Interview Tips: ಹೊಸ ಉದ್ಯೋಗದಲ್ಲಿ ಕಿರಿಕಿರಿ ಇರಬಾರದು ಅಂದ್ರೆ ಸಂದರ್ಶನದಲ್ಲಿ ಈ 5 ಪ್ರಶ್ನೆಗಳನ್ನು ಕೇಳಿ

ಅನೇಕ ಉದ್ಯೋಗಿಗಳು ಕೆಲಸ ಮಾಡುವ ಜಾಗದಲ್ಲಿನ ಕಿರಿಕಿರಿ ತಾಳಲಾರದೆ, ಆಫೀಸ್ ವಾತಾವರಣ ಇಷ್ಟವಾಗದೆ ಕೆಲಸ ಬದಲಾಯಿಸಲು ಮುಂದಾಗುತ್ತಾರೆ. ಹೊಸ ಕೆಲಸದ ಸ್ಥಳದಲ್ಲಿ ಹಳೆ ಕಚೇರಿಯ ವಾತಾವರಣ ಇರದಿದ್ದರೆ ಸಾಕಪ್ಪಾ ಎಂದು ಬಯಸುತ್ತಾರೆ.

First published:

  • 17

    Interview Tips: ಹೊಸ ಉದ್ಯೋಗದಲ್ಲಿ ಕಿರಿಕಿರಿ ಇರಬಾರದು ಅಂದ್ರೆ ಸಂದರ್ಶನದಲ್ಲಿ ಈ 5 ಪ್ರಶ್ನೆಗಳನ್ನು ಕೇಳಿ

    ಹಾಗಾದರೆ ನೀವು ಹೊಸ ಉದ್ಯೋಗದ ಸಂದರ್ಶನದಲ್ಲೇ ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ಆಫೀಸ್ ಕಲ್ಚರ್ ಬಗ್ಗೆ ವಿಚಾರಿಸಬಹುದು. ಆ ಕುರಿತ ಮಾಹಿತಿ ಇಲ್ಲಿದೆ.

    MORE
    GALLERIES

  • 27

    Interview Tips: ಹೊಸ ಉದ್ಯೋಗದಲ್ಲಿ ಕಿರಿಕಿರಿ ಇರಬಾರದು ಅಂದ್ರೆ ಸಂದರ್ಶನದಲ್ಲಿ ಈ 5 ಪ್ರಶ್ನೆಗಳನ್ನು ಕೇಳಿ

    1. ಹೊಸ ಉದ್ಯೋಗಿಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ?: ಉತ್ತಮ ಕಂಪನಿಯನ್ನು ಆಯ್ಕೆಮಾಡುವಾಗ, ಕಂಪನಿಯು ಆರಂಭದಲ್ಲಿ ಉದ್ಯೋಗಿಗಳನ್ನು ಹೇಗೆ ಬೆಂಬಲಿಸುತ್ತದೆ. ಕಂಪನಿ ಮತ್ತು ಉದ್ಯೋಗಿಗಳು ಹೇಗೆ ಪ್ರಗತಿ ಸಾಧಿಸುತ್ತಾರೆ ಎಂಬುದರ ಕುರಿತು ನೀವು ಪ್ರಶ್ನೆಗಳನ್ನು ಕೇಳಬಹುದು.

    MORE
    GALLERIES

  • 37

    Interview Tips: ಹೊಸ ಉದ್ಯೋಗದಲ್ಲಿ ಕಿರಿಕಿರಿ ಇರಬಾರದು ಅಂದ್ರೆ ಸಂದರ್ಶನದಲ್ಲಿ ಈ 5 ಪ್ರಶ್ನೆಗಳನ್ನು ಕೇಳಿ

    2. ಕೆಲಸದ ಶೈಲಿ ಬಗ್ಗೆ ವಿಚಾರಿಸಿ: ಹೊಸ ಕಂಪನಿಯಲ್ಲಿ ಜಾಬ್ ಆಫರ್ ಒಪ್ಪಿಕೊಳ್ಳುವ ಮೊದಲು, ನಿಮ್ಮ ಕೆಲಸದ ಶೈಲಿಯನ್ನು ತಿಳಿದುಕೊಳ್ಳಿ. ಸಾಮಾನ್ಯ ಗುರಿಯನ್ನು ಸಾಧಿಸಲು ನೀವು ಸ್ವತಂತ್ರವಾಗಿ ಕೆಲಸ ಮಾಡಬೇಕೇ ಅಥವಾ ತಂಡದೊಂದಿಗೆ ಕೆಲಸ ಮಾಡಲು ಬಯಸುತ್ತೀರಾ ಎಂದು ಕೇಳಿ ತಿಳಿದುಕೊಳ್ಳಿ.

