ಸಹೋದ್ಯೋಗಿಯ ವೇತನ ಗೊತ್ತಾಗಿದ್ದೇ ಟರ್ನಿಂಗ್ ಪಾಯಿಂಟ್: ಮೊದಲು ಆಮಿ ಪೋರ್ಟರ್‌ಫೀಲ್ಡ್ ಆಕಸ್ಮಿಕವಾಗಿ ಪುರುಷ ಉದ್ಯೋಗಿಯ ಸಂಬಳವನ್ನು ಫ್ಯಾಕ್ಸ್‌ನಲ್ಲಿ ನೋಡಿಬಿಡುತ್ತಾರೆ. ಹಾಗಾಗಿ ಆಕೆಗೆ ಗೊತ್ತಾಗಿದ್ದು ಆ ವ್ಯಕ್ತಿಗೆ ತನಗಿಂತ ಹೆಚ್ಚು ಸಂಬಳ ಬರುತ್ತಿದೆ ಅನ್ನೋದು. ಆದರೆ ಆ ಕಂಪನಿಯಲ್ಲಿ ಆಕೆ ದೊಡ್ಡ ರೋಲ್‌ನಲ್ಲಿದ್ದರು ಹಾಗೆಯೇ ಹೆಚ್ಚು ಸಮಯದಿಂದ ಆ ಕಂಪನಿಯಲ್ಲೇ ಇದ್ದರು, ಇದಾದ ಬಳಿಕ ಆಕೆ ಹೊಸ ಕೆಲಸವನ್ನು ಹುಡುಕಲು ಆರಂಭಿಸಿದರು. ನಂತರ ಮೂರು ತಿಂಗಳ ನಂತರ ಬೇರೆ ಕೆಲಸ ಸಿಕ್ಕಿ ಆಕೆ ಹೊರಟುಹೋದಳು.
ಇನ್ನು, ಫೆಬ್ರವರಿಯಲ್ಲಿ ಪೋರ್ಟರ್‌ಫೀಲ್ಡ್ ಪುಸ್ತಕವನ್ನು ಪ್ರಕಟಿಸಿದ್ದು, ಅದರ ಹೆಸರು ಟು ವೀಕ್ಸ್ ನೋಟಿಸ್: ಫೈಂಡ್ ದಿ ಕರೇಜ್ ಟು ಕ್ವಿಟ್ ಯುವರ್ ಜಾಬ್, ಫೈಂಡ್ ದಿ ಕರೇಜ್ ಟು ಕ್ವಿಟ್ ಯುವರ್ ಮನಿ, ವರ್ಕ್ ವೇರ್ ಯು ವಾಂಟ್, ಆಂಡ್ ಚೇಂಜ್ ದಿ ವರ್ಲ್ಡ್ ಅಂತ. ಇದರಲ್ಲಿ ಅವರು ತಮ್ಮ ಉದ್ಯೋಗಗಳನ್ನು ತೊರೆಯಲು ಬಯಸುವ ಜನರಿಗೆ ಮೂರು ಪ್ರಮುಖ ಅಂಶಗಳನ್ನು ಪರಿಗಣಿಸಿ ಎಂದು ಸಲಹೆ ನೀಡಿದ್ದಾರೆ.
ನಿಮ್ಮ ಬಾಸ್‌ನ ಕೆಲಸ ನಿಮಗೆ ಬೇಡವಾದರೆ: ನೀವು ನಿಮ್ಮ ಬಾಸ್‌ನ ಕೆಲಸವನ್ನು ನೋಡಿ, ಆ ಕೆಲಸವನ್ನು ನೀವು ಮಾಡಲು ಇಷ್ಟಪಡುತ್ತೀರಾ ಎಂಬುದನ್ನು ನಿಮಗೇ ಕೇಳಿಕೊಳ್ಳಿ. ಆಗ ನಿಮ್ಮ ಮನಸ್ಸು 'ನನಗೆ ಅಂತಹ ಕೆಲಸ ಬೇಡ, ನಾನು ಹೆಚ್ಚು ಹಣವನ್ನು ಗಳಿಸಲು ಬಯಸುತ್ತೇನೆ, ನಾನು ಹೆಚ್ಚು ಸೃಜನಶೀಲವಾದದ್ದನ್ನು ಮಾಡಲು ಬಯಸುತ್ತೇನೆ ಎಂದುಕೊಂಡರೆ ನೀವು ಆ ಕೆಲಸವನ್ನು ತೊರೆಯಲು ಸರಿಯಾದ ಸಮಯ ಎಂದುಕೊಳ್ಳಬೇಕು.