BTM Course: ಪಿಯು ಬಳಿಕ ಈ ಡಿಗ್ರಿ ಮಾಡಿದ್ರೆ ಭರ್ಜರಿ ಉದ್ಯೋಗಾವಕಾಶಗಳು, ಲಕ್ಷಗಳಲ್ಲಿ ಸಂಬಳ ಪಕ್ಕಾ

ಪ್ರಸ್ತುತ ದ್ವಿತೀಯ ಪಿಯು ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆ ಮುಗಿದ ಬಳಿಕ ಮುಂದೇನು ಎಂಬ ಯೋಚನೆ ವಿದ್ಯಾರ್ಥಿಗಳ ಮನದಲ್ಲಿ ಮೂಡಿರುತ್ತದೆ. ಇತ್ತೀಚೆಗೆ ಹೆಚ್ಚಿನ ವಿದ್ಯಾರ್ಥಿಗಳು ಹೊಸ ರೀತಿಯ ಪದವಿಗಳನ್ನು ಮಾಡಲು ಆಸಕ್ತರಾಗಿದ್ದಾರೆ. BSc, B.Com, BA, BE ಪದವಿಗಳನ್ನು ಮಾಡುವ ಬದಲು ಭವಿಷ್ಯದಲ್ಲಿ ಬೇಡಿಯಲ್ಲಿ ಉಳಿಯುವ ಕೋರ್ಸ್ ಗಳನ್ನು ಮಾಡಲು ಆಸಕ್ತಿ ತೋರುತ್ತಿದ್ದಾರೆ.

First published:

  • 17

    BTM Course: ಪಿಯು ಬಳಿಕ ಈ ಡಿಗ್ರಿ ಮಾಡಿದ್ರೆ ಭರ್ಜರಿ ಉದ್ಯೋಗಾವಕಾಶಗಳು, ಲಕ್ಷಗಳಲ್ಲಿ ಸಂಬಳ ಪಕ್ಕಾ

    ಹೊಸ ರೀತಿಯ ಕೋರ್ಸ್ ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗಾಗಿ ಮಾಹಿತಿ ಇಲ್ಲಿದೆ. ನಾವಿಂದು ಹೇಳಲಿರುವ ಹೊಸ ಕೋರ್ಸ್ BTM ಅಥವಾ BTTM. ಬ್ಯಾಚುಲರ್ ಆಫ್ ಟೂರಿಸಂ ಮ್ಯಾನೇಜ್ ಮೆಂಟ್ (BTM) ಅಥವಾ ಕೆಲವಡೆ ಈ ಕೋರ್ಸ್ ಅನ್ನು ಬ್ಯಾಚುಲರ್ ಆಫ್ ಟೂರಿಸಂ ಅಂಡ್ ಟ್ರಾವೆಲ್ ಮ್ಯಾನೇಜ್ಮೆಂಟ್ (BTTM) ಅಂತಲೂ ಎನ್ನುತ್ತಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 27

    BTM Course: ಪಿಯು ಬಳಿಕ ಈ ಡಿಗ್ರಿ ಮಾಡಿದ್ರೆ ಭರ್ಜರಿ ಉದ್ಯೋಗಾವಕಾಶಗಳು, ಲಕ್ಷಗಳಲ್ಲಿ ಸಂಬಳ ಪಕ್ಕಾ

    ಬ್ಯಾಚುಲರ್ ಆಫ್ ಟೂರಿಸಂ ಮ್ಯಾನೇಜ್ ಮೆಂಟ್ ಎಂಬುದು 3 ವರ್ಷಗಳ ಕೋರ್ಸ್ ಆಗಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ವ್ಯಾಪಾರ ನಿರ್ವಹಣೆ, ಮಾರ್ಕೆಟಿಂಗ್ ಮೂಲಭೂತ ಅಂಶಗಳು, ಮಾನವ ಸಂಪನ್ಮೂಲಗಳು, ಯೋಜನಾ ನಿರ್ವಹಣೆ, ಸುಸ್ಥಿರತೆ, ಸಾಂಸ್ಕೃತಿಕ ಅರಿವು ಮತ್ತು ಹೆಚ್ಚಿನದನ್ನು ಕಲಿಸಲಾಗುತ್ತದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 37

    BTM Course: ಪಿಯು ಬಳಿಕ ಈ ಡಿಗ್ರಿ ಮಾಡಿದ್ರೆ ಭರ್ಜರಿ ಉದ್ಯೋಗಾವಕಾಶಗಳು, ಲಕ್ಷಗಳಲ್ಲಿ ಸಂಬಳ ಪಕ್ಕಾ

    ಪ್ರವಾಸೋದ್ಯಮವು ಅನೇಕ ಸ್ಥಳಗಳಿಗೆ ಆರ್ಥಿಕ ಪ್ರಯೋಜನಗಳನ್ನು ಒದಗಿಸುತ್ತೆ. ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಸಾಮರ್ಥ್ಯವನ್ನು ಪ್ರವಾಸೋದ್ಯಮ ಹೊಂದಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಪದವೀಧರರಾದರೆ ಹೇರಳವಾಗಿ ವೃತ್ತಿ ಅವಕಾಶಗಳು ಸಿಗುತ್ತವೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 47

