Career Tips: ಉದ್ಯೋಗ ಹುಡುಕುವಾಗ ಅಭ್ಯರ್ಥಿಗಳು ಈ 7 ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು

ಕೆಲಸ ಹುಡುಕಲು ಶುರು ಮಾಡುವ ಪ್ರತಿಯೊಬ್ಬರು ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಖಾಲಿ ಇರುವ ಪೋಸ್ಟ್ ಗೆ ರೆಸ್ಯೂಮ್ ಕಳಹಿಸುವುದಷ್ಟೇ ಎಂದು ತಿಳಿಯಬೇಡಿ. ಉದ್ಯೋಗ ಹುಡುಕುವ ಪ್ರಕ್ರಿಯೆಯಲ್ಲಿರುವಾಗ ಅನೇಕ ವಿಷಯಗಳ ಕಡೆ ಗಮನ ಕೊಡಬೇಕು. ಆ ಅಂಶಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

First published:

  • 17

    Career Tips: ಉದ್ಯೋಗ ಹುಡುಕುವಾಗ ಅಭ್ಯರ್ಥಿಗಳು ಈ 7 ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು

    1) ಕೇವಲ ಇಂಟರ್ ನೆಟ್ ಅನ್ನು ಅವಲಂಬಿಸಬೇಡಿ: ಕೆಲಸ ಹುಡುಕಲು ಅಂತರ್ಜಾಲವನ್ನು ಮಾತ್ರ ಬಳಸಬೇಡಿ. ನಿಮ್ಮ ವೈಯಕ್ತಿಕ ನೆಟ್ ವರ್ಕ್ ಅನ್ನೂ ಬಳಸಿ. ನಿಮ್ಮ ಕ್ಷೇತ್ರದಲ್ಲಿ ಇರುವವರು, ಹಿರಿಯರು, ಕಾಲೇಜು ಸೀನಿಯರ್ಸ್ ಮೂಲಕ ಕೆಲಸ ಖಾಲಿ ಇರುವ ಬಗ್ಗೆ ವಿಚಾರಿಸಿ.

    MORE
    GALLERIES

  • 27

    Career Tips: ಉದ್ಯೋಗ ಹುಡುಕುವಾಗ ಅಭ್ಯರ್ಥಿಗಳು ಈ 7 ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು

    2) ರೆಸ್ಯೂಮ್ ಅಪ್ ಡೇಟ್ ಆಗಿರಲಿ: ನಿಮ್ಮ ರೆಸ್ಯೂಮ್ ಫಾಂಟ್ ಮೇಲೆ ಹೆಚ್ಚು ಗಮನ ಕೊಡುವುದು ಬೇಡ, ಸಂದರ್ಶಕರು ಅದನ್ನು ನೋಡಿ ಕೆಲಸಕ್ಕಾಗಿ ಕರೆ ಮಾಡುವುದಿಲ್ಲ. ಆದ್ದರಿಂದ ನಿಮ್ಮ ರೆಸ್ಯೂಮ್ ಅನ್ನು ಸರಳವಾಗಿ ಇರಿಸಿ. ಡಿಜಿಟಲ್ ಯುಗದಲ್ಲಿ ಸರಿಯಾದ ಕೀವರ್ಡ್ಸ್ ಬಳಸಿ. ನಿಮ್ಮ ಬಗ್ಗೆ ಮಾಹಿತಿ ಸ್ಪಷ್ಟವಾಗಿರಲಿ.

    MORE
    GALLERIES

  • 37

    Career Tips: ಉದ್ಯೋಗ ಹುಡುಕುವಾಗ ಅಭ್ಯರ್ಥಿಗಳು ಈ 7 ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು

    3) ಸೆಲ್ಫ್ ಮಾರ್ಕೆಟಿಂಗ್ ಇರಲಿ: ನಿಮ್ಮ ಸಾಧನೆಗಳು ಮೇಲೆ ಗಮನ ಕೇಂದ್ರೀಕರಿಸುವುದು ಮತ್ತೊಂದು ಮುಖ್ಯವಾದ ಸಂಗತಿ. ನೀವು ನರ್ಸ್ ಅಥವಾ ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದರೆ, ನಿಮ್ಮ ಉದ್ಯೋಗ ವಿವರಣೆಯ ಬಗ್ಗೆ, ಆ ಕ್ಷೇತ್ರದಲ್ಲಿ ನಿಮ್ಮ ಸಾಧನೆಯ ಬಗ್ಗೆ ರೆಸ್ಯೂಮ್ ನಲ್ಲಿ ಬರೆಯಿರಿ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 47

