಂಬಳ ಹೆಚ್ಚಾಗದಿರಲಿ ಈ ಕಾರಣಗಳು ಇರಬಹುದು. ಮೊದಲಿಗೆ ನಿಮ್ಮ ಕೆಲಸವನ್ನು ಗೌರವಿಸಿ. ಬಾಸ್ ಬಳಿ ಸಂಬಳದ ಬಗ್ಗೆ ಮಾತನಾಡುವಾಗ, ನೀವು ಸಂಸ್ಥೆಗಾಗಿ ಮಾಡುತ್ತಿರುವ ಕೆಲಸ ಎಷ್ಟು ಮುಖ್ಯ ಎಂದು ಒತ್ತಿ ಹೇಳಲು ಮರೆಯಬೇಡಿ.
3/ 7
ನೀವು ಮಾಡುತ್ತಿರುವ ಕೆಲಸಕ್ಕೆ, ನೀವು ನೀಡುತ್ತಿರುವ ಸಂಬಳ ತುಂಬಾ ಕಡಿಮೆ ಇದೆ ಎಂಬುವುದನ್ನು ಮನವರಿಕೆ ಮಾಡಿಕೊಡಿ. ನಿಮ್ಮ ಸಾಧನೆಗಳ ಸಂಕ್ಷಿಪ್ತವಾಗಿ ತಿಳಿಸುವ ಮೂಲಕವೂ ಮನವರಿಕೆ ಮಾಡಿಕೊಡಬಹುದು.
4/ 7
ಬೇರೆ ಕಂಪನಿಯಲ್ಲಿ ನಿಮ್ಮ ಕೆಲಸಕ್ಕೆ ಎಷ್ಟು ಸಂಬಳ ಇದೆ ಎಂಬುದನ್ನು ಉಲ್ಲೇಖಿಸಿ. ಇತರ ಕಂಪನಿಗಳಲ್ಲಿ ನಿಮ್ಮ ಮಟ್ಟದ ಕೆಲಸ ಮಾಡುವ ವ್ಯಕ್ತಿಯ ಸಂಬಳದ ಬಗ್ಗೆ ಮಾಹಿತಿ ಪಡೆಯಿರಿ. ಇದರ ಆಧಾರದ ಮೇಲೆ ನಿಮ್ಮ ಬಾಸ್ನೊಂದಿಗೆ ಮಾತನಾಡಬಹುದು.
5/ 7
ಬೇರೆ ಕಂಪನಿಯಿಂದ ನಿಮಗೆ ಹೆಚ್ಚಿನ ಸಂಬಳದ ಆಫರ್ ಇದ್ದರೆ, ಆ ಬಗ್ಗೆ ಬಾಸ್ ಅಥವಾ ಮ್ಯಾನೇಜರ್ ಜೊತೆ ಚರ್ಚಿಸಿ. ಮತ್ತೊಂದು ಕಂಪನಿಯಿಂದ ಆಫರ್ ಪಡೆಯುವುದು ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ.
6/ 7
ಮ್ಯಾನೇಜರ್ ಜೊತೆ ಮಾತನಾಡುವಾಗ, ನಿಮ್ಮ ಪಾಯಿಂಟ್ ಅಂದರೆ ಪ್ರೆಸೆಂಟೇಶನ್ ಉತ್ತಮವಾಗಿರಲಿ. ಸತ್ಯಗಳೊಂದಿಗೆ ಮಾತನಾಡುವುದು ಪರಿಣಾಮಕಾರಿಯಾಗಿ ಇರುತ್ತದೆ.
7/ 7
ನಿಮ್ಮ ವಿಷಯವನ್ನು ಸರಿಯಾಗಿ ಅರ್ಥೈಸುವಲ್ಲಿ ನಿಮಗೆ ಸಾಧ್ಯವಾಗದಿದ್ದರೆ ಅದು ನಿಮಗೆ ವಿರುದ್ಧವಾಗಿ ಹೋಗಬಹುದು ಎಚ್ಚರದಿಂದ ಇರಿ.