Career Mistakes: 30+ ವಯಸ್ಸಿನ ಉದ್ಯೋಗಿಗಳು ಈ ತಪ್ಪುಗಳನ್ನು ಮಾಡಬಾರದು, ಕಷ್ಟದಲ್ಲೇ ಜೀವನ ಕಳೆಯಬೇಕಾಗುತ್ತೆ!

ಇಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವುದೇ 90s ಜನರೇಷನ್. 90ರ ದಶಕದಲ್ಲಿ ಜನಿಸಿರುವವರು 30ರ ಗಡಿ ದಾಟುತ್ತಿದ್ದಾರೆ. 30+ ವಯಸ್ಸಿನವರು ತಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಮಹತ್ವದ ಘಟ್ಟದಲ್ಲಿದ್ದಾರೆ. ಈ ಸಮಯದಲ್ಲಿ ಕೆಲ ತಪ್ಪುಗಳನ್ನು ಮಾಡಿದ್ರೆ ಮುಂದೆ ಪಶ್ಚಾತಾಪಪಡಬೇಕಾಗುತ್ತದೆ. ಹಾಗಾಗಿ ಕೂಡಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

First published:

  • 17

    Career Mistakes: 30+ ವಯಸ್ಸಿನ ಉದ್ಯೋಗಿಗಳು ಈ ತಪ್ಪುಗಳನ್ನು ಮಾಡಬಾರದು, ಕಷ್ಟದಲ್ಲೇ ಜೀವನ ಕಳೆಯಬೇಕಾಗುತ್ತೆ!

    30 ರ ಹರೆಯದಲ್ಲಿ ತಪ್ಪಿಸಬೇಕಾದ ಕೆಲವು ಕರಿಯರ್ ಮಿಸ್ಟೇಕ್ಸ್ ಇಲ್ಲಿವೆ. ಮದುವೆ, ಮಕ್ಕಳು ಎಂಬ ಜಂಜಾಟದಲ್ಲಿ ವೃತ್ತಿಯನ್ನು ಮರೆಯುವಂತಿಲ್ಲ. ಹಾಗಾಂತ ವೃತ್ತಿ ಮೇಲೆ ಸಂಪೂರ್ಣವಾಗಿ ಕೇಂದ್ರಿಕರಿಸುವಂತೆಯೂ ಇಲ್ಲ. ವರ್ಕ್ ಲೈಫ್ - ಬ್ಯಾಲೆನ್ಸ್ ಮಾಡಲೇಬೇಕಾದ ಅನಿರ್ವಾಯತೆ ಇದೆ. ಆ ನಿಟ್ಟಿನಲ್ಲಿ ಒಂದಷ್ಟು ಸಲಹೆಗಳು ಇಲ್ಲಿವೆ (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Career Mistakes: 30+ ವಯಸ್ಸಿನ ಉದ್ಯೋಗಿಗಳು ಈ ತಪ್ಪುಗಳನ್ನು ಮಾಡಬಾರದು, ಕಷ್ಟದಲ್ಲೇ ಜೀವನ ಕಳೆಯಬೇಕಾಗುತ್ತೆ!

    1) ಸೇವಿಂಗ್ಸ್ ಮಾಡದೇ ಇರುವುದು: 20ರ ಹರೆಯದಲ್ಲೇ ಕೆಲಸ ಮಾಡಲು ಶುರು ಮಾಡಿದ್ದರೂ ಬಹುತೇಕರು ಇಂದಿಗೂ ಹಣ ಉಳಿತಾಯ ಮಾಡಿಲ್ಲ. 30ರಲ್ಲೂ ಆ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯ ನಿಜಕ್ಕೂ ಕಷ್ಟವಾಗಲಿದೆ. ಸಂಬಳ ಬಂದೊಡನೆ ಮನಸ್ಸಿಗೆ ಬಂದಿದ್ದನ್ನು ಖರೀದಿಸುವ, ವಸ್ತುಗಳ ಮೂಲಕ ಶ್ರೀಮಂತಿಕೆ ತೋರಿಸುವ ಹಳ್ಳಕ್ಕೆ ಬೀಳಬೇಡಿ.

    MORE
    GALLERIES

  • 37

    Career Mistakes: 30+ ವಯಸ್ಸಿನ ಉದ್ಯೋಗಿಗಳು ಈ ತಪ್ಪುಗಳನ್ನು ಮಾಡಬಾರದು, ಕಷ್ಟದಲ್ಲೇ ಜೀವನ ಕಳೆಯಬೇಕಾಗುತ್ತೆ!

    ಒಬ್ಬ ವ್ಯಕ್ತಿಯು 30 ನೇ ವಯಸ್ಸಿಗೆ ಉತ್ತಮ ಆರ್ಥಿಕ ಉಳಿತಾಯವನ್ನು ಹೊಂದಿರುವುದು ಮುಖ್ಯ. ಸಂಬಳ ಎಷ್ಟೇ ಹೆಚ್ಚಾದರೂ ಅಗತ್ಯ ವೆಚ್ಚಗಳಿಗಾಗಿ ಹೆಚ್ಚುವರಿ ಹಣವನ್ನು ಉಳಿತಾಯ ಮಾಡಲೇಬೇಕು. ಅದೇ ರೀತಿ, ಸಣ್ಣ ಪ್ರಮಾಣದ ಹೂಡಿಕೆಯನ್ನು ಶುರು ಮಾಡಿರಬೇಕು. ಸಂಬಳವೊಂದೇ ನಿಮ್ಮ ಏಕೈಕ ಆದಾಯ ಮೂಲವಾಗಿರಬಾರದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Career Mistakes: 30+ ವಯಸ್ಸಿನ ಉದ್ಯೋಗಿಗಳು ಈ ತಪ್ಪುಗಳನ್ನು ಮಾಡಬಾರದು, ಕಷ್ಟದಲ್ಲೇ ಜೀವನ ಕಳೆಯಬೇಕಾಗುತ್ತೆ!

