IT Jobs 2023: ಐಟಿ ಉದ್ಯೋಗಿಗಳಿಗೆ ಗುಡ್​ನ್ಯೂಸ್​: ಮುಗೀತು ಕಷ್ಟ ಕಾಲ, ಇನ್ಮುಂದೆ ಎಲ್ಲವೂ ಸರಾಗ

2022ರ ಕೊನೆಯ ಭಾಗ ಹಾಗೂ 2023ರ ಮೊದಲೆರಡು ತಿಂಗಳು ಐಟಿ ಉದ್ಯೋಗ ರಂಗ ಲೇಆಫ್ ಭೂತದಿಂದ ತತ್ತರಿಸಿತ್ತು. ಆರ್ಥಿಕ ಹಿಂಜರಿತದಿಂದ ದೊಡ್ಡ ದೊಡ್ಡ ಐಟಿ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಒಂದು ಕೆಟ್ಟ ಕಾಲ ಕಳೆದ ಮೇಲೆ ಹೊಸ ಬೆಳಕು ಮೂಡಲೇಬೇಕು ಅಲ್ಲವೇ? ಈಗ ಆ ಸಮಯ ಬಂದಿದೆ.

First published:

  • 17

    IT Jobs 2023: ಐಟಿ ಉದ್ಯೋಗಿಗಳಿಗೆ ಗುಡ್​ನ್ಯೂಸ್​: ಮುಗೀತು ಕಷ್ಟ ಕಾಲ, ಇನ್ಮುಂದೆ ಎಲ್ಲವೂ ಸರಾಗ

    ಐಟಿ ಉದ್ಯೋಗಿಗಳಿಗೆ ಸಮಾಧಾನ ನೀಡುವ ಸಮೀಕ್ಷಾ ವರದಿಯೊಂದು ಹೊರ ಬಿದ್ದಿದೆ. ಜಾಬ್ ಡಾಟ್ ಕಾಮ್ ಉದ್ಯೋಗ ಪೋರ್ಟಲ್ ಉದ್ಯೋಗ ಕಡಿತಗಳು ಕಡಿಮೆ ಆಗಲಿದೆ ಎಂದು ತನ್ನ ಸಮೀಕ್ಷೆಯಲ್ಲಿ ಕಂಡುಕೊಂಡಿದೆ. ಜೊತೆಗೆ ಶೇಕಡಾ 20 ರಷ್ಟು ಸಂಬಳ ಏರಿಕೆಯನ್ನು ಸಹ ಉದ್ಯೋಗಿಗಳು ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದೆ.

    MORE
    GALLERIES

  • 27

    IT Jobs 2023: ಐಟಿ ಉದ್ಯೋಗಿಗಳಿಗೆ ಗುಡ್​ನ್ಯೂಸ್​: ಮುಗೀತು ಕಷ್ಟ ಕಾಲ, ಇನ್ಮುಂದೆ ಎಲ್ಲವೂ ಸರಾಗ

    job.com ಪೋರ್ಟಲ್ 10 ವಲಯಗಳಲ್ಲಿ 1400 ನೇಮಕಾತಿ ಮತ್ತು ಸಲಹೆಗಾರರನ್ನು ಸಮೀಕ್ಷೆಗೆ ಒಳಪಡಿಸಿದೆ. ಉದ್ಯೋಗ ಕಡಿತವನ್ನು ಕಡಿಮೆ ಮಾಡಲಾಗುವುದು ಎಂದು ಅನೇಕ ನೇಮಕಾತಿದಾರರು ಹೇಳಿದ್ದಾರೆ. ಶೇ. 4 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಗುರಿ ಇದೆ ಎಂದು ಕೆಲವರು ಹೇಳಿದ್ದಾರೆ.

    MORE
    GALLERIES

  • 37

    IT Jobs 2023: ಐಟಿ ಉದ್ಯೋಗಿಗಳಿಗೆ ಗುಡ್​ನ್ಯೂಸ್​: ಮುಗೀತು ಕಷ್ಟ ಕಾಲ, ಇನ್ಮುಂದೆ ಎಲ್ಲವೂ ಸರಾಗ

    ಈ ಅಭಿಪ್ರಾಯವು ಐಟಿ ವಲಯದಲ್ಲಿ ನೇಮಕಾತಿಯ ಮೇಲೆ ಗರಿಷ್ಠ ಪರಿಣಾಮವನ್ನು ಬೀರುತ್ತದೆ ಎಂದು ಸಮೀಕ್ಷೆ ತೋರಿಸುತ್ತದೆ. ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯ ನಡುವೆಯೂ ಶೇ.92 ರಷ್ಟು ಉದ್ಯೋಗಿಗಳು ಹೊಸ ವರ್ಷದ ಮೊದಲಾರ್ಧದಲ್ಲಿ ನೇಮಕ ಮಾಡಿಕೊಳ್ಳುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

