ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ನೇತೃತ್ವದಲ್ಲಿ 1983 ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ಸಿಕ್ಕಿತ್ತು. ಅತ್ಯುತ್ತಮ ಆಲ್ ರೌಂಡರ್ ಕಪಿಲ್ ದೇವ್ ತಮ್ಮ ವೃತ್ತಿ ಜೀವನದಲ್ಲಿ 131 ಟೆಸ್ಟ್ ಮತ್ತು 255 ODI ಪಂದ್ಯಗಳನ್ನು ಆಡಿದ್ದಾರೆ. ಅವರು ಒಂಬತ್ತು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.. ಕಪಿಲ್ ದೇವ್ ಅವರಿಗೆ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಪದವಿ ನೀಡಿ ಗೌರವಿಸಲಾಗಿದೆ.