Career Options: ಆಯುಷ್ ವೈದ್ಯಕೀಯ ಪದವಿ ಮಾಡಿದವರಿಗೆ ಎಷ್ಟೆಲ್ಲಾ ಉದ್ಯೋಗಾವಕಾಶಗಳಿವೆ ತಿಳಿಯಿರಿ

AYUSH ಎಂದರೆ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ ಹಾಗೂ ಹೋಮಿಯೋಪತಿ ಎಂಬ ಅರ್ಥ ಬರುತ್ತದೆ. ಇತ್ತೀಚೆಗೆ ಆರೋಗ್ಯ ಸೇವೆಗಳ ಬೇಡಿಕೆಯು ಹೆಚ್ಚುತ್ತಿದ್ದು, ಇದರಲ್ಲಿ ವೃತ್ತಿಜೀವನದ ಆಯ್ಕೆಯೂ ಸಹ ಉತ್ತಮವಾಗಿದೆ. ಆಯುಷ್ ವೈದ್ಯರಾದವರು ತಮ್ಮ ವೃತ್ತಿಜೀವನ ರೂಪಿಸಿಕೊಳ್ಳಲು ಹಲವಾರು ಪರ್ಯಾಯ ಆಯ್ಕೆಗಳಿವೆ.

First published:

  • 17

    Career Options: ಆಯುಷ್ ವೈದ್ಯಕೀಯ ಪದವಿ ಮಾಡಿದವರಿಗೆ ಎಷ್ಟೆಲ್ಲಾ ಉದ್ಯೋಗಾವಕಾಶಗಳಿವೆ ತಿಳಿಯಿರಿ

    MBBS ಪದವೀಧರರಂತೆ, ಆಯುಷ್ ಪದವೀಧರರು ಸಹ ತಮ್ಮದೇ ಆದ ಕ್ಲಿನಿಕ್ ನಡೆಸಬಹುದು. ಆಸ್ಪತ್ರೆಗಳಲ್ಲಿ ಸಲಹೆಗಾರರಾಗಿ ಅಥವಾ ಆನ್ ಕಾಲ್ ವೈದ್ಯರಾಗಿ ಸೇವೆ ಸಲ್ಲಿಸಬಹುದು. ಜೊತೆಗೆ ಆಯುಷ್ ವೈದ್ಯರಾಗಿಯೂ ಸೇವೆ ಸಲ್ಲಿಸಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Career Options: ಆಯುಷ್ ವೈದ್ಯಕೀಯ ಪದವಿ ಮಾಡಿದವರಿಗೆ ಎಷ್ಟೆಲ್ಲಾ ಉದ್ಯೋಗಾವಕಾಶಗಳಿವೆ ತಿಳಿಯಿರಿ

    ಆಯುಷ್ ಪದವಿ ಓದಿದ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿದ ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಮತ್ತು ಸಂಶೋಧನೆಯನ್ನು ಮಾಡಬಹುದು. ಈ ಮೂಲಕ ಸರ್ಕಾರದ ಅಥವಾ ಖಾಸಗಿ ಸಂಶೋಧನೆಗಳಲ್ಲಿ ಕೆಲಸ ಮಾಡಬಹುದು.

    MORE
    GALLERIES

  • 37

    Career Options: ಆಯುಷ್ ವೈದ್ಯಕೀಯ ಪದವಿ ಮಾಡಿದವರಿಗೆ ಎಷ್ಟೆಲ್ಲಾ ಉದ್ಯೋಗಾವಕಾಶಗಳಿವೆ ತಿಳಿಯಿರಿ

    ಪ್ಯಾರಾ ಮೆಡಿಕಲ್ ಉದ್ಯಮದಲ್ಲಿ ಮತ್ತು ಆಯುರ್ವೇದ ಉತ್ಪನ್ನಗಳನ್ನು ತಯಾರಿಸುವ ಔಷಧೀಯ ಉದ್ಯಮದಲ್ಲಿ ಆಯುಷ್ ವೈದ್ಯರು ಕೆಲಸ ಮಾಡಬಹುದು. ಆಯುಷ್ ವೈದ್ಯರು ಔಷಧೀಯ ಕಂಪನಿಗಳಿಗೆ ಗುಣಮಟ್ಟದ ವ್ಯವಸ್ಥಾಪಕರಾಗಿ, ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಕೆಲಸ ಆರಂಭಿಸಲು ಅರ್ಹರಾಗಿರುತ್ತಾರೆ.

    MORE
    GALLERIES

  • 47

    Career Options: ಆಯುಷ್ ವೈದ್ಯಕೀಯ ಪದವಿ ಮಾಡಿದವರಿಗೆ ಎಷ್ಟೆಲ್ಲಾ ಉದ್ಯೋಗಾವಕಾಶಗಳಿವೆ ತಿಳಿಯಿರಿ

    ಆಯುಷ್ ವೈದ್ಯರು ಯುಪಿಎಸ್ ಸಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಸ್ನಾತಕೋತ್ತರ ಪದವಿಯ ನಂತರ ಪರೀಕ್ಷೆ ತೆಗೆದುಕೊಂಡು ಆಯುಷ್ ವೈದ್ಯಕೀಯ ಅಧಿಕಾರಿ ಹುದ್ದೆಗಳನ್ನು ಪಡೆಯಬಹುದು.

    MORE
    GALLERIES

  • 57

    Career Options: ಆಯುಷ್ ವೈದ್ಯಕೀಯ ಪದವಿ ಮಾಡಿದವರಿಗೆ ಎಷ್ಟೆಲ್ಲಾ ಉದ್ಯೋಗಾವಕಾಶಗಳಿವೆ ತಿಳಿಯಿರಿ

    ಆಯುಷ್ ಪದವಿ ನಂತರ MBA ಮಾಡಬಹುದು. ಆರೋಗ್ಯ ನಿರ್ವಾಹಕರಾಗಿ ಕೆಲಸ ಮಾಡಲು ಬಯಸುವ ಆಯುಷ್ ವೈದ್ಯರಿಗೆ ಆಸ್ಪತ್ರೆ ನಿರ್ವಹಣೆಯಲ್ಲಿ ಎಂಬಿಎ ಅತ್ಯುತ್ತಮ ಆಯ್ಕೆಯಾಗಿದೆ.

    MORE
    GALLERIES

  • 67

    Career Options: ಆಯುಷ್ ವೈದ್ಯಕೀಯ ಪದವಿ ಮಾಡಿದವರಿಗೆ ಎಷ್ಟೆಲ್ಲಾ ಉದ್ಯೋಗಾವಕಾಶಗಳಿವೆ ತಿಳಿಯಿರಿ

    ಎಲ್ಲೆಲ್ಲೂ ಆಯುರ್ವೇದ ಔಷಧಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ ಗಿಡಮೂಲಿಕೆ ಔಷಧಗಳ ಕೃಷಿ ಮತ್ತು ವ್ಯಾಪಾರವು ಆಸಕ್ತಿದಾಯಕ ವೃತ್ತಿಜೀವನದ ಆಯ್ಕೆಗಳಲ್ಲಿ ಒಂದಾಗಿದೆ. ಇನ್ನು ಹೋಟೆಲ್, ರೆಸ್ಟೋರೆಂಟ್ನಲ್ಲಿ ಆರೋಗ್ಯ ತಜ್ಞರಾಗಿ ಉದ್ಯೋಗ ಮಾಡಬಹುದು.

    MORE
    GALLERIES

  • 77

    Career Options: ಆಯುಷ್ ವೈದ್ಯಕೀಯ ಪದವಿ ಮಾಡಿದವರಿಗೆ ಎಷ್ಟೆಲ್ಲಾ ಉದ್ಯೋಗಾವಕಾಶಗಳಿವೆ ತಿಳಿಯಿರಿ

    ಸರ್ಕಾರಿ ಹುದ್ದೆಯನ್ನು ಸಹ ಪಡೆಯಬಹುದು. ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಕಾರ್ಯಕ್ರಮಗಳ ಅಡಿಯಲ್ಲಿ ವೈದ್ಯಕೀಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ರಾಜ್ಯ ಸರ್ಕಾರಗಳು ಆಯುಷ್ ವೈದ್ಯರನ್ನು ನೇಮಿಸಿಕೊಳ್ಳುತ್ತವೆ.

    MORE
    GALLERIES