Professional Courses: ಕಾಲೇಜ್ ಬಿಟ್ಟಿರಲಿ, ಫೇಲ್ ಆಗಿರಲಿ ಈ 6 ತಿಂಗಳ ಕೋರ್ಸ್ ಮಾಡಿದ್ರೆ ತಕ್ಷಣ ಕೆಲಸ ಸಿಗುತ್ತೆ

ಕಾಲೇಜ್ ಬಿಟ್ಟವರು, ಫೇಲ್ ಆದವರು ಜೀವನವೇ ಮುಗಿದು ಹೋಯಿತು, ಯಾರೂ ಕೆಲಸ ಕೊಡಲ್ಲ ಅಂತೆಲ್ಲಾ ಯೋಚನೆ ಮಾಡುವ ಅಗತ್ಯವಿಲ್ಲ. ನಿಮ್ಮ ಶಿಕ್ಷಣದ ಹಾದಿ ಏನೇ ಆಗಿರಲಿ, 6 ತಿಂಗಳುಗಳ ಅಲ್ಪಾವಧಿ ಕೋರ್ಸ್ ಮಾಡಿಕೊಳ್ಳುವ ಮೂಲಕ ನೀವು ಸರಿ ದಾರಿಗೆ ಬರಬಹುದು. ವೃತ್ತಿಜೀವನವನ್ನು ಸರಿಯಾದ ದಿಕ್ಕಿನಲ್ಲಿ ಆರಂಭಿಸಬಹುದು.

First published:

  • 18

    Professional Courses: ಕಾಲೇಜ್ ಬಿಟ್ಟಿರಲಿ, ಫೇಲ್ ಆಗಿರಲಿ ಈ 6 ತಿಂಗಳ ಕೋರ್ಸ್ ಮಾಡಿದ್ರೆ ತಕ್ಷಣ ಕೆಲಸ ಸಿಗುತ್ತೆ

    ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಸಾಫ್ಟ್ ಸಿಲ್ಕ್ ಗೆ ಎಲ್ಲಿಲ್ಲದ ಡಿಮ್ಯಾಂಡ್ ಇದೆ. ಇನ್ಮುಂದೆ ಮೃದು ಕೌಶಲ್ಯಗಳು ಇಲ್ಲದಿದ್ದರೆ, ನಿಮ್ಮ ವೃತ್ತಿಜೀವನದಲ್ಲಿ ನೀವು ಮುನ್ನಡೆಯಲು ಸಾಧ್ಯವಿಲ್ಲ. ಆ ಹಿನ್ನೆಲೆಯಲ್ಲಿ ಕೇವಲ ಆರು ತಿಂಗಳಲ್ಲಿ ಮುಗಿಸಬಹುದಾದ ಕೋರ್ಸ್ ಗಳ ಬಗ್ಗೆ ಇಲ್ಲಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 28

    Professional Courses: ಕಾಲೇಜ್ ಬಿಟ್ಟಿರಲಿ, ಫೇಲ್ ಆಗಿರಲಿ ಈ 6 ತಿಂಗಳ ಕೋರ್ಸ್ ಮಾಡಿದ್ರೆ ತಕ್ಷಣ ಕೆಲಸ ಸಿಗುತ್ತೆ

    1) ಡೇಟಾ ಸೈನ್ಸ್ ಕೋರ್ಸ್: ಎಲ್ಲಾ ಉದ್ಯಮಗಳನ್ನು ಆಳುವ ಅಸ್ತ್ರವೇ ಡೇಟಾ. ಟಾಪ್ ಟೆಕ್ ಕಂಪನಿಗಳಿಂದ ಹಿಡಿದು ಸ್ಟಾರ್ಟ್ ಅಪ್ ಗಳವರೆಗೆ ಪ್ರತಿಯೊಬ್ಬರೂ ಇಂದು ತಮ್ಮ ವ್ಯಾಪಾರ ಕಾರ್ಯಾಚರಣೆಗಳನ್ನು ಅತ್ಯುತ್ತಮವಾಗಿಸಲು ಡೇಟಾವನ್ನು ಅವಲಂಬಿಸಿದ್ದಾರೆ.