    MORE
    GALLERIES

  • 47

    Interview Tips: ಹೊಸ ಉದ್ಯೋಗದಲ್ಲಿ ಕಿರಿಕಿರಿ ಇರಬಾರದು ಅಂದ್ರೆ ಸಂದರ್ಶನದಲ್ಲಿ ಈ 5 ಪ್ರಶ್ನೆಗಳನ್ನು ಕೇಳಿ

    3. ಕೆಲಸದ ಆಚೆಗೆ ಆಫೀಸ್ ನಲ್ಲಿ ಏನೆಲ್ಲಾ ಚಟುವಟಿಕೆಗಳಿವೆ ಎಂದು ತಿಳಿದುಕೊಳ್ಳಿ. ಕೆಲ ಕಂಪನಿಗಳು ಕ್ರಿಕೆಟ್ ಟೂರ್ನಿಗಳನ್ನು ನಡೆಸುತ್ತದೆ. ನಿಮಗೆ ಕ್ರಿಕೆಟ್ ಆಡುವುದರಲ್ಲಿ ಆಸಕ್ತಿ ಇದ್ದರೆ, ಈ ಕಂಪನಿ ನಿಮ್ಮನ್ನು ಸೆಳೆಯಬಹುದು. ಅದೇ ರೀತಿ ಸಾಂಸ್ಕೃತಿಯ ಚಟುವಟಿಕೆ, ಕಲೆ ಪ್ರದರ್ಶನ ನಿಮ್ಮ ಆಸಕ್ತಿ ಆಗಿರಬಹುದು.

    MORE
    GALLERIES

  • 57

    Interview Tips: ಹೊಸ ಉದ್ಯೋಗದಲ್ಲಿ ಕಿರಿಕಿರಿ ಇರಬಾರದು ಅಂದ್ರೆ ಸಂದರ್ಶನದಲ್ಲಿ ಈ 5 ಪ್ರಶ್ನೆಗಳನ್ನು ಕೇಳಿ

    4. ಕಂಪನಿ ಉದ್ಯೋಗಿಯ ಪ್ರತಿಭೆಯನ್ನು ಹೇಗೆ ಅಳೆಯುತ್ತದೆ ಎಂದು ಕೇಳಿ. ಗುರುತಿಸುವಿಕೆ, ಪ್ರಶಸ್ತಿಗಳ ಮೂಲಕ ಉತ್ತಮ ಕೆಲಸವನ್ನು ಗುರುತಿಸುವುದು ಉತ್ತಮ ಎನಿಸಬಹುದು. ಉದಾಹರಣೆಗೆ ಪರ್ಫಾಮರ್ ಆಫ್ ದಿ ಮಂತ್ ಬಿರುದು ಇರಬಹುದು. ಹಲವು ಯೋಜನೆಗಳ ಮೂಲಕ ವರ್ಷವಿಡೀ ಉದ್ಯೋಗಿಗಳಿಗೆ ಪ್ರಯೋಜನಗಳನ್ನು ಒದಗಿಸುವ ಪದ್ಧತಿಯೂ ಇರಬಹುದು.

    MORE
    GALLERIES

  • 67

    Interview Tips: ಹೊಸ ಉದ್ಯೋಗದಲ್ಲಿ ಕಿರಿಕಿರಿ ಇರಬಾರದು ಅಂದ್ರೆ ಸಂದರ್ಶನದಲ್ಲಿ ಈ 5 ಪ್ರಶ್ನೆಗಳನ್ನು ಕೇಳಿ

    5. ಸಹೋದ್ಯೋಗಿಗಳನ್ನು ವಿಚಾರಿಸಬಹುದು: ಇಲ್ಲಿ ಕೆಲಸ ಮಾಡಲು ಏಕೆ ಇಷ್ಟಪಡುತ್ತಾರೆ ಎಂದು ಇತರ ಉದ್ಯೋಗಿಗಳನ್ನು ಕೇಳುವುದು ಕಂಪನಿಯ ಕೆಲಸದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಸಂಬಳ, ಸಾಮಾಜಿಕ ನೀತಿಗಳು, ನಿಯಮಗಳ ಬಗ್ಗೆ ತಿಳಿದುಕೊಂಡು ನೀವು ಕಂಪನಿಯಲ್ಲಿ ಕೆಲಸ ಮಾಡಬಹುದೇ ಎಂದು ನಿರ್ಧರಿಸಬಹುದು.

    MORE
    GALLERIES

  • 77

    Interview Tips: ಹೊಸ ಉದ್ಯೋಗದಲ್ಲಿ ಕಿರಿಕಿರಿ ಇರಬಾರದು ಅಂದ್ರೆ ಸಂದರ್ಶನದಲ್ಲಿ ಈ 5 ಪ್ರಶ್ನೆಗಳನ್ನು ಕೇಳಿ

    ಒಟ್ಟಾರೆ ಕೆಲಸವನ್ನು ಒಪ್ಪಿಕೊಳ್ಳುವ ಮೊದಲು, ನೀವು ಕೆಲಸದ ಸಂಸ್ಕೃತಿ ಮತ್ತು ಕಂಪನಿಯಲ್ಲಿ ನಿಮ್ಮ ನಿರೀಕ್ಷೆಗಳ ಬಗ್ಗೆ ತಿಳಿದುಕೊಳ್ಳಬೇಕು. ಅದಕ್ಕಾಗಿ ನೀವು ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ಸರಿಯಾದ ಕಂಪನಿಯನ್ನು ಆಯ್ಕೆ ಮಾಡಬಹುದು.

    MORE
    GALLERIES