BA Psychology: ಈ ಕೋರ್ಸ್ ಮಾಡಿದ್ರೆ ಹತ್ತಾರು ಕ್ಷೇತ್ರದಲ್ಲಿ ಜಾಬ್ ಸಿಗುತ್ತೆ!
ಈ ಕೋರ್ಸ್ ಮಾಡಿದರೆ ಕಾನೂನು, ವಾಣಿಜ್ಯ, ಮಾನವ ಸಂಪನ್ಮೂಲ ನಿರ್ವಹಣೆ, ಜಾಹೀರಾತು ಅಥವಾ ಮಾರಾಟ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಈ ಪ್ರೋಗ್ರಾಂ ನಿಮ್ಮನ್ನು ಸಿದ್ಧಪಡಿಸುತ್ತದೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಸಹ ಉದ್ಯೋಗಾವಕಾಶ ಇರುತ್ತದೆ.
ಸೈಕಾಲಜಿ ಪದವಿ ಪಡೆಯುವ ಆಸೆ ನಿಮಗಿದ್ದರೆ ಈಗಲೇ ನೀವೂ ಆನ್ಲೈನ್ ಮೂಲಕವೂ ಸಹ ಇದರ ಅಭ್ಯಾಸ ಮಾಡಬಹುದು. ಎಷ್ಟೋ ಜನರಿಗೆ ಸೈಕಾಲಜಿಯಲ್ಲಿ ಯಾವ ವಿಷಯ ಕಲಿಸಲಾಗುತ್ತದೆ ಎಂಬ ಕುತೂಹಲ ಇರುತ್ತದೆ ಆದ್ದರಿಂದ ಇಲ್ಲಿ ನಾವು ಯಾವ ವಿಷಯ ಕಲಿಸುತ್ತಾರೆ ಎಂಬುದರ ಕುರಿತು ಕೆಲವು ಮಾಹಿತಿ ನೀಡಿದ್ದೇವೆ ನೋಡಿ.
2/ 8
ಇದನ್ನು ಮನಶಾಸ್ತ್ರ ಹಾಗೂ ಮನೋವಿಜ್ಞಾನ ಎಂದೂ ಸಹ ಕರೆಯಲಾಗುತ್ತದೆ. ಈ ಆನ್ಲೈನ್ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಪದವಿಯನ್ನು ಸಹ ನೀವು ಈ ವಿಷಯದ ಮೇಲೆ ಮಾಡಬಹುದಾಗಿದೆ.
3/ 8
ವಿದ್ಯಾರ್ಥಿಗಳು ಗುಣಾತ್ಮಕ ಮತ್ತು ಪರಿಮಾಣಾತ್ಮಕ ಸಂಶೋಧನಾ ವಿಧಾನಗಳ ಮೂಲಕ ಮಾನವ ಅನುಭವವನ್ನು ಅರ್ಥಮಾಡಿಕೊಳ್ಳಲು ಈ ಕೋರ್ಸ್ ಇದನ್ನು ಕ್ವಾಂಟಿಟೇಟಿವ್ ಮತ್ತು ಕ್ವಾಲಿಟೇಟಿವ್ ರಿಸರ್ಚ್ ಎಂದು ಕರೆಯಲಾಗುತ್ತದೆ.
4/ 8
ಮನೋವಿಜ್ಞಾನ, ವ್ಯಕ್ತಿತ್ವ ಸಿದ್ಧಾಂತ, ಅಸಹಜ ಮನೋವಿಜ್ಞಾನ, ನಡವಳಿಕೆಯ ಜೈವಿಕ ನೆಲೆಗಳು, ಮಗು ಮತ್ತು ಹದಿಹರೆಯದ ಬೆಳವಣಿಗೆ, ಜನಾಂಗ ಮತ್ತು ಜನಾಂಗೀಯತೆ ಈ ಎಲ್ಲಾ ವಿಚಾರಗಳನ್ನು ಇಲ್ಲಿ ತಿಳಿಸಲಾಗುತ್ತದೆ.
5/ 8
ಕಾನೂನು, ವಾಣಿಜ್ಯ, ಮಾನವ ಸಂಪನ್ಮೂಲ ನಿರ್ವಹಣೆ, ಜಾಹೀರಾತು ಅಥವಾ ಮಾರಾಟ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಈ ಪ್ರೋಗ್ರಾಂ ನಿಮ್ಮನ್ನು ಸಿದ್ಧಪಡಿಸುತ್ತದೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಸಹ ಉದ್ಯೋಗಾವಕಾಶ ಇರುತ್ತದೆ.
6/ 8
ಮನೋವಿಜ್ಞಾನ ಕೋರ್ಸ್ ಪದವೀಧರರನ್ನು ಮನೋವಿಜ್ಞಾನ ಮತ್ತು ಸಂಬಂಧಿತ ವಿಭಾಗಗಳಲ್ಲಿ ಇನ್ನೂ ಹೆಚ್ಚಿನ ಸುಧಾರಿತ ಅಧ್ಯಯನಕ್ಕಾಗಿ ಸಿದ್ಧಪಡಿಸಲಾಗುತ್ತದೆ. ಹೆಚ್ಚುವರಿಯಾಗಿ ಅವರು ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಇದು ಸಹಾಯ ಮಾಡುತ್ತದೆ.
7/ 8
ಆನ್ಲೈನ್ ಕೋರ್ಸ ಮಾಡಲು ಇರಬೇಕಾದ ಅರ್ಹತೆ: ವಿದ್ಯಾರ್ಥಿಗಳು US ನ ನಿವಾಸಿಗಳಾಗಿರಬಾರದು ಮತ್ತು ಇಂಗ್ಲಿಷ್ನಲ್ಲಿ ಪ್ರವೀಣರಾಗಿರಬೇಕು. ಹೀಗಿದ್ದರೆ ದೂರ ಶಿಕ್ಷಣವಿದ್ದರೂ ಸಹ ಸುಲಭವಾಗಿ ನೀವು ಪಾಠ ಅರ್ಥಮಾಡಿಕೊಳ್ಳಬಹುದು ಮತ್ತು ಕಲಿಯಬಹುದು.
8/ 8
12ನೇ ತರಗತಿಯ ಅಂತಿಮ HSC, ICSE, CBSE, AISSC, ಅಥವಾ ಇತರ ಪ್ರಮಾಣಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಉತ್ತಮ. ಸೈನ್ಸ್ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಇದನ್ನು ಮಾಡಬಹುದು. ಆದರೆ ಬಿಎ ಪದವಿ ಕೂಡಾ ಇದರಲ್ಲಿ ಮಾಡಬಹುದು.