2nd PUC ಪಾಸ್ ಆದ ಕನ್ನಡಿಗರು ಈ ಎಲ್ಲಾ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಅರ್ಹರು

Karnataka Government Jobs: ಕರ್ನಾಟಕ ರಾಜ್ಯದಲ್ಲಿ ವಿವಿಧ ಸರ್ಕಾರಿ ಹುದ್ದೆಗಳಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ನೇಮಕ ಮಾಡಲಾಗುತ್ತದೆ. 10ನೇ ತರಗತಿ ಪಾಸ್, ದ್ವಿತೀಯ ಪಿಯು ಪಾಸ್ ಆಧಾರದ ಮೇಲೆ ಅನೇಕ ಉದ್ಯೋಗಗಳಿಗೆ ನೇಮಕಾತಿ ಮಾಡಲಾಗುತ್ತದೆ. ಕನ್ನಡಿಗರಿಗೆ ಈ ಹುದ್ದೆಗಳ ನೇಮಕಾತಿಯಲ್ಲಿ ಅದ್ಯತೆ ಇರುತ್ತದೆ.

  • News18 Kannada
  • |
  •   | Bangalore [Bangalore], India
First published:

  • 17

    2nd PUC ಪಾಸ್ ಆದ ಕನ್ನಡಿಗರು ಈ ಎಲ್ಲಾ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಅರ್ಹರು

    ಹಾಗಾದರೆ ಸೆಕೆಂಡ್ ಪಿಯು ಪಾಸ್ ಆದ ಕನ್ನಡಿಗರು ರಾಜ್ಯ ಸರ್ಕಾರದಡಿ ಯಾವೆಲ್ಲಾ ಉದ್ಯೋಗಗಳನ್ನು ಪಡೆಯಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಉದ್ಯೋಗಗಳ ಪಟ್ಟಿ ಕೆಳಗಿನಂತಿದೆ.

    MORE
    GALLERIES

  • 27

    2nd PUC ಪಾಸ್ ಆದ ಕನ್ನಡಿಗರು ಈ ಎಲ್ಲಾ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಅರ್ಹರು

    1) ಟೈಪಿಸ್ಟ್ ಹುದ್ದೆಗಳು: ತಾಲೂಕು, ಜಿಲ್ಲಾ ಮಟ್ಟದ ಕೋರ್ಟ್ ಗಳು ಹಾಗೂ ಹೈಕೋರ್ಟ್ ನಲ್ಲಿ ಟೈಪಿಸ್ಟ್ ಅಥವಾ ಸ್ಟೆನೋಗ್ರಾಫರ್ ಹುದ್ದೆಗಳಿಗೆ ದ್ವಿತೀಯ ಪಿಯು ಪಾಸ್ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ಇದರ ಜತೆಗೆ ಕನ್ನಡ ಮತ್ತು ಇಂಗ್ಲಿಷ್ ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೆ ಉತ್ತೀರ್ಣರಾಗಿರಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    2nd PUC ಪಾಸ್ ಆದ ಕನ್ನಡಿಗರು ಈ ಎಲ್ಲಾ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಅರ್ಹರು

    2) ಪೊಲೀಸ್ ಪೇದೆ ಹುದ್ದೆ: ಸೆಕೆಂಡ್ ಪಿಯು ಪಾಸಾದವರು ಕರ್ನಾಟಕ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆ ಪಡೆಯಬಹುದು. ನೇಮಕಾತಿ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಹಾಗೂ ಮೆಡಿಕಲ್ ಪರೀಕ್ಷೆಗಳನ್ನು ದಾಟಬೇಕು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 47

    2nd PUC ಪಾಸ್ ಆದ ಕನ್ನಡಿಗರು ಈ ಎಲ್ಲಾ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಅರ್ಹರು

    3) SDA ಹುದ್ದೆಗಳು: ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿಯಲ್ಲೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿವೆ. ದ್ವಿತೀಯ ಪಿಯು ಪಾಸ್ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಲಿಖಿತ ಪರೀಕ್ಷೆ ಇರುತ್ತದೆ. ಅದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ. ಸಂದರ್ಶನ ಇರುವುದಿಲ್ಲ.

    MORE
    GALLERIES

  • 57

    2nd PUC ಪಾಸ್ ಆದ ಕನ್ನಡಿಗರು ಈ ಎಲ್ಲಾ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಅರ್ಹರು

    4) ಫಾರೆಸ್ಟ್ ಗಾರ್ಡ್ : ಈ ಸರ್ಕಾರಿ ಉದ್ಯೋಗಕ್ಕೂ ಸೆಕೆಂಡ್ ಪಿಯು ಪಾಸ್ ಆಗಿದ್ದರೆ ಸಾಕು. ಲಿಖಿತ ಪರೀಕ್ಷೆ, ಪಿಇಟಿ, ಪಿಎಸ್ ಟಿ, ಮೆಡಿಕಲ್ ಟೆಸ್ಟ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕಾಡು ಹಾಗೂ ಅರಣ್ಯ ಇಲಾಖೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    2nd PUC ಪಾಸ್ ಆದ ಕನ್ನಡಿಗರು ಈ ಎಲ್ಲಾ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಅರ್ಹರು

    5) ಗ್ರಾಮ ಲೆಕ್ಕಿಗರು: ಕಂದಾಯ ಇಲಾಖೆ ಅಡಿ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮ ಲೆಕ್ಕಿಗರು ಕೆಲಸ ಮಾಡಬೇಕಾಗುತ್ತದೆ. ಈ ಹುದ್ದೆಗಳ ನೇಮಕಾತಿಗೆ ದ್ವಿತೀಯ ಪಿಯು ಅಂಕಗಳೇ ಮಾನದಂಡ. ಪರೀಕ್ಷೆ ಆಗಲಿ, ಸಂದರ್ಶನವಾಗಲಿ ಇರುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    2nd PUC ಪಾಸ್ ಆದ ಕನ್ನಡಿಗರು ಈ ಎಲ್ಲಾ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಅರ್ಹರು

    6) ಗ್ರಾಮ ಪಂಚಾಯಿತಿ ಹುದ್ದೆಗಳು: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಆಡಳಿತ ನಿರ್ವಹಣೆಗೆ ಕಾರ್ಯದರ್ಶಿ ಗ್ರೇಡ್ 1, ಕಾರ್ಯದರ್ಶಿ ಗ್ರೇಡ್ 2, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳು ಇರುತ್ತವೆ. ಇವುಗಳಿಗೆ ಸೆಕೆಂಡ್ ಪಿಯು ಪಾಸ್ ನೊಂದಿಗೆ ಕಂಪ್ಯೂಟರ್ ಜ್ಞಾನ ಇದ್ದರೆ ಸಾಕು.

    MORE
    GALLERIES