

ನಿಮ್ಮ ಗರ್ಲ್ಫ್ರೆಂಡ್ನ ಗೆಳೆತಿ ಜೊತೆ ನಿಮಗೆ ಉತ್ತಮ ಗೆಳೆತನವಿದೆಯೇ? ಪರಸ್ಪರ ಇಬ್ಬರೂ ಮನಸ್ಸು ಬಿಚ್ಚಿ ಮಾತನಾಡುತ್ತೀರಾ? ನೀವಿಬ್ಬರೂ ಜೊತೆಯಾಗಿ ಸಮಯ ಕಳೆಯಲು ಇಷ್ಟಪಡುತ್ತೀರಾ? ಇದೆಂತಾ ಪ್ರಶ್ನೆ ಎಂದು ನೀವು ಯೋಚಿಸುತ್ತಿರಬಹುದು. ಇದೆಲ್ಲದಕ್ಕೂ ಇಲ್ಲಿದೆ ಉತ್ತರ.


ನಿಮ್ಮ ಪ್ರೇಮ ಸಾರಾಗವಾಗಿ ಸಾಗಲು ಗರ್ಲ್ಫ್ರೆಂಡ್ನ ಗೆಳೆತಿಯ ಸಹಕಾರ ಬಹಳ ಮುಖ್ಯವಾಗಿರುತ್ತದೆ. ಪ್ರೇಯಸಿಯ ಗೆಳೆತಿಯನ್ನು ದೂರ ಮಾಡಿದರೆ ಮುಂದೆ ನಿಮ್ಮ ಪ್ರೇಮಬಂಧಕ್ಕೆ ತೊಂದರೆಯಾಗಿ ಪರಿಣಮಿಸಬಹುದು.


ಪ್ರೇಯಸಿಯೊಂದಿಗೆ ನಿಮಗಿರುವ ಆತ್ಮೀಯತೆ ಅವಳಿಗೆ ಅವಳ ಬೆಸ್ಟ್ಫ್ರೆಂಡ್ ಜೊತೆಯಿರುತ್ತದೆ. ಪ್ರತಿ ಸರಿ ತಪ್ಪುಗಳನ್ನು ಅವರಿಬ್ಬರೂ ಹಂಚಿಕೊಂಡಿರುತ್ತಾರೆ. ಬೆಸ್ಟ್ಫ್ರೆಂಡ್ ಜೊತೆಗೆ ನೀವು ಫ್ರೆಂಡ್ ಆಗಿರದಿದ್ದರೆ ಅದುವೇ ನಿಮ್ಮ ಮೇಲಿನ ಅವಳ ದ್ವೇಷಕ್ಕೆ ಕಾರಣವಾಗಬಹುದು.


ನಿಮ್ಮ ಪ್ರೇಮ ಪ್ರಾರಂಭವಾಗುದಕ್ಕಿಂತ ಮುಂಚಿತವಾಗಿ ಬೆಸ್ಟ್ಫ್ರೆಂಡ್ ಸಿಕ್ಕಿರುತ್ತಾಳೆ. ಅವಳೊಂದಿಗೆ ತನ್ನ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದಿರುವುದರಿಂದ ಇಬ್ಬರಲ್ಲೂ ಉತ್ತಮ ಒಡನಾಟವಿರುತ್ತದೆ. ಅವರ ಜೀವನಕ್ಕೆ ನಿಮ್ಮ ಎಂಟ್ರಿ ಮತ್ತು ಒಬ್ಬರನ್ನು ನಿರ್ಲಕ್ಷ್ಯ ಮಾಡುವುದು ತುಂಬಾ ನೋವುಂಟು ಮಾಡುತ್ತದೆ.


ಹಾಗೆಯೇ ನಿಮ್ಮ ಪ್ರೇಯಸಿಯನ್ನು ಗೆಳೆತಿಯೊಂದಿಗೆ ಹೋಲಿಕೆ ಮಾಡಲು ಹೋಗಬೇಡಿ. ಇದರಿಂದ ನಿಮ್ಮಿಬ್ಬರ ಸಂಬಂಧ ಹಾಳಾಗುವುದಲ್ಲದೆ ಗೆಳೆತಿಯರಿಬ್ಬರ ಫ್ರೆಂಡ್ಶಿಪ್ ಮುರಿದು ಬೀಳುವ ಸಾಧ್ಯತೆ ಇರುತ್ತದೆ.


ನಿಮ್ಮ ಪ್ರೇಮದ ವಿಷಯದಲ್ಲಿ ಬೆಸ್ಟ್ಫ್ರೆಂಡ್ ಉತ್ತಮ ಪಾತ್ರ ನಿಭಾಯಿಸುತ್ತಾಳೆ. ಅವಳ ನೆರವಿನಿಂದ ಪ್ರೀತಿಸಲು ಸಮಯವನ್ನು ಹೊಂದಿಸಿಕೊಳ್ಳಬಹುದು. ಸಂಗಾತಿಗೆ ಸರ್ಪ್ರೈಸ್ ನೀಡಲು ಸಹಾಯ ಮಾಡಬಹುದು. ಜಗಳದ ಸಂದರ್ಭದಲ್ಲಿ ಇಬ್ಬರನ್ನು ಒಂದು ಮಾಡುವ ನೆರವಿಗೆ ಬರಬಹುದು. ಇಬ್ಬರ ಬಾಂಧವ್ಯ ಉತ್ತಮಗೊಳ್ಳಲು ಸಲಹೆಗಳನ್ನು ಕೇಳಿ ಪಡೆಯಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಅವರೂ ಕೂಡ ನಿಮ್ಮ ಬೆಸ್ಟ್ಫ್ರೆಂಡ್ ಆಗಬಹುದು.