    BTM Course: ಪಿಯು ಬಳಿಕ ಈ ಡಿಗ್ರಿ ಮಾಡಿದ್ರೆ ಭರ್ಜರಿ ಉದ್ಯೋಗಾವಕಾಶಗಳು, ಲಕ್ಷಗಳಲ್ಲಿ ಸಂಬಳ ಪಕ್ಕಾ

    ಬ್ಯಾಚುಲರ್ ಆಫ್ ಟೂರಿಸಂ ಮ್ಯಾನೇಜ್ ಮೆಂಟ್ ಮಾಡಲು ಯಾವೆಲ್ಲಾ ಅರ್ಹತೆಗಳಿರಬೇಕು ಎಂದು ನೋಡುವುದಾದರೆ.. ವಿದ್ಯಾರ್ಥಿಯು ವಾಣಿಜ್ಯ ವಿಭಾಗದಲ್ಲಿ ಸೆಕೆಂಡ್ ಪಿಯು ಮಾಡಿರಬೇಕು. ಒಟ್ಟಾರೆಯಾಗಿ ಕನಿಷ್ಠ 60% ಅಂಕಗಳನ್ನು ಹೊಂದಿರಬೇಕು. SC/ST ಮತ್ತು ಒಬಿಸಿಗೆ ಸೇರಿದ ಅಭ್ಯರ್ಥಿಗಳಿಗೆ ಶೇಕಡಾವಾರು ಸಡಿಲಿಕೆಯನ್ನು ನೀಡಲಾಗುತ್ತದೆ.

    MORE
    GALLERIES

  • 57

    BTM Course: ಪಿಯು ಬಳಿಕ ಈ ಡಿಗ್ರಿ ಮಾಡಿದ್ರೆ ಭರ್ಜರಿ ಉದ್ಯೋಗಾವಕಾಶಗಳು, ಲಕ್ಷಗಳಲ್ಲಿ ಸಂಬಳ ಪಕ್ಕಾ

    ಯಾವುದೇ ಉನ್ನತ ವಿಶ್ವವಿದ್ಯಾನಿಲಯದಲ್ಲಿ ಬ್ಯಾಚುಲರ್ ಆಫ್ ಟೂರಿಸಂ ಮ್ಯಾನೇಜ್ ಮೆಂಟ್ ಕೋರ್ಸ್ ಗೆ ಅಡ್ಮಿಷನ್ ಪಡೆಯಬಹುದು. ಬಹುತೇಕ ಕಾಲೇಜುಗಳು ಅಂಕಗಳ ಆಧಾರದ ಮೇಲೆ ಪ್ರವೇಶವನ್ನು ನೀಡುತ್ತವೆ. ಕೆಲ ಕಾಲೇಜುಗಳಲ್ಲಿ ಪ್ರವೇಶ ಪರೀಕ್ಷೆ ಪಾಸ್ ಆಗಬೇಕಾಗುತ್ತದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 67

    BTM Course: ಪಿಯು ಬಳಿಕ ಈ ಡಿಗ್ರಿ ಮಾಡಿದ್ರೆ ಭರ್ಜರಿ ಉದ್ಯೋಗಾವಕಾಶಗಳು, ಲಕ್ಷಗಳಲ್ಲಿ ಸಂಬಳ ಪಕ್ಕಾ

    ಬ್ಯಾಚುಲರ್ ಆಫ್ ಟೂರಿಸಂ ಮ್ಯಾನೇಜ್ ಮೆಂಟ್ ಓದಿದವರು ಸಾಕಷ್ಟು ಹುದ್ದೆಗಳನ್ನು ನಿರ್ವಹಿಸಬಹುದು. ಟ್ರಾವೆಲ್ ಏಜೆಂಟ್ ಆದರೆ ಸಂಬಳ 1.85 ಲಕ್ಷ ರೂ. ಇರುತ್ತೆ. ಟೂರ್ ಮ್ಯಾನೇಜರ್ - ಸಂಬಳ 2.8 ಲಕ್ಷ, ಕಮರ್ಷಿಯಲ್ ಮ್ಯಾನೇಜರ್ - ಸಂಬಳ 6.81 ಲಕ್ಷ ಇರುತ್ತೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 77

    BTM Course: ಪಿಯು ಬಳಿಕ ಈ ಡಿಗ್ರಿ ಮಾಡಿದ್ರೆ ಭರ್ಜರಿ ಉದ್ಯೋಗಾವಕಾಶಗಳು, ಲಕ್ಷಗಳಲ್ಲಿ ಸಂಬಳ ಪಕ್ಕಾ

    ಪ್ರವಾಸೋದ್ಯಮ ಅಧಿಕಾರಿಯಾದರೆ ಸಂಬಳ 2.4 ಲಕ್ಷ, ಮಾಹಿತಿ ಸಹಾಯಕ - ಸಂಬಳ 2.4 ಲಕ್ಷ ರೂ. ಇರುತ್ತದೆ. ಸರ್ಕಾರಿ ಪ್ರವಾಸೋದ್ಯಮ ಇಲಾಖೆಯಲ್ಲೂ ಉದ್ಯೋಗಗಳನ್ನು ಪಡೆಯಬಹುದು. ಸ್ಟಾರ್ ಹೋಟೆಲ್ ಗಳಲ್ಲೂ ಈ ಪದವಿ ಮಾಡಿದವರಿಗೆ ಸಂಬಳ ಲಕ್ಷಗಳಲ್ಲಿ ಇದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES