Career Tips: ಅಭ್ಯರ್ಥಿಗಳೇ, ಉದ್ಯೋಗ ಬೇಟೆ ಶುರು ಮಾಡುವ ಮುನ್ನ ಈ 7 ವಿಷಯಗಳನ್ನು ತಿಳಿದಿರಲೇಬೇಕು

ನೀವು ಉದ್ಯೋಗವನ್ನು ಹುಡುಕಲು ಆರಂಭಿಸುವವರಿದ್ದರೆ ಅಥವಾ ಈಗಾಗಲೇ ಆರಂಭಿಸಿದ್ದರೆ ನೀವು ತಿಳಿದುಕೊಳ್ಳಬೇಕಾದ ಕೆಲವು ಅಂಶಗಳು ಇಲ್ಲಿವೆ. ಇವುಗಳ ಬಗ್ಗೆ ಮೊದಲೇ ಮಾಹಿತಿ ಪಡೆದು ಕೆಲಸದ ಹುಡುಕಾಟಕ್ಕೆ ಇಳಿದರೆ ಯಶಸ್ಸು ಸಿಗುವುದು ಸುಲಭವಾಗುತ್ತೆ. ಆ ನಿಟ್ಟಿನಲ್ಲಿ ಒಂದಷ್ಟು ಸಲಹೆಗಳು ಇಲ್ಲಿವೆ ನೋಡಿ.

First published:

  • 17

    Career Tips: ಅಭ್ಯರ್ಥಿಗಳೇ, ಉದ್ಯೋಗ ಬೇಟೆ ಶುರು ಮಾಡುವ ಮುನ್ನ ಈ 7 ವಿಷಯಗಳನ್ನು ತಿಳಿದಿರಲೇಬೇಕು

    1) ಯಾರ ಮೂಲಕ ಕೆಲಸ ಹುಡುಕಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ನೀವು ಉದ್ಯೋಗ ಹುಡುಕಾಟ ಆರಂಭಿಸಿದ್ದರೆ ನಿಮ್ಮ ಪರಿಚಯದವರು, ಸ್ನೇಹಿತರು ಅಥವಾ ಸಾಮಾಜಿಕ ಜಾಲತಾಣದ ಒಳ್ಳೆಯ ಸ್ನೇಹಿತರನ್ನು ಬಳಸಿಕೊಳ್ಳಿ.

    MORE
    GALLERIES

  • 27

    Career Tips: ಅಭ್ಯರ್ಥಿಗಳೇ, ಉದ್ಯೋಗ ಬೇಟೆ ಶುರು ಮಾಡುವ ಮುನ್ನ ಈ 7 ವಿಷಯಗಳನ್ನು ತಿಳಿದಿರಲೇಬೇಕು

    2) ರೆಸ್ಯೂಮ್ ಚೆನ್ನಾಗಿರಲಿ. ಸಂದರ್ಶಕರು ಹಾಗೂ ಅಭ್ಯರ್ಥಿ ನಡುವಿನ ಮೊದಲ ಹಂತವೇ ರೆಸ್ಯೂಮ್. ಆದಷ್ಟು ಸರಳವಾಗಿ, ಎಫೆಕ್ಟಿವ್ ಆಗಿ ಇರಲಿ. ನೀವು ಪ್ರಯತ್ನಿಸುತ್ತಿರುವ ಉದ್ಯೋಗಕ್ಕೆ ಹೊಂದುವಂತೆ ರೆಸ್ಯೂಮ್ ಅನ್ನು ಕ್ರಿಯೇಟ್ ಮಾಡಿ. ಅನಗತ್ಯ ವಿವರಗಳನ್ನು ತಪ್ಪಿಸಿ.

    MORE
    GALLERIES

  • 37

    Career Tips: ಅಭ್ಯರ್ಥಿಗಳೇ, ಉದ್ಯೋಗ ಬೇಟೆ ಶುರು ಮಾಡುವ ಮುನ್ನ ಈ 7 ವಿಷಯಗಳನ್ನು ತಿಳಿದಿರಲೇಬೇಕು

    3) ಕಂಪನಿಗಳು ಸಾಮಾನ್ಯವಾಗಿ ನೇಮಕಾತಿ ಮಾಡುವ ಮೊದಲು ಅಭ್ಯರ್ಥಿಯನ್ನು ಗೂಗಲ್ ನಲ್ಲಿ ಹುಡುಕುತ್ತವೆ. ಲಿಂಕ್ಡ್ ಇನ್, ನೌಕರಿ ಡಾಟ್ ಕಾಮ್ ಮುಂತಾದ ಜಾಲತಾಣಗಳಲ್ಲಿ ಸರ್ಚ್ ಮಾಡುತ್ತವೆ. ಆದ್ದರಿಂದ ಉದ್ಯೋಗ ಹುಡುಕುವ ಮುನ್ನ ಅನಗತ್ಯ ವಿಷಯಗಳನ್ನು ನಿಮ್ಮ ಅಕೌಂಟ್ ನಿಂದ ಡಿಲೀಟ್ ಮಾಡಿ.

