Future Degrees: ಈ 6 ಡಿಗ್ರಿಗಳನ್ನು ಓದಿದವರಿಗೆ ಭವಿಷ್ಯದಲ್ಲಿ ಡಿಮ್ಯಾಂಡ್ ಇರಲಿದೆ

ಸೆಕೆಂಡ್ ಪಿಯು ಬಳಿಕ ಮಾಡುವ 3 ಅಥವಾ 4 ವರ್ಷಗಳ ಪದವಿ ಮುಂದಿನ 30-40 ವರ್ಷಗಳ ವೃತ್ತಿ ಜೀವನವನ್ನು ನಿರ್ಧರಿಸುತ್ತದೆ. ಮುಂದಿನ 10, 20 ಅಥವಾ 30 ವರ್ಷಗಳ ನಂತರವೂ ಬೇಡಿಕೆಯಲ್ಲಿ ಉಳಿಯುವ ಪದವಿ ಯಾವುದು ಎಂದು ಪ್ರತಿಯೊಬ್ಬರೂ ಯೋಚಿಸಲೇಬೇಕು.

First published:

  • 17

    Future Degrees: ಈ 6 ಡಿಗ್ರಿಗಳನ್ನು ಓದಿದವರಿಗೆ ಭವಿಷ್ಯದಲ್ಲಿ ಡಿಮ್ಯಾಂಡ್ ಇರಲಿದೆ

    ಬಹುತೇಕರು ಸೇಫ್ ಆಗಿ ಡಾಕ್ಟರ್-ಇಂಜಿನಿಯರಿಂಗ್ ಅನ್ನುತ್ತಾರೆ. ಆದರೆ ಎಲ್ಲರಿಗೂ ಈ ಪದವಿಗಳಲ್ಲಿ ಆಸಕ್ತಿ ಇರುವುದಿಲ್ಲ. ಹಾಗಾಗಿ ಪರ್ಯಾಯ ಪದವಿಗಳನ್ನು ಹುಡುಕುತ್ತಿದ್ದರೆ, ಅಂತವರಿಗೆ 6 ಅದ್ಭುತ ಡಿಗ್ರಿಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಭವಿಷ್ಯದಲ್ಲಿ ಈ ಪದವೀಧರರಿಗೆ ಬೇಡಿಕೆ ಇರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

    MORE
    GALLERIES

  • 27

    Future Degrees: ಈ 6 ಡಿಗ್ರಿಗಳನ್ನು ಓದಿದವರಿಗೆ ಭವಿಷ್ಯದಲ್ಲಿ ಡಿಮ್ಯಾಂಡ್ ಇರಲಿದೆ

    1) ಡೇಟಾ ಸೈನ್ಸ್: ಇದನ್ನು ಉದಯೋನ್ಮುಖ ಕ್ಷೇತ್ರ ಎಂದು ಪರಿಗಣಿಸಲಾಗಿದೆ. ಇದರಲ್ಲಿ ನಿರಂತರವಾಗಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಪ್ರಸ್ತುತ, ಅಭ್ಯರ್ಥಿಗಳು ಡೇಟಾ ಸೈನ್ಸ್ ನಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡಿದ ನಂತರವೇ ಲಕ್ಷ, ಕೋಟಿ ಮೌಲ್ಯದ ಪ್ಯಾಕೇಜ್ ಗಳಲ್ಲಿ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಇದು ಉತ್ತಮ ವೃತ್ತಿ ಆಯ್ಕೆಯಾಗಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 37

    Future Degrees: ಈ 6 ಡಿಗ್ರಿಗಳನ್ನು ಓದಿದವರಿಗೆ ಭವಿಷ್ಯದಲ್ಲಿ ಡಿಮ್ಯಾಂಡ್ ಇರಲಿದೆ

    2) ಆರ್ಟಿಫಿಷಲ್ ಇಂಟೆಲಿಯೆಂಟ್ಸ್: ಕೃತಕ ಬುದ್ಧಿಮತ್ತೆ ಕ್ಷೇತ್ರ ನಿರಂತರ ಪ್ರಗತಿ ಸಾಧಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಾರುಕಟ್ಟೆಯಾಗಲಿದೆ. ಇದರಲ್ಲಿ ಅಪಾರ ಉದ್ಯೋಗಾವಕಾಶಗಳೂ ಇರುತ್ತವೆ. ಯಂತ್ರ ಕಲಿಕೆ, ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆಯಂತಹ ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್ ಗಳನ್ನು ಮಾಡುವ ವಿದ್ಯಾರ್ಥಿಗಳು ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 47