    2) ಅತಿಯಾದ ಕೆಲಸದಿಂದ ಸಂಬಂಧಗಳನ್ನು ನಿರ್ಲಕ್ಷಿಸುವುದು: ನಾವೆಲ್ಲರೂ ಹಣವನ್ನು ಗಳಿಸಲು ಶ್ರಮಿಸುತ್ತೇವೆ. ಆದರೆ ಕೆಲವರು ಯಾವಾಗಲೂ ಕೆಲಸ..ಕೆಲಸ.. ಅಂತ ವೈಯಕ್ತಿಕ ಸಂಬಂಧಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ವೃತ್ತಿಜೀವನದಲ್ಲಿ ಚೆನ್ನಾಗಿ ನೆಲೆಸಿದ ನಂತರ ಅವರು ಪ್ರಮುಖ ಸಂಬಂಧಗಳನ್ನು ಕಳೆದುಕೊಂಡಿರುತ್ತಾರೆ.

    MORE
    GALLERIES

  • 57

    Career Mistakes: 30+ ವಯಸ್ಸಿನ ಉದ್ಯೋಗಿಗಳು ಈ ತಪ್ಪುಗಳನ್ನು ಮಾಡಬಾರದು, ಕಷ್ಟದಲ್ಲೇ ಜೀವನ ಕಳೆಯಬೇಕಾಗುತ್ತೆ!

    ಹಾಗಾಗಿ ಹಣ ಸಂಪಾದನೆಗೆ ಪ್ರಾಮುಖ್ಯತೆ ನೀಡಿ ಸಂಬಂಧಗಳನ್ನು ನಿರ್ಲಕ್ಷಿಸಬೇಡಿ. ನೀವು ವಯಸ್ಸಾದಂತೆ, ಅರ್ಥಪೂರ್ಣ ಸಂಬಂಧಗಳನ್ನು ರೂಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ನೀವು ಚಿಕ್ಕವರಿದ್ದಾಗ ಅವುಗಳನ್ನು ಮಾಡಿ.

    MORE
    GALLERIES

  • 67

    Career Mistakes: 30+ ವಯಸ್ಸಿನ ಉದ್ಯೋಗಿಗಳು ಈ ತಪ್ಪುಗಳನ್ನು ಮಾಡಬಾರದು, ಕಷ್ಟದಲ್ಲೇ ಜೀವನ ಕಳೆಯಬೇಕಾಗುತ್ತೆ!

    3) ಆರ್ಥಿಕ ಕಾರಣದಿಂದ ಮಕ್ಕಳು ಬೇಡ ಎನ್ನುವುದು, ಮಕ್ಕಳು ಹೊರೆ ಎಂದು ಭಾವಿಸುವುದು: ನೀವು ಮಕ್ಕಳನ್ನು ಹೊಂದಲು ಬಯಸುತ್ತೀರಾ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ನಿಮ್ಮ 30ರ ವರ್ಷಗಳು ಸೂಕ್ತ ಸಮಯ. ಮಕ್ಕಳನ್ನು ಹೊಂದಲು ಸಿದ್ಧರಿಲ್ಲ ಎಂಬ ನಮ್ಮ ನಿರ್ಧಾರ ತಪ್ಪು ಎಂದು ಅನೇಕರು ತಮ್ಮ 40 ರ ದಶಕದಲ್ಲಿ ಅರಿತುಕೊಳ್ಳುತ್ತಾರೆ.

    MORE
    GALLERIES

  • 77

    Career Mistakes: 30+ ವಯಸ್ಸಿನ ಉದ್ಯೋಗಿಗಳು ಈ ತಪ್ಪುಗಳನ್ನು ಮಾಡಬಾರದು, ಕಷ್ಟದಲ್ಲೇ ಜೀವನ ಕಳೆಯಬೇಕಾಗುತ್ತೆ!

    4) ಮೋಜು-ಮಸ್ತಿನೇ ಜೀವನ ಅಲ್ಲ: ವರ್ಕ್, ಫ್ಯಾಮಿಲಿ ಒತ್ತಡದ ಕಾರಣ ನೀಡಿ ದೊಡ್ಡ ಪಾರ್ಟಿಗಳನ್ನು ಮಾಡುವುದು. ಮದ್ಯಪಾನ, ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಹಣ-ಆರೋಗ್ಯ ಎರಡೂ ಹಾಳಾಗುತ್ತದೆ. ಸಿನಿಮಾ, ಪ್ರವಾಸ ಜೀವನದ ಭಾಗವಾಗಿದ್ದರೆ ತೊಂದರೆ ಇಲ್ಲ, ಆದರೆ ನಿತ್ಯ ಕೆಟ್ಟ ಅಭ್ಯಾಸದಿಂದ ಬದುಕು ಹಾಳು ಮಾಡಿಕೊಳ್ಳಬೇಡಿ. (ಸಾಂದರ್ಭಿಕ ಚಿತ್ರ)

    MORE
    GALLERIES