    MORE
    GALLERIES

  • 38

    Professional Courses: ಕಾಲೇಜ್ ಬಿಟ್ಟಿರಲಿ, ಫೇಲ್ ಆಗಿರಲಿ ಈ 6 ತಿಂಗಳ ಕೋರ್ಸ್ ಮಾಡಿದ್ರೆ ತಕ್ಷಣ ಕೆಲಸ ಸಿಗುತ್ತೆ

    ಡೇಟಾ ಸೈನ್ಸ್ ಕೋರ್ಸ್ ಮಾಡುವುದು ನಿಮಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತೆ.ಹೆಚ್ಚಿನ ಸಂಬಳದ ಕೆಲಸ ಹುಡುಕುತ್ತಿರುವವರಿಗೆ ಈ ಕೋರ್ಸ್ ಮಾಡುವುದು ಸಹಾಯ ಮಾಡುತ್ತದೆ.

    MORE
    GALLERIES

  • 48

    Professional Courses: ಕಾಲೇಜ್ ಬಿಟ್ಟಿರಲಿ, ಫೇಲ್ ಆಗಿರಲಿ ಈ 6 ತಿಂಗಳ ಕೋರ್ಸ್ ಮಾಡಿದ್ರೆ ತಕ್ಷಣ ಕೆಲಸ ಸಿಗುತ್ತೆ

    2) ಡಿಜಿಟಲ್ ಮಾರ್ಕೆಟಿಂಗ್: ಇತ್ತೀಚಿನ ದಿನಗಳಲ್ಲಿ ಶಾಪಿಂಗ್ ನಿಂದ ಹಿಡಿದು ವ್ಯಾಪಾರ ನಡೆಸುವವರೆಗೆ ಎಲ್ಲವೂ ಡಿಜಿಟಲ್ ಮಯವಾಗಿದೆ. ಕಂಪನಿಗಳಿಗೆ ಈಗ ಆನ್ ಲೈನ್ ಪ್ರಚಾರಗಳಿಗೆ ಹೆಚ್ಚು ಒತ್ತು ನೀಡುತ್ತಿವೆ. ಡಿಜಿಟಲ್ ಮಾರ್ಕೆಟಿಂಗ್ ನಲ್ಲಿನ ಕೋರ್ಸ್ ನಿಮ್ಮನ್ನು ಬೇಡಿಕೆ ಉದ್ಯೋಗಿಯನ್ನಾಗಿ ಮಾಡುತ್ತೆ.

    MORE
    GALLERIES

  • 58

    Professional Courses: ಕಾಲೇಜ್ ಬಿಟ್ಟಿರಲಿ, ಫೇಲ್ ಆಗಿರಲಿ ಈ 6 ತಿಂಗಳ ಕೋರ್ಸ್ ಮಾಡಿದ್ರೆ ತಕ್ಷಣ ಕೆಲಸ ಸಿಗುತ್ತೆ

    ಕಂಪನಿಗಳಿಗೆ ಹೊಸ ಡಿಜಿಟಲ್ ಜಗತ್ತನ್ನು ಪ್ರವೇಶಿಸಲು ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಒಂದೊಳ್ಳೆ ಹಾದಿಯಾಗಿದೆ. ಈ ಕೋರ್ಸ್ ಕಟೆಂಟ್ ಮ್ಯಾನೇಜ್ ಮೆಂಟ್, ಮಾರ್ಕೆಟಿಂಗ್ ಅನಾಲಿಟಿಕ್ಸ್, ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಮತ್ತು ಪಾವತಿಸಿದ ಜಾಹೀರಾತುಗಳನ್ನು ಒಳಗೊಂಡಿದೆ.

