Office Meetings ವೇಳೆ ಮ್ಯಾನೇಜರ್ಸ್ ಈ 5 ತಪ್ಪುಗಳನ್ನು ಮಾಡಬಾರದು, ಕಿರಿಕಿರಿ ಎನಿಸುತ್ತೆ

Career Tops: ಯಾವುದೇ ಫೀಲ್ಡ್ ಆಗಿರಲಿ ಯಾವುದೇ ರೀತಿಯ ಕೆಲಸವಾಗಿರಲಿ, ಪ್ರತಿಯೊಂದು ಆಫೀಸ್ ನಲ್ಲೂ ಮೀಟಿಂಗ್ ಗಳು ನಡೆಯುತ್ತವೆ. ಮ್ಯಾನೇಜರ್/ ಟೀಂ ಲೀಡರ್ ಅಥವಾ ಬಾಸ್ ಮೀಟಿಂಗ್ ಗಳನ್ನು ಮಾಡುತ್ತಾರೆ. ಕೆಲಸದ ಬಗ್ಗೆ ಚರ್ಚೆ, ಹೊಸ ಮಾಹಿತಿ ಸೇರಿದಂತೆ ಅನೇಕ ವಿಷಯಗಳ ಕುರಿತು ಮೀಟಿಂಗ್ ಗಳು ನಡೆಯುತ್ತವೆ.

First published:

  • 18

    Office Meetings ವೇಳೆ ಮ್ಯಾನೇಜರ್ಸ್ ಈ 5 ತಪ್ಪುಗಳನ್ನು ಮಾಡಬಾರದು, ಕಿರಿಕಿರಿ ಎನಿಸುತ್ತೆ

    ಒಂದೊಳ್ಳೆಯ ಮೀಟಿಂಗ್ ಕಂಪನಿಯ ದಿಕ್ಕನ್ನೇ ಬದಲಿಸಿಬಿಡಬಹುದು. ಇನ್ನು ಕೆಲವು ಮೀಟಿಂಗ್ ಗಳು ನಿಜಕ್ಕೂ ಟೈಂ ವೇಸ್ಟ್ ಎನಿಸಿಬಿಡುತ್ತೆ. ಅದರಲ್ಲೂ ಮೀಟಿಂಗ್ ನಡೆಸುವ ಮ್ಯಾನೇಜರ್ ಗಳ ಕೆಲ ವರ್ತನೆಗಳು ಉದ್ಯೋಗಿಗಳಿಗೆ ಕಿರಿಕಿರಿ ಎನಿಸಲು ಶುರುವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Office Meetings ವೇಳೆ ಮ್ಯಾನೇಜರ್ಸ್ ಈ 5 ತಪ್ಪುಗಳನ್ನು ಮಾಡಬಾರದು, ಕಿರಿಕಿರಿ ಎನಿಸುತ್ತೆ

    ನೀವು ಕೂಡ ಮುಂದೆ ಮ್ಯಾನೇಜರ್ ಆದರೆ ಅಥವಾ ಮೀಟಿಂಗ್ ಗಳನ್ನು ನಡೆಸಿದರೆ ಈ ತಪ್ಪುಗಳನ್ನು ಮಾಡಬೇಡಿ. ಇದರಿಂದ ಉದ್ಯೋಗಿಗಳಿಗೆ ಕಿರಿಕಿರಿ ಎನಿಸುತ್ತೆ ಎಂದು ಅರಿತುಕೊಳ್ಳಿ. ಆ 5 ಕೆಟ್ಟ ಅಭ್ಯಾಸಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Office Meetings ವೇಳೆ ಮ್ಯಾನೇಜರ್ಸ್ ಈ 5 ತಪ್ಪುಗಳನ್ನು ಮಾಡಬಾರದು, ಕಿರಿಕಿರಿ ಎನಿಸುತ್ತೆ

    1) ಓಡಾಡಿಕೊಂಡು ಮಾತನಾಡುವುದು: ಮ್ಯಾನೇಜರ್ ಆದವರು ಎಲ್ಲಾ ಉದ್ಯೋಗಿಗಳನ್ನು ಮೀಟಿಂಗ್ ಹಾಲ್ ನಲ್ಲಿ ಕೂರಿಸಿ ಒಬ್ಬರೇ ಓಡಾಡಿಕೊಂಡು ಮಾತನಾಡುವುದು ಸರಿಯಲ್ಲ. ಸ್ಕ್ರಿನ್ ಮೇಲೆ ಪ್ರೆಸೆಂಟ್ ಮಾಡುತ್ತಿದ್ದರೆ, ಒಂದೇ ಕಡೆ ನಿಂತು ಮಾತನಾಡಬೇಕು. ಓಡಾಡಿಕೊಂಡು ಮಾತನಾಡುವುದು ಸೂಕ್ತವಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Office Meetings ವೇಳೆ ಮ್ಯಾನೇಜರ್ಸ್ ಈ 5 ತಪ್ಪುಗಳನ್ನು ಮಾಡಬಾರದು, ಕಿರಿಕಿರಿ ಎನಿಸುತ್ತೆ

