Career In Psychology: ಸೈಕಾಲಜಿ ಪದವೀಧರರಿಗೆ ಭರ್ಜರಿ ಅವಕಾಶ, ಈ 7 ಕ್ಷೇತ್ರಗಳಲ್ಲಿ ವೃತ್ತಿ ರೂಪಿಸಿಕೊಳ್ಳಬಹುದು

ಸಾಕಷ್ಟು ವಿದ್ಯಾರ್ಥಿಗಳು ಸೈಕಾಲಜಿ ಅಧ್ಯಯನದಲ್ಲಿ ಆಸಕ್ತಿ ತೋರುತ್ತಾರೆ. ಬಿಎ, ಬಿಎಸ್ಸಿ ಪದವಿಯಲ್ಲಿ ಮನೋವಿಜ್ಞಾನವನ್ನು ಅಧ್ಯಯನ ಮಾಡುತ್ತಾರೆ. ಸೈಕಾಲಜಿಯಲ್ಲೇ MA, MSc ಕೂಡ ಮಾಡಬಹುದು. ಆದರೆ ಮುಂದೆ ಇದೇ ಕ್ಷೇತ್ರದಲ್ಲಿ ಒಳ್ಳೆಯ ಉದ್ಯೋಗ ಸಿಗಬೇಕಷ್ಟೇ.

First published:

  • 18

    Career In Psychology: ಸೈಕಾಲಜಿ ಪದವೀಧರರಿಗೆ ಭರ್ಜರಿ ಅವಕಾಶ, ಈ 7 ಕ್ಷೇತ್ರಗಳಲ್ಲಿ ವೃತ್ತಿ ರೂಪಿಸಿಕೊಳ್ಳಬಹುದು

    ಮನೋವಿಜ್ಞಾನ ಕೋರ್ಸ್ ಮಾಡಿದ ನಂತರ ವಿದ್ಯಾರ್ಥಿಗಳು ಆರೋಗ್ಯ ರಕ್ಷಣೆ, ಶಿಕ್ಷಣ, ಸಾಮಾಜಿಕ ಕಾರ್ಯ, ಚಿಕಿತ್ಸೆ ಮತ್ತು ಸಮಾಲೋಚನೆಯಂತಹ ಅನೇಕ ಕ್ಷೇತ್ರಗಳಲ್ಲಿ ವೃತ್ತಿಗಳನ್ನು ಮಾಡಬಹುದು. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 28

    Career In Psychology: ಸೈಕಾಲಜಿ ಪದವೀಧರರಿಗೆ ಭರ್ಜರಿ ಅವಕಾಶ, ಈ 7 ಕ್ಷೇತ್ರಗಳಲ್ಲಿ ವೃತ್ತಿ ರೂಪಿಸಿಕೊಳ್ಳಬಹುದು

    1. Chartered Psychologist: ಚಾರ್ಟರ್ಡ್ ಮನಶಾಸ್ತ್ರಜ್ಞರಾಗಿ ವೃತ್ತಿ ರೂಪಿಸಿಕೊಳ್ಳಬಹುದು. ಔದ್ಯೋಗಿಕ ಮನೋವಿಜ್ಞಾನ, ಶೈಕ್ಷಣಿಕ ಮನೋವಿಜ್ಞಾನ, ಕ್ರೀಡೆ ಮತ್ತು ಮಾನಸಿಕ ಆರೋಗ್ಯದಂತಹ ಹಲವು ಕ್ಷೇತ್ರಗಳಲ್ಲಿ ಪರಿಣತಿಯನ್ನು ಪಡೆಯಬಹುದು. ಈ ಕೆಲಸಕ್ಕೆ ಒಳ್ಳೆ ವೇತನವೂ ಸಿಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 38

    Career In Psychology: ಸೈಕಾಲಜಿ ಪದವೀಧರರಿಗೆ ಭರ್ಜರಿ ಅವಕಾಶ, ಈ 7 ಕ್ಷೇತ್ರಗಳಲ್ಲಿ ವೃತ್ತಿ ರೂಪಿಸಿಕೊಳ್ಳಬಹುದು

    2. Psychotherapist: ಸೈಕೋಥೆರಪಿಸ್ಟ್ ಆದರೆ ಒತ್ತಡ, ವ್ಯಸನಗಳು ಸೇರಿದಂತೆ ಮಾನಸಿಕ ಸಮಸ್ಯೆಗಳನ್ನು ನಿವಾರಿಸಲು ರೋಗಿಗಳಿಗೆ ಸಹಾಯ ಮಾಡಬಹುದು. ಮನೋವಿಶ್ಲೇಷಣೆ ಮತ್ತು ಮನೋದೈಹಿಕ ಚಿಕಿತ್ಸೆ, ಕಲಾ ಚಿಕಿತ್ಸೆ, ನಾಟಕ ಚಿಕಿತ್ಸೆ, ಮಾನವೀಯ ಮತ್ತು ಸಮಗ್ರ ಮಾನಸಿಕ ಚಿಕಿತ್ಸೆ, ಸಂಮೋಹನ-ಮಾನಸಿಕ ಚಿಕಿತ್ಸೆ ಮತ್ತು ಅನುಭವದ ಚಿಕಿತ್ಸೆ ಸೇರಿವೆ. (ಸಾಂಕೇತಿಕ ಚಿತ್ರ)

