Prithvi Shaw: ಹೊಸ ಮನೆ ಖರೀದಿಸಿದ ಪೃಥ್ವಿ ಶಾ, ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ!
Prithvi Shaw: ಪೃಥ್ವಿ ಶಾ ಕನಸಿನ ಮನೆಯನ್ನು ಖರೀದಿಸಿದ್ದಾರೆ. ಪೃಥ್ವಿ ಶಾ ಖರೀದಿಸಿರುವ ಫ್ಲಾಟ್ ಬೆಲೆ ಎಷ್ಟು ಅಂತ ತಿಳಿದರೆ ಶಾಕ್ ಆಗ್ತೀರಾ. ಎಕನಾಮಿಕ್ ಟೈಮ್ಸ್ ಪ್ರಕಾರ, ಅವರು ಬಾಂದ್ರಾದ ಕೇಸಿ ರಸ್ತೆಯಲ್ಲಿರುವ ಪ್ರಾಜೆಕ್ಟ್ 81 ಅರೆಟ್ ಅಪಾರ್ಟ್ಮೆಂಟ್ನ ಎಂಟನೇ ಮಹಡಿಯನ್ನು ಖರೀದಿಸಿದ್ದಾರೆ.
ಪೃಥ್ವಿ ಶಾ.. ಇವರನ್ನು ಎಲ್ಲರೂ ಜ್ಯೂನಿಯರ್ ಸಚಿನ್ ಎಂದು ಕರೆಯುತ್ತಿದ್ದರು. ಸಚಿನ್ ತೆಂಡೂಲ್ಕರ್ ಅವರಂತೆ ಬ್ಯಾಟಿಂಗ್ ಮಾಡಿ ಪೃಥ್ವಿ ಶಾ ಹೆಸರು ಮಾಡಿದ್ದರು. ಸಚಿನ್ರಂತೆ ಆಡಿ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು.
2/ 7
ಐಪಿಎಲ್ 2022 ಸೀಸನ್‌ಗೂ ಮುನ್ನ ಬಿಸಿಸಿಐ ನಡೆಸಿದ ಫಿಟ್ನೆಸ್ ಪರೀಕ್ಷೆಯಲ್ಲಿ ಪೃಥ್ವಿರಾಜ್ ವಿಫಲರಾಗಿದ್ದರು. ಇದರೊಂದಿಗೆ ಅವರ ಫಿಟ್ನೆಸ್ ಬಗ್ಗೆ ಟೀಕೆ ವ್ಯಕ್ತವಾಗಿತ್ತು.
3/ 7
ತಮ್ಮ ಫಿಟ್ನೆಸ್ ಕಳೆದುಕೊಂಡಿರುವ ಪೃಥ್ವಿ ಶಾ ಫಾರ್ಮ್ಗೆ ಮರಳಬೇಕಿದೆ. 2022ರಲ್ಲಿ ಒಳ್ಳೆಯ ಪ್ರದರ್ಶನ ನೀಡಿದರೆ ಮತ್ತೆ ಟೀಂ ಇಂಡಿಯಾ ಸೇರಿಕೊಳ್ಳುವ ಅವಕಾಶ ಇದೆ.
4/ 7
ಅದೇನೇ ಇರಲಿ ಪೃಥ್ವಿ ಶಾ ಕನಸಿನ ಮನೆಯನ್ನು ಖರೀದಿಸಿದ್ದಾರೆ. ಪೃಥ್ವಿ ಶಾ ಖರೀದಿಸಿರುವ ಫ್ಲಾಟ್ ಬೆಲೆ ಎಷ್ಟು ಅಂತ ತಿಳಿದರೆ ಶಾಕ್ ಆಗ್ತೀರಾ. ಎಕನಾಮಿಕ್ ಟೈಮ್ಸ್ ಪ್ರಕಾರ, ಅವರು ಬಾಂದ್ರಾದ ಕೇಸಿ ರಸ್ತೆಯಲ್ಲಿರುವ ಪ್ರಾಜೆಕ್ಟ್ 81 ಅರೆಟ್ ಅಪಾರ್ಟ್ಮೆಂಟ್ನ ಎಂಟನೇ ಮಹಡಿಯನ್ನು ಖರೀದಿಸಿದ್ದಾರೆ.
5/ 7
ಮುಂಬೈನ ಬಾಂದ್ರಾದಲ್ಲಿನ ಪ್ರೀಮಿಯಂ ವಸತಿ ಅಪಾರ್ಟ್‌ಮೆಂಟ್‌ನಲ್ಲಿ 10.5 ಕೋಟಿ ರೂ.ಗೆ ಫ್ಲಾಟ್ ಖರೀದಿಸಿದ್ದಾರೆ. ಪೃಥ್ವಿ 2209 ಚದರ ಅಡಿ ಫ್ಲ್ಯಾಟ್ ಖರೀದಿಸಿದ್ದಾರೆ. 1654 ಚದರ ಅಡಿಯ ವಿಶಾಲವಾದ ಟೆರೇಸ್ ಕೂಡ ಇದೆ.
6/ 7
ಇದರ ಜೊತೆಗೆ ಪೃಥ್ವಿ ಶಾಗೆ ಮೂರು ವಿಶಾಲವಾದ ಕಾರ್ ಪಾರ್ಕಿಂಗ್ ಹೊಂದಿದ್ದಾರೆ. ಏಪ್ರಿಲ್ 28ರಂದು ರಿಜೆಸ್ಟ್ರೆಶನ್ ಮಾಡಿಸಲಾಗಿದೆ.ಪೃಥ್ವಿ ಶಾ ಸದ್ಯ ಐಪಿಎಲ್ 15ನೇ ಸೀಸನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.
7/ 7
ಪೃಥ್ವಿ ಈ ಋತುವಿನಲ್ಲಿ ಇದುವರೆಗೆ ಒಂಬತ್ತು ಪಂದ್ಯಗಳಲ್ಲಿ 259 ರನ್ ಗಳಿಸಿದ್ದಾರೆ. 2018ರ ಅಂಡರ್-19 ವಿಶ್ವಕಪ್ ಗೆದ್ದ ತಂಡ ನಾಯಕನಾಗಿ ಐಪಿಎಲ್ ಪ್ರವೇಶಿಸಿದ್ದ ಪೃಥ್ವಿ ಶಾ ಅವರನ್ನು 2018ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 1.2 ಕೋಟಿ ರೂ.ಗೆ ಖರೀದಿಸಿತ್ತು.