ಹೊಸತರಲ್ಲಿ ಕಷ್ಟ ಅನಿಸುತ್ತೆ, ಅಡ್ಜೆಸ್ಟ್ ಮಾಡಿಕೊಳ್ಳಬೇಕು: ಇಷ್ಟು ದಿನ ನೀವು ಕೆಲಸ ಮಾಡಿದ ಫೀಲ್ಡ್ ಅಲ್ಲಿ ನೀವು ಸೀನಿಯರ್ ಇರಬಹುದು, ಆದರೆ ಹೊಸ ಕ್ಷೇತ್ರದಲ್ಲಿ ನೀವು ಇನ್ನೂ ಜೂನಿಯರ್. ಹಾಗಾಗಿ ಸ್ವಲ್ಪ ಇರಿಸುಮುರಿಸು ಆದರೂ ಅಡ್ಜೆಸ್ಟ್ ಮಾಡಿಕೊಂಡು ಹೋಗಿ. ಆರಂಭದಲ್ಲಿ ಸ್ಯಾಲರಿ ಕೂಡ ಕಡಿಮೆ ಇರಬಹುದು. ಆದರೆ ಇದು ನಿಮ್ಮ ಇಷ್ಟದ ಕೆಲಸ ಎಂಬ ಆತ್ಮತೃಪ್ತಿ ಇರುವಂತೆ ನೋಡಿಕೊಳ್ಳಿ.