90/20 Work Rule: 90 ನಿಮಿಷ ಕೆಲಸ, 20 ಮಿನಿಟ್ಸ್ ಬ್ರೇಕ್: ಯಶಸ್ಸಿನ ಫಾರ್ಮುಲಾನೇ ಸ್ಮಾರ್ಟ್ ವರ್ಕ್
ಹೊಸ ವರ್ಷ ಶುರುವಾಗಿದೆ. ಹೊಸ ಉತ್ಸಾಹದೊಂದಿಗೆ ಉದ್ಯೋಗಿಗಳು ನಿತ್ಯದ ಕೆಲಸಗಳಿಗೆ ಇಳಿದಿದ್ದಾರೆ. ಹಿಂದಿನ ವರ್ಷದ ತಪ್ಪುಗಳು ಮರುಕಳಿಸಬಾರದು, ಹೊಸ ವರ್ಷದ ಆರಂಭದಿಂದಲೇ ಕೊಟ್ಟ ಟಾರ್ಗೆಟ್ ಗಳನ್ನು ಪೂರೈಸಬೇಕು ಎಂದುಕೊಂಡಿರುತ್ತಾರೆ. ನಿರಂತರವಾಗಿ, ಬದ್ಧತೆಯಿಂದ ಕೆಲಸ ಮಾಡಿದರಷ್ಟೇ ಸಕ್ಸಸ್ ಆಗ್ತೀವಿ ಎಂದುಕೊಳ್ಳುತ್ತಾರೆ. ಆದರೆ ಇದು ಸಂಪೂರ್ಣ ಸತ್ಯವಲ್ಲ.
ಒಂದೊಳ್ಳೆಯ ಉದ್ಯೋಗಿಯಾಗಲು, ಕೊಟ್ಟ ಟಾರ್ಗೆಟ್ ನಲ್ಲಿ ಯಶಸ್ವಿಯಾಗಲು ಹಾರ್ಡ್ ವರ್ಕ್ ಬೇಕಿಲ್ಲ ಸ್ಮಾರ್ಟ್ ವರ್ಕ್ ಬೇಕಿದೆ. ಈ ಸತ್ಯವನ್ನು ಅರಿತವರು ಕಡಿಮೆ ಶ್ರಮದೊಂದಿಗೆ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಸ್ಮಾರ್ಟ್ ವರ್ಕ್ ನ ಬೆಸ್ಟ್ ಫಾರ್ಮುಲಾನೇ 90/20 Work Rule.
2/ 7
90/20 ಕೆಲಸದ ನಿಯಮ ಎಂದರೆ 60 ನಿಮಿಷಗಳ ಕಾಲ ಕೆಲಸ ಮಾಡುವುದು, 20 ನಿಮಿಷಗಳ ಕಾಲ ಬ್ರೇಕ್/ ವಿಶ್ರಾಂತಿ ತೆಗೆದುಕೊಳ್ಳುವುದು ಎಂದರ್ಥ. ಇದರಿಂದ ಕೆಲಸಗಳು ಚೆನ್ನಾಗಿಯೂ, ಸರಿಯಾಗಿಯೂ, ವೇಗವಾಗಿಯೂ ನಡೆಯುತ್ತೆ ಎನ್ನಲಾಗುತ್ತೆ.
3/ 7
ಉದ್ಯೋಗಿಯಾಗಿ ನೀವು ಕೂಡ ಈ 90/20 ಫಾರ್ಮುಲಾವನ್ನು ಅಳವಡಿಸಿಕೊಳ್ಳಬಹುದು. ಒಂದೂವರೆ ಗಂಟೆಗಳ ಕಾಲ ಕೆಲಸ ಮಾಡಿ, ನಂತರ 20 ನಿಮಿಷ ಬ್ರೇಕ್ ತೆಗೆದುಕೊಳ್ಳಿ. ಮತ್ತೆ 90 ನಿಮಿಷ ಕೆಲಸ, 20 ನಿಮಿಷ ಬ್ರೇಕ್ ಅನ್ನು ರಿಪೀಟ್ ಮಾಡಿ.
4/ 7
ನಿರಂತರವಾಗಿ ಕೆಲಸ ಮಾಡುವ ಬದಲು ಈ ರೀತಿ ಬ್ರೇಕ್ ಗಳನ್ನು ತೆಗೆದುಕೊಳ್ಳುವುದು ಕೆಲಸ ಗುಟ್ಟಮಟ್ಟವನ್ನು ಹೆಚ್ಚಿಸುತ್ತೆ ಎಂದು ತಜ್ಞರೇ ಹೇಳಿದ್ದಾರೆ. ಹಾಗಾಗಿ ನೀವು ನಿಮ್ಮ ಕೆಲಸದಲ್ಲಿ ಈ ಫಾರ್ಮುಲಾವನ್ನು ಅಳವಡಿಸಿಕೊಳ್ಳಬಹುದು.
5/ 7
ನಮ್ಮ ಮೆದುಳು ಒಂದು ಯಂತ್ರವಿದ್ದಂತೆ. ಯಾವುದೇ ಯಂತ್ರವಿರಲಿ ಅದನ್ನು ಒಂದೇ ಸಮನೆ ಕೆಲಸ ಮಾಡಿಸಿದರೆ ಬಿಸಿಯಾಗುತ್ತೆ. ನಮ್ಮ ಮೆದಳು ಸಹ ಇದೇ ರೀತಿ. ಆದರಿಂದ ತಲೆಯನ್ನು ತಣ್ಣಗಾಗಲು ಬಿಡಬೇಕು. ಆಗ ಮೆದುಳು ಅತ್ತುತ್ತಮವಾಗಿ ಕೆಲಸ ಮಾಡುತ್ತೆ. ಸಾಂದರ್ಭಿಕ ಚಿತ್ರ
6/ 7
ಮಿಷಿನ್ ನಂತೆ ಕೆಲಸ ಮಾಡುವುದಕ್ಕಿಂತ ಖುಷಿಯಾಗಿ, ಕ್ರಿಯೇಟಿವ್ ಆಗಿ ಕೆಲಸ ಮಾಡುವುದು ಮುಖ್ಉ. ಆಗ ನಿಮಗೆ ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಐಡಿಯಾಗಳು ಹೊಳೆಯುತ್ತವೆ. ಸಾಂದರ್ಭಿಕ ಚಿತ್ರ
7/ 7
ಮಾನವನ ದೇಹವು "ಅಲ್ಟ್ರಾಡಿಯನ್ ರಿದಮ್ಸ್" ಎಂದು ಕರೆಯಲ್ಪಡುವ ಚಕ್ರಗಳ ಮೇಲೆ ಕಾರ್ಯನಿರ್ವಹಿಸುತ್ತದೆ. 24-ಗಂಟೆಗಳ ಚಕ್ರವು ಪುನರಾವರ್ತನೆಯಾಗುತ್ತದೆ. ಈ ಚಕ್ರ ಹೆಚ್ಚು ಉಪಯುಕ್ತಯಿಂದ ಕೆಲಸ ಮಾಡಬೇಕು ಎಂದರೆ ವಿಶ್ರಾಂತಿಯೇ ಒಳ್ಳೆಯ ಮಾರ್ಗ ಎನ್ನುತ್ತಾರೆ. ಹಾಗಾಗಿ ಕೆಲಸದ ಮಧ್ಯೆ ಬ್ರೇಕ್ ತುಂಬಾನೇ ಮುಖ್ಯ. ಸಾಂದರ್ಭಿಕ ಚಿತ್ರ