    MORE
    GALLERIES

  • 68

    Professional Courses: ಕಾಲೇಜ್ ಬಿಟ್ಟಿರಲಿ, ಫೇಲ್ ಆಗಿರಲಿ ಈ 6 ತಿಂಗಳ ಕೋರ್ಸ್ ಮಾಡಿದ್ರೆ ತಕ್ಷಣ ಕೆಲಸ ಸಿಗುತ್ತೆ

    3) ಗ್ರಾಫಿಕ್ ಡಿಸೈನ್: ಸಾವಿರ ಪದಗಳಲ್ಲಿ ಹೇಳುವ ವಿಷಯವನ್ನು ಒಂದು ಫೋಟೋ ಹೇಳುತ್ತೆ ಎಂಬ ಮಾತು ಇಂದಿಗೂ ಪ್ರಸ್ತುತ. ಆ ನಿಟ್ಟಿನಲ್ಲಿ ನೀವು ಗ್ರಾಫಿಕ್ ಡಿಸೈನಿಂಗ್ ಕೋರ್ಸ್ ನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕು. ಕಲಾತ್ಮಕ ಪ್ರತಿಭೆ ಮತ್ತು ಗ್ರಾಫಿಕ್ ವಿನ್ಯಾಸದ ಹಿನ್ನೆಲೆ ಹೊಂದಿರುವ ಜನರಿಗೆ ಹೆಚ್ಚಿನ ಬೇಡಿಕೆ ಇದೆ.

    MORE
    GALLERIES

  • 78

    Professional Courses: ಕಾಲೇಜ್ ಬಿಟ್ಟಿರಲಿ, ಫೇಲ್ ಆಗಿರಲಿ ಈ 6 ತಿಂಗಳ ಕೋರ್ಸ್ ಮಾಡಿದ್ರೆ ತಕ್ಷಣ ಕೆಲಸ ಸಿಗುತ್ತೆ

    ಈ ಕೋರ್ಸ್ ಮೂಲಕ ನೀವು ಡ್ರಾಯಿಂಗ್, ಮೋಷನ್ ಡಿಸೈನಿಂಗ್ ಅನ್ನು ಕಲಿಯಬಹುದು. ಗ್ರಾಫಿಕ್ ಡಿಸೈನಿಂಗ್ ಕೋರ್ಸ್ ನೊಂದಿಗೆ ಸ್ವತಂತ್ರ ವೃತ್ತಿಜೀವನವನ್ನು ನಿರ್ಮಿಸಬಹುದು. ದೊಡ್ಡ ಬ್ರ್ಯಾಂಡ್ ಗಳೊಂದಿಗೆ ಕೆಲಸ ಮಾಡಬಹುದು.

    MORE
    GALLERIES

  • 88

    Professional Courses: ಕಾಲೇಜ್ ಬಿಟ್ಟಿರಲಿ, ಫೇಲ್ ಆಗಿರಲಿ ಈ 6 ತಿಂಗಳ ಕೋರ್ಸ್ ಮಾಡಿದ್ರೆ ತಕ್ಷಣ ಕೆಲಸ ಸಿಗುತ್ತೆ

    4) ಸಾಫ್ಟ್ ಸ್ಕಿಲ್ ಟ್ರೈನಿಂಗ್ ಕೋರ್ಸ್: ಉದ್ಯೋಗಿಗಳು ತಮ್ಮ ಶಿಕ್ಷಣವನ್ನೇ ನೆಚ್ಚಿಕೊಳ್ಳದೆ ಕಾಲ ಬದಲಾದಂತೆ ಹೊಸ ಹೊಸ ಕೌಶಲ್ಯಗಳನ್ನು ಕಲಿಯಲೇಬೇಕು. ಆ ಮೂಲಕ ಉದ್ಯೋಗಿಯಾಗಿ ಅಪ್ ಡೇಟ್ ಆಗುತ್ತಲೇ ಇರಬೇಕು. ಸಾಫ್ಟ್ ಸ್ಕಿಲ್ಸ್ ಕೋರ್ಸ್ ನಿಮ್ಮ ವೃತ್ತಿಪರ ಮಿತಿಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಒಂದೊಳ್ಳೆಯ ಕೆಲಸ ಪಡೆಯಲು ಸಹಾಯ ಮಾಡುತ್ತದೆ.

    MORE
    GALLERIES