Fake Websites: ಆನ್​​ಲೈನ್​​ ಕೋರ್ಸ್​ಗಳನ್ನು ಮಾಡುವ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರಿಕೆ

ಆನ್ ಲೈನ್ ಕೋರ್ಸ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ, ನಕಲಿ ಕೋರ್ಸ್ ಗಳನ್ನು ನೀಡುವ ಸಂಸ್ಥೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇ-ಲರ್ನಿಂಗ್ ಮೂಲಕ ಯಾವುದೇ ಕೋರ್ಸ್ ಅನ್ನು, ಸಂಸ್ಥೆಯನ್ನು ಆಯ್ಕೆ ಮಾಡುವ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಸಮಯ, ಹಣ ಮತ್ತು ಶ್ರಮ ವ್ಯರ್ಥವಾಗುವುದನ್ನು ತಪ್ಪಿಸಬಹುದು.

First published:

  • 17

    Fake Websites: ಆನ್​​ಲೈನ್​​ ಕೋರ್ಸ್​ಗಳನ್ನು ಮಾಡುವ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರಿಕೆ

    1. ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ನಕಲಿ ವೆಬ್ ಸೈಟ್ ಗಳು ಇಂಟರ್ನೆಟ್ನಲ್ಲಿವೆ. ಆದ್ದರಿಂದ ಕೋರ್ಸ್ ಗೆ ಸೇರುವ ಮೊದಲು ವೆಬ್ ಸೈಟ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ. ವೆಬ್ ಸೈಟ್ ವಿಳಾಸದಲ್ಲಿ ಕಾಗುಣಿತ ದೋಷವಿದ್ದರೆ ಅವು ಫೇಕ್ ಇರಬಹುದು.

    MORE
    GALLERIES

  • 27

    Fake Websites: ಆನ್​​ಲೈನ್​​ ಕೋರ್ಸ್​ಗಳನ್ನು ಮಾಡುವ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರಿಕೆ

    2. ಯಾವುದೇ ಆನ್ ಲೈನ್ ಕೋರ್ಸ್ ಮಾಡುವ ಮೊದಲು ಸಂಸ್ಥೆ ಅಥವಾ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪರಿಶೀಲಿನಿ. ಯಾವುದೇ ಶಿಕ್ಷಣ ಸಂಸ್ಥೆಯು ದೂರ ಶಿಕ್ಷಣ ಬ್ಯೂರೋ, ವಿಶ್ವವಿದ್ಯಾಲಯ ಅನುದಾನ ಆಯೋಗ ಮತ್ತು ಶಿಕ್ಷಣ ಸಚಿವಾಲಯದಿಂದ ಗುರುತಿಸಲ್ಪಟ್ಟಿದೆಯೇ ಎಂದು ತಿಳಿಯಿರಿ.

    MORE
    GALLERIES

  • 37

    Fake Websites: ಆನ್​​ಲೈನ್​​ ಕೋರ್ಸ್​ಗಳನ್ನು ಮಾಡುವ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರಿಕೆ

    3. ಕೋರ್ಸ್ ದಾಖಲಾತಿ ಸಮಯದಲ್ಲಿ, ಸಂಸ್ಥೆಗಳು ನೌಕರಿಯೂ ನೀಡುವ ಬಗ್ಗೆ ಹೆಚ್ಚಿನ ಜಾಹೀರಾತುಗಳನ್ನು ನೀಡುತ್ತವೆ. ಸಂಸ್ಥೆಯ ಪ್ಲೇಸ್ ಮೆಂಟ್ ದಾಖಲೆಯನ್ನು ನೀವೇ ಪರಿಶೀಲಿಸಿದರೆ ಉತ್ತಮ. ಯಾವುದೇ ಕೋರ್ಸ್ ಗೆ ಪ್ರವೇಶ ಪಡೆಯುವಾಗ ಹಳೆಯ ವಿದ್ಯಾರ್ಥಿಗಳೊಂದಿಗೆ ಮಾತನಾಡಿ. ಇದರಿಂದ ಸರಿಯಾದ ಮಾಹಿತಿ ದೊರೆಯುತ್ತದೆ.

    MORE
    GALLERIES

  • 47

    Fake Websites: ಆನ್​​ಲೈನ್​​ ಕೋರ್ಸ್​ಗಳನ್ನು ಮಾಡುವ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರಿಕೆ

    4. ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳು ಅರೆಕಾಲಿಕವಾಗಿ ಸಹ ಇ-ಲರ್ನಿಂಗ್ ಮಾಡಬಹುದು. ಅರೆಕಾಲಿಕವಾಗಿ ಅಧ್ಯಯನ ಮಾಡುವಾಗ, ಇದಕ್ಕಾಗಿ ನೀವು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಗಮನಿಸಿ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 57

    Fake Websites: ಆನ್​​ಲೈನ್​​ ಕೋರ್ಸ್​ಗಳನ್ನು ಮಾಡುವ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರಿಕೆ

    5. ಯಾವುದೇ ಆನ್ ಲೈನ್ ಕೋರ್ಸ್ ಮಾಡುವ ಮುನ್ನ ಸಾಧ್ಯವಾದರೆ ಅವರ ಕಚೇರಿಗೆ ಭೇಟಿ ನೀಡಿ. ಎಲ್ಲವನ್ನೂ ಇಂಟರ್ನೆಟ್ ನಲ್ಲಿಯೇ ಮಾಡಲು ಹೋಗಬೇಡಿ.

    MORE
    GALLERIES

  • 67

    Fake Websites: ಆನ್​​ಲೈನ್​​ ಕೋರ್ಸ್​ಗಳನ್ನು ಮಾಡುವ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರಿಕೆ

    6. ಇನ್ನು ಆನ್ ಲೈನ್ ಕೋರ್ಸ್ ಗಳಿಗೆ ಶುಲ್ಕ ಪಾವತಿಸುವ ಮುನ್ನ ಎಚ್ಚರಿಕೆಯಿಂದ ಇರಿ. ಕೆಲವು ನಕಲಿ ಸಂಸ್ಥೆಗಳು ನೀವು ಹಣ ಪಾವತಿಸಿದ ಕೂಡಲೇ ನಿಮ್ಮ ಸಂಪರ್ಕವನ್ನು ಕಡಿತಗೊಳಿಸುತ್ತವೆ.

    MORE
    GALLERIES

  • 77

    Fake Websites: ಆನ್​​ಲೈನ್​​ ಕೋರ್ಸ್​ಗಳನ್ನು ಮಾಡುವ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರಿಕೆ

    7. ಅನೇಕ ಸರ್ಕಾರಿ ಮತ್ತು ಪ್ರತಿಷ್ಟಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಉಚಿತ ಆನ್ ಲೈನ್ ಕೋರ್ಸ್ ಗಳನ್ನು ನೀಡುತ್ತವೆ. ಮೊದಲು ಇಂತಹ ಕೋರ್ಸ್ ಗಳನ್ನು ಮಾಡಿ. ಇದರಿಂದ ನಿಮಗೆ ಹೆಚ್ಚಿನ ಅನುಭವ ಹಾಗೂ ನಿಮ್ಮ ಸಾಮರ್ಥ್ಯದ ಬಗ್ಗೆಯೂ ವಾಸ್ತವದ ಅರಿವಾಗುತ್ತದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES