Competitive Exams: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಈ ತಪ್ಪುಗಳನ್ನು ಮಾಡಬಾರದು
ಸರ್ಕಾರಿ ಕೆಲಸದ ಆಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿರುತ್ತಾರೆ. ಈಗ ಸಾಕಷ್ಟು ರಾಜ್ಯ, ಕೇಂದ್ರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕೆಲವರು ಕೋಚಿಂಗ್ ಸೆಂಟರ್ ಗಳಿಗೆ ತೆರಳಿ ಅಭ್ಯಾಸ ಮಾಡುತ್ತಿದ್ದರೆ, ಕೆಲವರು ಮನೆಯಲ್ಲೇ ತಯಾರಿ ಆರಂಭಿಸಿದ್ದಾರೆ.
ನೀವು ಮನೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ? ಹಾಗಾದರೆ ನಿಮಗೆ ಒಂದಷ್ಟು ಸಲಹೆಗಳು ಇಲ್ಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮನೆಯಲ್ಲಿಯೇ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಇಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸಿದರೆ ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಸಾಂಕೇತಿಕ ಚಿತ್ರ
2/ 7
ಮೊದಲು ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ಬ್ಯಾಂಕಿಂಗ್, KAS, UPSC ಸೇರಿದಂತೆ ಮುಂತಾದ ಹಲವು ಪರೀಕ್ಷೆಗಳಿವೆ. ಬ್ಯಾಂಕಿಂಗ್ ಪರೀಕ್ಷೆಗೆ ಗಣಿತ ಮತ್ತು ಇಂಗ್ಲಿಷ್ ಹೆಚ್ಚು ಮುಖ್ಯ.
3/ 7
ಯಾವುದೇ ಪರೀಕ್ಷೆಗೆ ನಿಮ್ಮ ಸ್ವಂತ ಟಿಪ್ಪಣಿಗಳನ್ನು ಸಿದ್ಧಪಡಿಸುವುದು ಅತ್ಯಗತ್ಯ. ನೀವು ಒಮ್ಮೆ ಸಿದ್ಧಪಡಿಸಿದರೆ, ಮುಂದಿನ ಬಾರಿ ಓದುವಾಗ ನೀವು ಪ್ರಶ್ನೆಗಳಿಗೆ ಉತ್ತರಗಳನ್ನು ಸುಲಭವಾಗಿ ನೆನಪಿಸಿಕೊಳ್ಳಬಹುದು. ನೀವು ಸರಿಯಾಗಿ ಅಭ್ಯಾಸ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ಆದ್ದರಿಂದ ಪರೀಕ್ಷೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ.
4/ 7
ಗಣಿತ ಇಷ್ಟ ಇಲ್ಲದವರಿಗೆ ಬ್ಯಾಂಕ್ ಪರೀಕ್ಷೆ ಕಷ್ಟ. ಅಂಥವರು ಬ್ಯಾಂಕ್ ಪರೀಕ್ಷೆಗಳ ಹೊರತಾಗಿ ಬೇರೆ ಪರೀಕ್ಷೆಗಳಿಗೆ ತಯಾರಿ ನಡೆಸಿದರೆ ಉಪಯೋಗವಾಗುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪರೀಕ್ಷೆಯನ್ನು ಆರಿಸಿ. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಅಭ್ಯಾಸ ಮಾಡುವುದು ಉತ್ತಮ. (ಸಾಂಕೇತಿಕ ಚಿತ್ರ)
5/ 7
ಯಾರೋ ಹೇಳಿದ್ದಕ್ಕೆ ಪರೀಕ್ಷೆ ಬರೆಯಬೇಡಿ. ನಿಮಗೆ ಆಸಕ್ತಿ ಇದ್ದರೆ ಮಾತ್ರ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ತಯಾರಾಗಿ. ಕೇವಲ ಒಂದು ಪರೀಕ್ಷೆಗೆ ತಯಾರಿ ನಡೆಸಿ ವರ್ಷಗಳನ್ನು ವ್ಯರ್ಥ ಮಾಡಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಲು ಹಲವು ಮಾರ್ಗಗಳಿವೆ. (ಸಾಂಕೇತಿಕ ಚಿತ್ರ)
6/ 7
ಸಿಲಬಸ್ ಅನ್ನು ಸಂಪೂರ್ಣವಾಗಿ ತಿಳಿದುಕೊಂಡು ಅಭ್ಯಾಸ ಆರಂಭಿಸಿ.. ಇಲ್ಲದಿದ್ದರೆ.. ಸಮಯವಷ್ಟೇ ಅಲ್ಲ.. ಹಣವೂ ವ್ಯರ್ಥವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಪುಸ್ತಕಗಳನ್ನು ಓದಲು ಪ್ರಯತ್ನಿಸಬೇಡಿ.. ಕೆಲವು ಪ್ರಮಾಣಿತ ಪುಸ್ತಕಗಳನ್ನು ತೆಗೆದುಕೊಂಡು ಅಭ್ಯಾಸ ಮಾಡಿ. ಹತ್ತು ಪುಸ್ತಕಗಳನ್ನು ಓದುವ ಬದಲು ಒಂದು ಪುಸ್ತಕವನ್ನು ಹತ್ತು ಬಾರಿ ಓದುವುದು ಉತ್ತಮ
7/ 7
ಅಂತಿಮವಾಗಿ, ದಿನಪತ್ರಿಕೆಗಳನ್ನು ಓದಿ ಪ್ರಸ್ತುತ ವಿದ್ಯಮಾನಗಳನ್ನು ನೋಟ್ಸ್ ಆಗಿ ಬರೆಯಿರಿ. ತಿಂಗಳಿಗೊಮ್ಮೆ ಬರುವ ನಿಯತಕಾಲಿಕೆಗಳನ್ನು ಅವಲಂಬಿಸುವ ಬದಲು, ದಿನನಿತ್ಯದ ವಿದ್ಯಮಾನಗಳನ್ನು ಹೀಗೆ ಬರೆದುಕೊಂಡರೆ.. ಪರೀಕ್ಷೆಯ ದಿನಾಂಕದಂದು ನೋಟ್ ಬುಕ್ ರೆಫರ್ ಮಾಡಿದರೆ ಸಾಕು ಓದಿದ್ದು ತಕ್ಷಣ ನೆನಪಾಗುತ್ತದೆ.