BSF Job Salary: ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ಗೆ ಆಯ್ಕೆಯಾದರೆ ಎಷ್ಟು ಸಂಬಳ ಸಿಗುತ್ತೆ, ಯಾವೆಲ್ಲಾ ಸೌಲಭ್ಯಗಳಿವೆ?

ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನಲ್ಲಿ (BSF) ಉದ್ಯೋಗಕ್ಕಾಗಿ ಪ್ರತಿವರ್ಷ ಸಾವಿರಾರು ಅಭ್ಯರ್ಥಿಗಳು ಪ್ರಯತ್ನಿಸುತ್ತಾರೆ. BSF ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (CAPF) ಒಂದು ಭಾಗವಾಗಿದೆ. ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದೊಂದಿಗೆ ಭಾರತದ ಗಡಿಗಳನ್ನು ಕಾಪಾಡುವ ಗೌರವಾನ್ವಿತ ಸಂಸ್ಥೆ ಇದಾಗಿದೆ.

First published:

  • 17

    BSF Job Salary: ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ಗೆ ಆಯ್ಕೆಯಾದರೆ ಎಷ್ಟು ಸಂಬಳ ಸಿಗುತ್ತೆ, ಯಾವೆಲ್ಲಾ ಸೌಲಭ್ಯಗಳಿವೆ?

    BSF ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಉತ್ತಮ ಸಂಬಳದ ಪ್ಯಾಕೇಜ್ ಅನ್ನು ಪಡೆಯುತ್ತಾರೆ. ಈ ಉದ್ಯೋಗ ಮಾಡಲು ಬಯಸುವ ಅಭ್ಯರ್ಥಿಗಳು ಸಂಬಳದ ವಿವರಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ವೇತನವು ಮೂಲ ವೇತನ, ಹೆಚ್ಚುವರಿ ಭತ್ಯೆಗಳು ಮತ್ತು ಇತರ ಪ್ರಯೋಜನಗಳನ್ನು ಒಳಗೊಂಡಿರುತ್ತದೆ.

    MORE
    GALLERIES

  • 27

    BSF Job Salary: ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ಗೆ ಆಯ್ಕೆಯಾದರೆ ಎಷ್ಟು ಸಂಬಳ ಸಿಗುತ್ತೆ, ಯಾವೆಲ್ಲಾ ಸೌಲಭ್ಯಗಳಿವೆ?

    ಮುಂಬರುವ ಬಿಎಸ್ ಎಫ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಸಂಬಳದ ಬಗ್ಗೆ ತಿಳಿಯಲು ಆಸಕ್ತಿ ಹೊಂದಿರಬಹುದು. ಯಾವುದೇ ಪರೀಕ್ಷೆಗೆ ಸಂಪೂರ್ಣವಾಗಿ ತಯಾರಿ ಮಾಡಲು ಅಭ್ಯರ್ಥಿಗಳಿಗೆ ಸಂಬಳವೂ ಒಂದು ಪ್ರೇರಕ ಅಂಶವಾಗಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 37

    BSF Job Salary: ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ಗೆ ಆಯ್ಕೆಯಾದರೆ ಎಷ್ಟು ಸಂಬಳ ಸಿಗುತ್ತೆ, ಯಾವೆಲ್ಲಾ ಸೌಲಭ್ಯಗಳಿವೆ?

    ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ಸಂಬಳದ ವಿವರಗಳನ್ನು ತಿಳಿಯುವುದು ನಿಮ್ಮ ಸೇವೆಗಾಗಿ ನೀವು ತಿಂಗಳಿಗೆ ಎಷ್ಟು ಸಂಬಳ ಪಡೆಯುತ್ತೀರಿ ಎಂಬ ಸ್ಪಷ್ಟತೆಯನ್ನು ನೀಡುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    BSF Job Salary: ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ಗೆ ಆಯ್ಕೆಯಾದರೆ ಎಷ್ಟು ಸಂಬಳ ಸಿಗುತ್ತೆ, ಯಾವೆಲ್ಲಾ ಸೌಲಭ್ಯಗಳಿವೆ?

    BSF ನಲ್ಲಿ ಒಂದು ತಿಂಗಳ ಸರಾಸರಿ ವೇತನವು 21,700/- ರಿಂದ 69,100/- ರ ನಡುವೆ ಇರಬಹುದು. ಉದ್ಯೋಗದಲ್ಲಿನ ನಿಮ್ಮ ಕಾರ್ಯಕ್ಷಮತೆ ಅವಲಂಬಿಸಿ ಸಂಬಳ ಹೆಚ್ಚಾಗಬಹುದು. ಪ್ರತಿ ತಿಂಗಳ ಸಂಬಳವು ಅನೇಕ ಸವಲತ್ತುಗಳು, ಪ್ರಯೋಜನಗಳನ್ನು ಒಳಗೊಂಡಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    BSF Job Salary: ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ಗೆ ಆಯ್ಕೆಯಾದರೆ ಎಷ್ಟು ಸಂಬಳ ಸಿಗುತ್ತೆ, ಯಾವೆಲ್ಲಾ ಸೌಲಭ್ಯಗಳಿವೆ?

    ಅಭ್ಯರ್ಥಿಯ ಹುದ್ದೆಯನ್ನು ಅವಲಂಬಿಸಿ BSF ಸಂಬಳದ ರಚನೆಯು ಬದಲಾಗುತ್ತದೆ. 7 ನೇ ವೇತನ ಆಯೋಗದ ನಂತರ ವೇತನ ರಚನೆಯನ್ನು ಪರಿಷ್ಕರಿಸಲಾಯಿತು. ಇದು ವೇತನದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಯಿತು. ಗಡಿ ಭದ್ರತಾ ಪಡೆಯೊಳಗಿನ ಬಹು ಹುದ್ದೆಗಳ ನಡುವೆ ವೇತನದಲ್ಲಿ ಭಾರಿ ವ್ಯತ್ಯಾಸವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    BSF Job Salary: ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ಗೆ ಆಯ್ಕೆಯಾದರೆ ಎಷ್ಟು ಸಂಬಳ ಸಿಗುತ್ತೆ, ಯಾವೆಲ್ಲಾ ಸೌಲಭ್ಯಗಳಿವೆ?

    BSF ಟ್ರೇಡ್ಸ್ ಮ್ಯಾನ್ ನೇಮಕಾತಿಯಲ್ಲಿ ನೀಡಲಾಗುವ ಗ್ರೇಡ್ ಪೇ 2000/- ರೂ. ಆಗಿದೆ. ಇದರ ಹೊರತಾಗಿ BSF ಕಾನ್ ಸ್ಟೇಬಲ್ ಗಳು ವಸತಿ ಭತ್ಯೆ, ತುಟ್ಟಿ ಭತ್ಯೆ ಮುಂತಾದ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    BSF Job Salary: ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ಗೆ ಆಯ್ಕೆಯಾದರೆ ಎಷ್ಟು ಸಂಬಳ ಸಿಗುತ್ತೆ, ಯಾವೆಲ್ಲಾ ಸೌಲಭ್ಯಗಳಿವೆ?

    2023-24 ಸಾಲಿನ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. 1284 ಕಾನ್ಸ್ ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಧಿಕೃತ ವೆಬ್ ಸೈಟ್ www.bsf.nic.in ಅರ್ಜಿ ಸಲ್ಲಿಸಬಹುದು. ಮಾರ್ಚ್ 27ರ ಒಳಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES