Toxic Coworkers: ಆಫೀಸ್ನಲ್ಲಿ ಈ 4 ರೀತಿಯ ಸಹೋದ್ಯೋಗಿಗಳಿಂದ ದೂರು ಇರುವುದೇ ಉತ್ತಮ
ಯಾವುದೇ ಔದ್ಯೋಗಿಕರಂಗವಾಗಿರಲಿ ಆಫೀಸ್ ವಾತಾವರಣ ಚೆನ್ನಾಗಿದ್ದರೆ, ಕೆಲಸ ಮಾಡಲು ಉದ್ಯೋಗಿಗಳಿಗೆ ಉತ್ಸಾಹ ಇರುತ್ತದೆ. ಬೇಡದ ವಿಷಯಗಳಿಂದ ಕಚೇರಿ ವಾತಾವರಣ ಹಾಳಾದರೆ, ಅದು ಕೆಲಸದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತೆ. ಅದರಲ್ಲೂ ಕಿರಿಕಿರಿ ಮಾಡೋ ಸಹೋದ್ಯೋಗಿಗಳಿದ್ದರೆ, ನಿಮ್ಮ ಸಮಯ ಹಾಳಾಗೋದು ಗ್ಯಾರೆಂಟಿ.
ಸರಿಯಾದ ತಂಡ, ಸದಸ್ಯರು ಇದ್ದರಷ್ಟೇ ಯಾವುದೇ ಉದ್ಯೋಗಿಯ ಶ್ರಮಕ್ಕೆ ತಕ್ಕ ಫಲ ಸಿಗುತ್ತೆ. ಆದರೆ ಎಲ್ಲಾ ಸಹೋದ್ಯೊಗಿಗಳು ಸಪೋರ್ಟಿವ್ ಆಗಿ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲ ಟೀಂ ಸದಸ್ಯರ ವರ್ತನೆ ಇಡೀ ಕಚೇರಿಯ ಪರಿಸರವನ್ನೇ ಹಾಳು ಮಾಡುತ್ತೆ.
2/ 7
ಕಿರಿಕಿರಿ ಮಾಡುವ ಸಹೋದ್ಯೋಗಿಗಳನ್ನು ನಿಭಾಯಿಸುವ ಕಲೆಯನ್ನು ಕಲಿಯಲೇಬೇಕು. ಅನಗತ್ಯವಾಗಿ ಕೆಲಸಕ್ಕೆ ತೊಂದರೆಯಾಗುತ್ತಿದ್ದರೆ, ನಯವಾಗಿ ಅವರನ್ನು ಸರಿ ದಾರಿಗೆ ತರಬೇಕಾಗುತ್ತದೆ. ಇಲ್ಲವಾದರೆ, ಈ ರೀತಿಯ ಸಹೋದ್ಯೋಗಿಗಳನ್ನು ದೂರ ಇಡುವುದೇ ಲೇಸು. (ಸಾಂದರ್ಭಿಕ ಚಿತ್ರ)
3/ 7
1) ಅತಿಯಾದ ಮಾತು: ಅತಿಯಾಗಿ ಮಾತನಾಡುವ ಸಹೋದ್ಯೋಗಿ ಇದ್ದರೆ, ನಿಮಗೆ ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸಹೋದ್ಯೋಗಿಯನ್ನು ಸ್ನೇಹಿತರನ್ನಾಗಿ ಮಾಡಿಕೊಂಡರೂ ಇದೇ ಸಮಸ್ಯೆ ಆಗುತ್ತದೆ. ಖಾಲಿ ಹರಟೆಯಲ್ಲೇ ಸಾಕಷ್ಟು ಸಮಯ ವ್ಯಯವಾಗುತ್ತೆ. (ಸಾಂಕೇತಿಕ ಚಿತ್ರ)
4/ 7
2) ಗಾಸಿಪ್ ಮಾಡುವವರು: ಆಫೀಸ್ ವಿಚಾರವಾಗಿ ಇಲ್ಲವೇ ವೈಯಕ್ತಿಕ ವಿಚಾರಗಳ ಬಗ್ಗೆ ಸದಾ ಗಾಸಿಪ್ ಮಾಡುತ್ತಿರುವವರು ಇರ್ತಾರೆ. ಅವರ ಕೀಳಿರಿಮೆಗಳನ್ನು ಮುಚ್ಚಿಕೊಳ್ಳಲು ಸದಾ ಬೇರೆಯವ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಾರೆ. ಇಂಥವರು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಾರೆ. ಇವರಿಂದ ದೂರವಿರುವುದು ಉತ್ತಮ.
5/ 7
3) ಯಾವಾಗಲೂ ಕಂಪ್ಲೇಂಟ್: ಸದಾ ದೂರುವ ಮನಸ್ಥತಿಯಲ್ಲೇ ಇರುವುದು. ಎಲ್ಲವೂ ಇವರಿಗೆ ಸಮಸ್ಯೆ ಆಗಿಯೇ ಕಾಣುತ್ತೆ. ಸಹೋದ್ಯೋಗಿಗಳ ಮೇಲೆ ಬಾಸ್ ಬಳಿ ದೂರುವುದು, ವ್ಯವಸ್ಥೆಯೇ ಸರಿಯಿಲ್ಲ ಎಂದು ಸದಾ ಗೊಣಗುವವರು ಕೂಡ ಟಾಕ್ಸಿಕ್ ವಾತಾವರನವನ್ನು ಸೃಷ್ಟಿಸುತ್ತಾರೆ. (ಪ್ರಾತಿನಿಧಿಕ ಚಿತ್ರ)
6/ 7
4) ಸೋಮಾರಿಗಳು: ಕೆಲಸ ಒಂದು ಬಿಟ್ಟು ಬೇರೆ ಎಲ್ಲಾ ವಿಷಯಗಳಲ್ಲೂ ಇವರಿಗೆ ಆಸಕ್ತಿ ಇರುತ್ತದೆ. ಲಂಚ್-ಟೀ ಬ್ರೇಕ್ ಗಳಿಗಾಗಿಯೇ ಕಾಯುತ್ತಾರೆ. ಟಾಯ್ಲೆಟ್ ರೂಮ್ ನಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಇಂತವರ ಸಹವಾಸ ನಿಮ್ಮ ವೃತ್ತಿಗೆ ನಿಜಕ್ಕೂ ಹಾಕಿಕಾರಕ. ಸಾಂಕೇತಿಕ ಚಿತ್ರ
7/ 7
ಮೇಲೆ ತಿಳಿಸಿದ ರೀತಿಯ ಉದ್ಯೋಗಿಗಳ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡಿರುತ್ತಾರೆ. ಹಾಗಾಗಿ ನೀವು ಅವರ ಸಹ ಪ್ರಯಾಣಿಕರಾಗುವುದನ್ನು ತಪ್ಪಿಸಿ. ನಿಮ್ಮ ಕೆಲಸದ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ಎಲ್ಲರೂ ಮಾಡುತ್ತಾರೆ ಎಂದು ನೀವು ಕೆಲಸವನ್ನು ನಿರ್ಲಕ್ಷ್ಯ ಮಾಡಬೇಡಿ.