    Future Degrees: ಈ 6 ಡಿಗ್ರಿಗಳನ್ನು ಓದಿದವರಿಗೆ ಭವಿಷ್ಯದಲ್ಲಿ ಡಿಮ್ಯಾಂಡ್ ಇರಲಿದೆ

    3) ಬ್ಲಾಕ್ ಚೈನ್ ತಂತ್ರಜ್ಞಾನ: ಬ್ಲಾಕ್ ಚೈನ್ ತಂತ್ರಜ್ಞಾನದ ಕೋರ್ಸ್ಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅಭ್ಯರ್ಥಿಗಳು ಅದರಲ್ಲಿ ಉತ್ತಮ ವೃತ್ತಿಜೀವನವನ್ನು ಮಾಡಬಹುದು. ಎಲ್ಲಾ ಕ್ಷೇತ್ರಗಳಲ್ಲೂ ಬ್ಲಾಕ್ ಚೈನ್ ನ ಬಳಕೆಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ.

    MORE
    GALLERIES

  • 57

    Future Degrees: ಈ 6 ಡಿಗ್ರಿಗಳನ್ನು ಓದಿದವರಿಗೆ ಭವಿಷ್ಯದಲ್ಲಿ ಡಿಮ್ಯಾಂಡ್ ಇರಲಿದೆ

    4) ಜಾಹೀರಾತು: ಹೆಚ್ಚುತ್ತಿರುವ ಸ್ಮಾರ್ಟ್ ಫೋನ್ ಗಳು ಮತ್ತು ಸೋಷಿಯಲ್ ಮೀಡಿಯಾ ಬಳಕೆ ಜಾಹೀರಾತು ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತಂದಿದೆ. ಈ ಕ್ಷೇತ್ರವು ನಿರಂತರವಾಗಿ ಬೆಳೆಯುತ್ತಿದೆ. ಟಿವಿ, ನ್ಯೂಸ್ ಪೇಪರ್ ನಿಂದ ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಅಪಾರವಾದ ವೃತ್ತಿ ಅವಕಾಶಗಳಿವೆ.

    MORE
    GALLERIES

  • 67

    Future Degrees: ಈ 6 ಡಿಗ್ರಿಗಳನ್ನು ಓದಿದವರಿಗೆ ಭವಿಷ್ಯದಲ್ಲಿ ಡಿಮ್ಯಾಂಡ್ ಇರಲಿದೆ

    5) ಗೇಮಿಂಗ್ ಉದ್ಯಮ: ಸ್ಮಾರ್ಟ್ ಫೋನ್ ಗಳ ಜೊತೆಗೆ ಪ್ಲೇಸ್ಟೇಷನ್ ನ ಹೆಚ್ಚುತ್ತಿರುವ ಬಳಕೆಯು ಗೇಮಿಂಗ್ ಉದ್ಯಮ ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಮುಖ ಕ್ಷೇತ್ರವಾಗಿದೆ. ವಿಡಿಯೋ ಗೇಮ್ ಗಳನ್ನು ಇಷ್ಟಪಡುವ ವಿದ್ಯಾರ್ಥಿಗಳು ಈಗ ತಮ್ಮ ಹವ್ಯಾಸಗಳನ್ನು ಪೂರೈಸಿಕೊಳ್ಳುವುದರ ಜೊತೆಗೆ ಇದರಲ್ಲಿ ವೃತ್ತಿಜೀವನವನ್ನು ಮಾಡಬಹುದು. ಒಳ್ಳೆಯ ಸಂಪಾದನೆ ಕೂಡ ಇದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 77

    Future Degrees: ಈ 6 ಡಿಗ್ರಿಗಳನ್ನು ಓದಿದವರಿಗೆ ಭವಿಷ್ಯದಲ್ಲಿ ಡಿಮ್ಯಾಂಡ್ ಇರಲಿದೆ

    6) ಸೈಬರ್ ಸೆಕ್ಯೂರಿಟಿ: ತಂತ್ರಜ್ಞಾನದ ಹೆಚ್ಚುತ್ತಿರುವ ಬಳಕೆಯೊಂದಿಗೆ ಸೈಬರ್ ದಾಳಿಯ ಅಪಾಯವೂ ನಿರಂತರವಾಗಿ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಸೈಬರ್ ಭದ್ರತಾ ಕ್ಷೇತ್ರದಲ್ಲಿ ಬೇಡಿಕೆಯು ವೇಗವಾಗಿ ಹೆಚ್ಚಾಗುತ್ತದೆ. ಕಂಪ್ಯೂಟರ್ ಸೈನ್ಸ್ ಜೊತೆಗೆ ಸೈಬರ್ ಸೆಕ್ಕೂರಿಟಿ, ಮಾಹಿತಿ ತಂತ್ರಜ್ಞಾನ, ಕೋಡಿಂಗ್ ನಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ಮಾಡಬಹುದು.

    MORE
    GALLERIES