    MORE
    GALLERIES

  • 48

    Career In Psychology: ಸೈಕಾಲಜಿ ಪದವೀಧರರಿಗೆ ಭರ್ಜರಿ ಅವಕಾಶ, ಈ 7 ಕ್ಷೇತ್ರಗಳಲ್ಲಿ ವೃತ್ತಿ ರೂಪಿಸಿಕೊಳ್ಳಬಹುದು

    3. Social worker: ಸೈಕಾಲಜಿ ಓದಿದವರು ಸಮಾಜಿಕ ಕೆಲಸಗಳನ್ನು ಮಾಡಬಹುದು. ಜೀವನದಲ್ಲಿ ಕಷ್ಟಕರ ಸಮಯವನ್ನು ಎದುರಿಸುತ್ತಿರುವ ಜನರ ಪರಿಸ್ಥಿತಿಗಳನ್ನು ಸುಧಾರಿಸಲು ನೀವು ಕೆಲಸ ಮಾಡಬೇಕಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 58

    Career In Psychology: ಸೈಕಾಲಜಿ ಪದವೀಧರರಿಗೆ ಭರ್ಜರಿ ಅವಕಾಶ, ಈ 7 ಕ್ಷೇತ್ರಗಳಲ್ಲಿ ವೃತ್ತಿ ರೂಪಿಸಿಕೊಳ್ಳಬಹುದು

    4. Counselor: ಇಂದಿನ ಸಮಾಜಕ್ಕೆ ಬಹು ಮುಖ್ಯವಾಗಿ ಬೇಕಾಗಿರುವುದು ಆಪ್ತಸಮಾಲೋಚನೆ. ಸಲಹೆಗಾರನು ಕೇಳುವ, ಸಹಾನುಭೂತಿ, ತಾಳ್ಮೆ, ವಿಶ್ಲೇಷಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಇದರಿಂದಾಗಿ ರೋಗಿಗಳ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 68

    Career In Psychology: ಸೈಕಾಲಜಿ ಪದವೀಧರರಿಗೆ ಭರ್ಜರಿ ಅವಕಾಶ, ಈ 7 ಕ್ಷೇತ್ರಗಳಲ್ಲಿ ವೃತ್ತಿ ರೂಪಿಸಿಕೊಳ್ಳಬಹುದು

    5. Psychology Careers In Education: ಮನೋವಿಜ್ಞಾನ ಪದವೀಧರರು ಸೈಕಾಲಜಿ ಲೆಕ್ಚರರ್ ಆಗಿ ಕೆಲಸ ಮಾಬಹುದು. ಜೊತೆಗೆ ಶೈಕ್ಷಣಿಕ ಚಿಕಿತ್ಸೆ, ಶೈಕ್ಷಣಿಕ ಮನೋವಿಜ್ಞಾನ ಮತ್ತು ಶಿಕ್ಷಣದೊಳಗಿನ ಸಾಮಾಜಿಕ ಕೆಲಸ, ಪ್ರಾಥಮಿಕ, ಮಾಧ್ಯಮಿಕ ಅಥವಾ ಕಾಲೇಜು, ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣದಲ್ಲಿ ಕೆಲಸ ಮಾಡಬಹುದಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 78

    Career In Psychology: ಸೈಕಾಲಜಿ ಪದವೀಧರರಿಗೆ ಭರ್ಜರಿ ಅವಕಾಶ, ಈ 7 ಕ್ಷೇತ್ರಗಳಲ್ಲಿ ವೃತ್ತಿ ರೂಪಿಸಿಕೊಳ್ಳಬಹುದು

    6. Careers In Research: ಸಂಶೋಧಕರಾಗಿಯೂ ವೃತ್ತಿ ರೂಪಿಸಿಕೊಳ್ಳಬಹುದು. ವೈದ್ಯಕೀಯ ಕ್ಷೇತ್ರ, ಔಷಧಿ ಕ್ಷೇತ್ರದಲ್ಲಿ ಅಧ್ಯಯನದ ಅಗತ್ಯವಿದೆ. ಹೀಗಾಗಿ ಸಂಶೋಧಕರಿಗೆ ಸಾಕಷ್ಟು ಬೇಡಿಕೆ ಇದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 88

    Career In Psychology: ಸೈಕಾಲಜಿ ಪದವೀಧರರಿಗೆ ಭರ್ಜರಿ ಅವಕಾಶ, ಈ 7 ಕ್ಷೇತ್ರಗಳಲ್ಲಿ ವೃತ್ತಿ ರೂಪಿಸಿಕೊಳ್ಳಬಹುದು

    7. HR ಡಿಪಾರ್ಟ್ ಮೆಂಟ್ ಅಲ್ಲೂ ಕೆಲಸ ಮಾಡಬಹುದು. ಮಾನವ ಸಂಪನ್ಮೂಲ ಮತ್ತು ಸಂವಹನ ವೃತ್ತಿಯು ಮನೋವಿಜ್ಞಾನ ಪದವಿಯೊಂದಿಗೆ ಉತ್ತಮ ಆಯ್ಕೆಯಾಗಿದೆ. ಇದು ಉದ್ಯೋಗಿಯ ಮಾನಸಿಕ ಆರೋಗ್ಯ, ವೃತ್ತಿಪರ ಅಭಿವೃದ್ಧಿ, ತರಬೇತಿ, ನೇಮಕಾತಿ, PR, ವೇತನದಾರರ ಮತ್ತು ಆಂತರಿಕ ಸಂವಹನಗಳಂತಹ ಕ್ಷೇತ್ರಗಳನ್ನು ಒಳಗೊಂಡಿವೆ. (ಸಾಂಕೇತಿಕ ಚಿತ್ರ)

    MORE
    GALLERIES