    2) ಮೀಟಿಂಗ್ ಮುಗಿಯುವುದೇ ಇಲ್ಲ: ಕೆಲ ಮ್ಯಾನೇಜರ್ ಗಳು ಗಂಟೆಗಟ್ಟಲೆ ಮೀಟಿಂಗ್ ಗಳನ್ನು ಮಾಡುತ್ತಾರೆ. ಕೆಲಸದ ವಿಷಯ ಬಿಟ್ಟು ಬೇರೆಲ್ಲಾ ಮಾತನಾಡಿಕೊಂಡು ಸಮಯ ವ್ಯರ್ಥ ಮಾಡುತ್ತಾರೆ. ಮೀಟಿಂಗ್ ನಲ್ಲಿ ಸಮಯ ವ್ಯರ್ಥವಾದರೆ, ಉದ್ಯೋಗಿಗಳು ಆ ದಿನದ ಟಾಸ್ಕ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Office Meetings ವೇಳೆ ಮ್ಯಾನೇಜರ್ಸ್ ಈ 5 ತಪ್ಪುಗಳನ್ನು ಮಾಡಬಾರದು, ಕಿರಿಕಿರಿ ಎನಿಸುತ್ತೆ

    3) ನೋಟ್ಸ್ ತೆಗೆದುಕೊಳ್ಳುವುದಿಲ್ಲ: ಮೀಟಿಂಗ್ ವೇಳೆ ಉದ್ಯೋಗಿಗಳು ಮಾತ್ರ ನೋಟ್ಸ್ ಬರೆದುಕೊಳ್ಳಬೇಕು ಎಂದು ಮ್ಯಾನೇಜರ್ ಗಳು ಬಯಸುತ್ತಾರೆ. ಉದ್ಯೋಗಿಗಳು ಹೇಳಿದ ವಿಚಾರಗಳ ಬಗ್ಗೆ ಮ್ಯಾನೇಜರ್ ಸಹ ನೋಟ್ಸ್ ತೆಗೆದುಕೊಳ್ಳಬೇಕು. ಆಗ ವಿಷಯಗಳನ್ನು ಮರೆಯುವ ಸಾಧ್ಯತೆಗಳಿರುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Office Meetings ವೇಳೆ ಮ್ಯಾನೇಜರ್ಸ್ ಈ 5 ತಪ್ಪುಗಳನ್ನು ಮಾಡಬಾರದು, ಕಿರಿಕಿರಿ ಎನಿಸುತ್ತೆ

    4) ಮಧ್ಯದಲ್ಲಿ ಮಾತನಾಡುವುದು: ಉದ್ಯೋಗಿಗಳು ಮಾತನಾಡುವಾಗ ಪೂರ್ತಿಯಾಗಿ ಕೇಳಿಸಿಕೊಳ್ಳದೆ, ಅರ್ಧದಲ್ಲೇ ಮಾತನಾಡುವುದು ನಿಜಕ್ಕೂ ಕಿರಿಕಿರಿ. ಯಾರು ಏನು ಹೇಳುತ್ತಿದ್ದಾರೆ ಎಂದು ಪೂರ್ತಿಯಾಗಿ ಕೇಳಿಕೊಳ್ಳದೆ ಅವರ ಮಾತನ್ನು ಮೊಟಕಗೊಳಿಸುವುದು ನಾಯಕರಾದವರ ಲಕ್ಷಣವಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Office Meetings ವೇಳೆ ಮ್ಯಾನೇಜರ್ಸ್ ಈ 5 ತಪ್ಪುಗಳನ್ನು ಮಾಡಬಾರದು, ಕಿರಿಕಿರಿ ಎನಿಸುತ್ತೆ

    5) ಬೇಕಾಬಿಟ್ಟಿ ಮೀಟಿಂಗ್ ಮಾಡುವುದು: ಯಾವುದೇ ನಿರ್ದಿಷ್ಟ ವಿಷಯ-ಉದ್ದೇಶ ಇಲ್ಲದೆ, ಯಾವುದೇ ತಯಾರಿ ಇಲ್ಲದೆ ಮೀಟಿಂಗ್ ಗೆ ಕರೆಯುವುದು ಸರಿಯಲ್ಲ. ಕೇವಲ ದೂರುಗಳನ್ನು ಹೇಳಲು, ಬೈಯಲು, ಎಲ್ಲಾ ತಪ್ಪುಗಳಿಗೂ ಯಾರನ್ನಾದರೂ ಹೊಣೆ ಮಾಡಲು ಮೀಟಿಂಗ್ ಕರೆಯುವುದು ಕೂಡ ಕಿರಿಕಿರಿ ಎನಿಸುಕೊಳ್ಳುತ್ತೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Office Meetings ವೇಳೆ ಮ್ಯಾನೇಜರ್ಸ್ ಈ 5 ತಪ್ಪುಗಳನ್ನು ಮಾಡಬಾರದು, ಕಿರಿಕಿರಿ ಎನಿಸುತ್ತೆ

    ಮೇಲಿನ 5 ತಪ್ಪುಗಳನ್ನು ಮ್ಯಾನೇಜರ್ ಆದವರು ತಪ್ಪಿಸಬೇಕು. ಉದ್ಯೋಗಿಗಳು ಕೇಳುವ ಸ್ಥಾನದಲ್ಲಿದ್ದಾರೆ ಎಂದು ಏನೇನೋ ಹೇಳಬಾರದು. ಸಹೋದ್ಯೋಗಿಗಳಿಗೆ ಗೌರವ, ಅವರ ಸಮಯಕ್ಕೆ ಬೆಲೆ ಕೊಡಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES