ಈಕೆ ಜಾನ್ವಿ ಪವಾರ್, ಈಗ ವಯಸ್ಸು ಕೇವಲ 16. ಹರಿಯಾಣದ ಸಮಲ್ಖಾದ ಮಾಲ್ಪುರದಂತಹ ಸಣ್ಣ ಹಳ್ಳಿಯ ಹುಡುಗಿ ತನ್ನ 13ನೇ ವಯಸ್ಸಿನಲ್ಲೇ ಸೆಕೆಂಡ್ ಪಿಯು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಈಕೆಯ ತಂದೆ ಅವಳನ್ನು ಭಾರತದ ವಂಡರ್ ಗರ್ಲ್ ಜಾನ್ವಿ ಪವಾರ್ ಆಗಿ ಪರಿವರ್ತಿಸಿದರು. ತಂದೆಯ ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು ಇಂದು ಇಡೀ ಜಗತ್ತಿಗೆ ಜಾನ್ವಿ ಯಾರೆಂಬುವುದು ಗೊತ್ತಿದೆ.
ರಿಪೋರ್ಟ್ ಕಾರ್ಡ್ ನಲ್ಲಿರುವ ಅಂಕಗಳು ನಿಮ್ಮ ಜ್ಞಾನಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಜಾನ್ವಿ ಪವಾರ್ ಹೇಳಿದ್ದಾರೆ. ಒಂದು ನಿರ್ದಿಷ್ಟ ಕೋರ್ಸ್ ಅನ್ನು ಇಡೀ ವರ್ಷ ಓದಿದ ನಂತರ ಅಥವಾ ಕೆಲವು ದಿನಗಳ ಕಾಲ ಅದನ್ನು ಅಧ್ಯಯನ ಮಾಡಿದ ನಂತರ ನೀವು ಪರೀಕ್ಷೆಯನ್ನು ನೀಡಿದ್ದೀರಿ. ನಿಮ್ಮ ಸಾಮರ್ಥ್ಯವನ್ನು ನೀವು ತಿಳಿದುಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಕ್ಷೇತ್ರದ ಮಾಸ್ಟರ್ ಆಗಿರುತ್ತಾರೆ ಎಂದಿದ್ದಾರೆ.