    Career Tips: ಉದ್ಯೋಗ ಹುಡುಕುವಾಗ ಅಭ್ಯರ್ಥಿಗಳು ಈ 7 ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು

    4) ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನು ಕ್ಲೀನ್ ಆಗಿ ಇಡಿ: ಕಂಪನಿಗಳು ಸಾಮಾನ್ಯವಾಗಿ ನೇಮಕಾತಿ ಮಾಡುವ ಮೊದಲು ಅಭ್ಯರ್ಥಿಯನ್ನು ಗೂಗಲ್ ನಲ್ಲಿ ಹುಡುಕುತ್ತವೆ. ಅಥವಾ ಲಿಂಕ್ಡ್ ಇನ್, ನೌಕರಿ ಡಾಟ್ ಕಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸರ್ಚ್ ಮಾಡುತ್ತವೆ. ಹಾಗಾಗಿ ನಿಮ್ಮ ಖಾತೆಗಳಲ್ಲಿರುವ ಅನಗತ್ಯ ಮಾಹಿತಿ, ಫೋಟೋ-ವಿಡಿಯೋಗಳನ್ನು ಡಿಲೀಟ್ ಮಾಡಿ.

    MORE
    GALLERIES

  • 57

    Career Tips: ಉದ್ಯೋಗ ಹುಡುಕುವಾಗ ಅಭ್ಯರ್ಥಿಗಳು ಈ 7 ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು

    5) ಜಾಬ್ ಇಂಟರ್ ವ್ಯೂನಲ್ಲಿ ವೃತ್ತಿಪರವಾಗಿ ನಡೆದುಕೊಳ್ಳಿ: ಸಂದರ್ಶನಕ್ಕೆ ಹೋಗುತ್ತಿರುವ ಕಂಪನಿಯ ಬಗ್ಗೆ ಸರಿಯಾಗಿ ತಿಳಿದುಕೊಂಡಿರಿ. ಮಾತುಕತೆ, ನಡೆ-ನುಡಿ ವೃತ್ತಿಪರವಾಗಿರಲಿ. ಕೆಟ್ಟ ಅಭಿಪ್ರಾಯ ಬರುವಂತೆ ನಡೆದುಕೊಳ್ಳಬೇಡಿ.

    MORE
    GALLERIES

  • 67

    Career Tips: ಉದ್ಯೋಗ ಹುಡುಕುವಾಗ ಅಭ್ಯರ್ಥಿಗಳು ಈ 7 ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು

    6) ಇಂಟರ್ ವ್ಯೂ ಬಳಿಕ ತಾಳ್ಮೆಯಿಂದಿರಿ: ಸಂದರ್ಶನ ಮುಗಿದ ಬಳಿಕ ಒಂದು ವಾರದಲ್ಲಿ ಕರೆ ಮಾಡುತ್ತೇವೆ ಎಂದು ಅವರು ಹೇಳಿರುತ್ತಾರೆ. ಅದಕ್ಕಾಗಿ ನೀವು ತಾಳ್ಮೆಯಿಂದ ಕಾಯಬೇಕಿದೆ. ಮೊದಲೇ ಅನಗತ್ಯವಾಗಿ ಕರೆ ಮಾಡಿ ವಿಚಾರಿಸಬೇಡಿ. ಸಂದರ್ಶಕನ ಮರುದಿನವೇ ಕರೆ ಮಾಡಲಿ ಎಂದು ಬಯಸಬೇಡಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Career Tips: ಉದ್ಯೋಗ ಹುಡುಕುವಾಗ ಅಭ್ಯರ್ಥಿಗಳು ಈ 7 ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು

    7) ರಿಜೆಕ್ಟ್ ಆದರೆ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ: ಒಂದು ಕೆಲಸಕ್ಕೆ ಹಲವರು ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಒಬ್ಬರಿಗೆ ಮಾತ್ರ ಕೆಲಸ ಸಿಗುತ್ತೆ. ಹಾಗಾಗಿ ಕೆಲಸ ಸಿಗದಿದ್ದರೆ ಸ್ವಸಂಶಯ ಬೇಡ. ತಪ್ಪುಗಳಾಗಿದ್ದರೆ ಅದರಿಂದ ಕಲಿಯಿರಿ, ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ. (ಸಾಂದರ್ಭಿಕ ಚಿತ್ರ)

    MORE
    GALLERIES