    MORE
    GALLERIES

  • 47

    IT Jobs 2023: ಐಟಿ ಉದ್ಯೋಗಿಗಳಿಗೆ ಗುಡ್​ನ್ಯೂಸ್​: ಮುಗೀತು ಕಷ್ಟ ಕಾಲ, ಇನ್ಮುಂದೆ ಎಲ್ಲವೂ ಸರಾಗ

    ಸಮೀಕ್ಷೆ ನಡೆಸಿದವರಲ್ಲಿ ಅರ್ಧದಷ್ಟು ಜನರು ಹೊಸ ಉದ್ಯೋಗಗಳನ್ನು ನಿರೀಕ್ಷಿಸುತ್ತಿದ್ದಾರೆ. ಶೇ.17 ರಷ್ಟು ಜನರು ತಾವು ಪ್ರಸ್ತುತ ಕೆಲಸ ಮಾಡುತ್ತಿರುವ ಕಂಪನಿಯನ್ನು ತೊರೆಯುವ ಉದ್ದೇಶವನ್ನು ಹೊಂದಿಲ್ಲ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.

    MORE
    GALLERIES

  • 57

    IT Jobs 2023: ಐಟಿ ಉದ್ಯೋಗಿಗಳಿಗೆ ಗುಡ್​ನ್ಯೂಸ್​: ಮುಗೀತು ಕಷ್ಟ ಕಾಲ, ಇನ್ಮುಂದೆ ಎಲ್ಲವೂ ಸರಾಗ

    ಭಾರತೀಯ ಉದ್ಯೋಗಿಗಳು ಈ ವರ್ಷ ಸಂಬಳ ಹೆಚ್ಚಳವನ್ನು ಕಾಣುವ ನಿರೀಕ್ಷೆಯಿದೆ. ಸಮೀಕ್ಷೆ ನಡೆಸಿದ ಎಲ್ಲಾ ಉದ್ಯೋಗದಾತರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಸರಾಸರಿ 20 ಪ್ರತಿಶತದಷ್ಟು ಸಂಬಳ ಹೆಚ್ಚಳವನ್ನು ನಿರೀಕ್ಷಿಸಿದ್ದಾರೆ.

    MORE
    GALLERIES

  • 67

    IT Jobs 2023: ಐಟಿ ಉದ್ಯೋಗಿಗಳಿಗೆ ಗುಡ್​ನ್ಯೂಸ್​: ಮುಗೀತು ಕಷ್ಟ ಕಾಲ, ಇನ್ಮುಂದೆ ಎಲ್ಲವೂ ಸರಾಗ

    ಜಾಗತಿಕವಾಗಿ ನೇಮಕಾತಿಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಅನಿಶ್ಚಿತತೆಯ ಹೊರತಾಗಿಯೂ, ಭಾರತದಲ್ಲಿ ಕ್ಯಾಂಪಸ್ ಪ್ಲೇಸ್ ಮೆಂಟ್ ಗಳು ಆಶಾದಾಯಕವಾಗಿದೆ ಎಂದು ವರದಿ ಹೇಳಿದೆ. ಉದ್ಯೋಗ ವಜಾಗಳು ಸಂಪೂರ್ಣವಾಗಿ ಕಡಿಮೆಯಾಗಲಿವೆ ಮತ್ತು ಹೊಸ ಉದ್ಯೋಗ ನೇಮಕಾತಿಗಳನ್ನು ಮಾಡಲಾಗುವುದು ಎಂದು ಸಮೀಕ್ಷೆ ತಿಳಿಸಿದೆ.

    MORE
    GALLERIES

  • 77

    IT Jobs 2023: ಐಟಿ ಉದ್ಯೋಗಿಗಳಿಗೆ ಗುಡ್​ನ್ಯೂಸ್​: ಮುಗೀತು ಕಷ್ಟ ಕಾಲ, ಇನ್ಮುಂದೆ ಎಲ್ಲವೂ ಸರಾಗ

    ಈ ಸಮೀಕ್ಷೆಯ ಅನುಸಾರ ಐಟಿ ವಲಯದ ಮೇಲಿದ್ದ ಕಾರ್ಮೋಡ ಕರಗಲಿದ್ದು, ಭರವಸೆಯ ಬೆಳಕು ಮೂಡಲಿದೆ. ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಉದ್ಯೋಗಿಗಳು ಕೂಡ ನಿರಾಳರಾಗಬಹುದು. ಇನ್ನು ಹೊಸ ನೇಮಕಾತಿಗಳು ನಡೆಯಲಿರುವ ಹಿನ್ನೆಲೆ ಉದ್ಯೋಗಾಕಾಂಕ್ಷಿಗಳು ಕೂಡ ಪಾಸಿಟಿವ್ ಆಗಿ ಇರಬಹುದು.

    MORE
    GALLERIES