    MORE
    GALLERIES

  • 47

    Career Tips: ಅಭ್ಯರ್ಥಿಗಳೇ, ಉದ್ಯೋಗ ಬೇಟೆ ಶುರು ಮಾಡುವ ಮುನ್ನ ಈ 7 ವಿಷಯಗಳನ್ನು ತಿಳಿದಿರಲೇಬೇಕು

    4) ಸಂದರ್ಶನದ ಸಮಯದಲ್ಲಿ ಕಂಪನಿಯವರು ಮೆಚ್ಚುವಂತೆ ನಡೆದುಕೊಳ್ಳಿ. ಜಾಬ್ ಇಂಟರ್ ವ್ಯೂ ಸಮಯದಲ್ಲಿ ನಿಮ್ಮ ಬಾಡಿ ಲಾಂಗ್ವೇಜ್ ಸರಿಯಾಗಿರಲಿ. ಸಮಾಧಾನವಾಗಿ ಪ್ರಶ್ನೆಯನ್ನು ಸಂಪೂರ್ಣವಾಗಿ ಕೇಳಿಸಿಕೊಂಡ ಬಳಿಕ ಉತ್ತರಿಸಿ. ಸಂದರ್ಶಕರೊಂದಿಗೆ ಕಣ್ಣಿನ ಸಂಪರ್ಕ ಇಟ್ಟುಕೊಳ್ಳಿ. ಇದರಿಂದ ಒಳ್ಳೆಯ ಅಭಿಪ್ರಾಯ ಮೂಡುತ್ತದೆ.

    MORE
    GALLERIES

  • 57

    Career Tips: ಅಭ್ಯರ್ಥಿಗಳೇ, ಉದ್ಯೋಗ ಬೇಟೆ ಶುರು ಮಾಡುವ ಮುನ್ನ ಈ 7 ವಿಷಯಗಳನ್ನು ತಿಳಿದಿರಲೇಬೇಕು

    5) ಇಂಟರ್ ವ್ಯೂ ಆದ ತಕ್ಷಣ ಕೆಲಸ ಸಿಗುವುದಿಲ್ಲ. ಸಂದರ್ಶನ ಮುಗಿದ ಬಳಿಕ ಒಂದು ವಾರದಲ್ಲಿ ಕರೆ ಮಾಡುತ್ತೇವೆ ಎಂದು ಅವರು ಹೇಳಿರುತ್ತಾರೆ. ಅದಕ್ಕಾಗಿ ನೀವು ತಾಳ್ಮೆಯಿಂದ ಕಾಯಬೇಕಿದೆ. ಕೆಲವೊಮ್ಮೆ ಸಂದರ್ಶನದ ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಮೂರು ಅಥವಾ ನಾಲ್ಕು ಸುತ್ತುಗಳೂ ಇರಬಹುದು. ಆದರಿಂದ ಸರಿಯಾದ ಮಾಹಿತಿ ಪಡೆದು ತಾಳ್ಮೆಯಿಂದ ಕಾಯಿರಿ.

    MORE
    GALLERIES

  • 67

    Career Tips: ಅಭ್ಯರ್ಥಿಗಳೇ, ಉದ್ಯೋಗ ಬೇಟೆ ಶುರು ಮಾಡುವ ಮುನ್ನ ಈ 7 ವಿಷಯಗಳನ್ನು ತಿಳಿದಿರಲೇಬೇಕು

    6) ಮೊದಲ ಕೆಲಸದಲ್ಲಿ ಸಂಬಳ ಕಡಿಮೆ ಇರಬಹುದು. ಕಂಪನಿ ಹಾಗೂ ಕಲಿಕೆಯ ಬಗ್ಗೆ ಗಮನ ಕೊಡಿ. ಅನುಭವಿಯಾಗಿದ್ದರೆ ವೇತನ ಹೆಚ್ಚಳಕ್ಕೆ ಸೂಕ್ತವಾದ ಕಾರಣಗಳನ್ನು ನೀಡಿ. ಇದರಿಂದ ನಿಮಗೆ ಲಾಭವಾಗಬಹುದು.

    MORE
    GALLERIES

  • 77

    Career Tips: ಅಭ್ಯರ್ಥಿಗಳೇ, ಉದ್ಯೋಗ ಬೇಟೆ ಶುರು ಮಾಡುವ ಮುನ್ನ ಈ 7 ವಿಷಯಗಳನ್ನು ತಿಳಿದಿರಲೇಬೇಕು

    7) ಮತ್ತೊಂದು ಮಹತ್ವದ ವಿಚಾರವೆಂದರೆ ಜಾಬ್ ಇಂಟರ್ ವ್ಯೂ ಒಂದು ಸ್ಪರ್ಧೆ. ಎಷ್ಟೇ ಜನ ಎಷ್ಟೇ ಒಳ್ಳೆಯ ಅಭ್ಯರ್ಥಿಗಳಾಗಿದ್ದರೂ ಕಂಪನಿ ತನ್ನ ಬಳಿ ಖಾಲಿ ಇರುವಷ್ಟು ಹುದ್ದೆಗಳಿಗೆ ಮಾತ್ರ ನೇಮಕ ಮಾಡಿಕೊಳ್ಳಲು ಸಾಧ್ಯ. ಹಾಗಾಗಿ ನಿರಾಕರಣೆಯನ್ನು ವೈಯಕ್ತಿವಾಗಿ ತೆಗೆದುಕೊಳ್ಳಬೇಡಿ.

    MORE
    GALLERIES