2) Relocation Benefits: ಸ್ಥಳಾಂತರದ ಪ್ರಯೋಜನಗಳನ್ನು ಸಹ ಉದ್ಯೋಗಿಗಳು ವಿಚಾರಿಸಬೇಕು. ಇವುಗಳನ್ನು ಪ್ರತಿಯೊಂದು ಕಂಪನಿಯಲ್ಲೂ ನೀಡಲಾಗುತ್ತದೆ. ಉದಾಹರಣೆಗೆ ನೀವು ಕೆಲಸಕ್ಕಾಗಿ ಬೆಂಗಳೂರಿನಿಂದ ಹೈದ್ರಾಬಾದ್ ಗೆ ಶಿಫ್ಟ್ ಆಗುತ್ತಿದ್ದರೆ, ಅಲ್ಲಿ ನಿಮಗೆ ವಸತಿ ವ್ಯವಸ್ಥೆ ಹಾಗೂ ಸ್ಥಳಾಂತರದ ಮೊತ್ತವನ್ನು ನೀಡುತ್ತಾರೆ. ಸಾಮಾನ್ಯವಾಗಿ14 ದಿನಗಳ ವಸತಿ ಮತ್ತು 50 ಸಾವಿರ ರೂ. ಸ್ಥಳಾಂತರದ ಮೊತ್ತವನ್ನು ನೀಡುತ್ತಾರೆ.
3) ನಿಮ್ಮ ಹುದ್ದೆಯ ಹೆಸರು: ಹೌದು ಕೆಲಸ ಸಿಗುವುದಷ್ಟೇ ಅಲ್ಲ, ನೀವು ಸೇರುತ್ತಿರುವ ಕಂಪನಿಯಲ್ಲಿ ಯಾವ ಪೋಸ್ಟ್ ಗೆ ನೀವು ಹೋಗುತ್ತಿದ್ದೀರಿ ಎಂಬುವುದು ಮುಖ್ಯ. ನೀವು ಅನುಭವಸ್ಥರಾದರೆ ಐಡಿ ಕಾರ್ಡ್ ನಲ್ಲಿ ಸೀನಿಯರ್ ಎಂದು ಇರಬೇಕು. ಒಮ್ಮೆ ಕೆಲಸಕ್ಕೆ ಸೇರಿದ ಮೇಲೆ ಇದನ್ನು ಬದಲಿಸುವುದು ಕಷ್ಟ, ಹಾಗಾಗಿ ಮೊದಲೇ ಕೇಳಿಕೊಂಡು ಬರಬೇಕು. ಇದು ಪ್ರಮೋಷನ್ ಗೂ ಸಹಾಯಕ. ಸಾಂದರ್ಭಿಕ ಚಿತ್ರ