Virender Sehwag: IPLನ ಅತ್ಯಂತ ಕಳಪೆ ಆಟಗಾರರನ್ನು ಹೆಸರಿಸಿದ ಸೆಹ್ವಾಗ್

IPL 2020: ಐಪಿಎಲ್ ಆರಂಭದಿಂದಲೇ ಟೂರ್ನಿಯ ಕುರಿತು ಸಕ್ರೀಯರಾಗಿದ್ದ ಟೀಮ್ ಇಂಡಿಯಾ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್, ಹಲವು ಕ್ರಿಕೆಟಿಗರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೆಲ ಪಂದ್ಯಗಳ ಸೋಲು-ಗೆಲುವನ್ನು ವಿಮರ್ಶಿಸಿದ್ದರು.

First published:

  • 19

    Virender Sehwag: IPLನ ಅತ್ಯಂತ ಕಳಪೆ ಆಟಗಾರರನ್ನು ಹೆಸರಿಸಿದ ಸೆಹ್ವಾಗ್

    ಕೊರೋನಾ ಭೀತಿ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್​ನ್ನು ಬಿಸಿಸಿಐ ಯಶಸ್ವಿಯಾಗಿ ಆಯೋಜಿಸಿದೆ. ಯುಎಇ ನಲ್ಲಿ ನಡೆದ ಈ ಟೂರ್ನಿಯಲ್ಲಿ ಹಲವು ಆಟಗಾರರು ಮಿಂಚಿದ್ರೆ, ಕೆಲವರು ಹೀನಾಯ ಪ್ರದರ್ಶನ ನೀಡಿದ್ದರು.

    MORE
    GALLERIES

  • 29

    Virender Sehwag: IPLನ ಅತ್ಯಂತ ಕಳಪೆ ಆಟಗಾರರನ್ನು ಹೆಸರಿಸಿದ ಸೆಹ್ವಾಗ್

    ಅದರಲ್ಲೂ ಮರಳುಗಾಡಿನ ಪಿಚ್​ನಲ್ಲಿ ಯುವ ದಾಂಡಿಗರು ಅಬ್ಬರಿಸಿದ್ರೆ, ಅನುಭವಿ ಆಟಗಾರರು ಮಕಾಡೆ ಮಲಗಿದ್ದರು. ಇದರಿಂದ ಹಲವು ತಂಡಗಳ ಲೆಕ್ಕಚಾರಗಳು ತಲೆಕೆಳಗಾಗಿದ್ದವು. ಅತ್ತ ಭಾರೀ ಮೊತ್ತ ನೀಡಿದ ಖರೀದಿಸಿದ ಆಟಗಾರರ ಕಳಪೆ ಪ್ರದರ್ಶನ ಕೂಡ ಫ್ರಾಂಚೈಸಿಯ ಚಿಂತೆಯನ್ನು ಹೆಚ್ಚಿಸಿತ್ತು.

    MORE
    GALLERIES

  • 39

    Virender Sehwag: IPLನ ಅತ್ಯಂತ ಕಳಪೆ ಆಟಗಾರರನ್ನು ಹೆಸರಿಸಿದ ಸೆಹ್ವಾಗ್

    ಐಪಿಎಲ್ ಆರಂಭದಿಂದಲೇ ಟೂರ್ನಿಯ ಕುರಿತು ಸಕ್ರೀಯರಾಗಿದ್ದ ಟೀಮ್ ಇಂಡಿಯಾ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್, ಹಲವು ಕ್ರಿಕೆಟಿಗರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೆಲ ಪಂದ್ಯಗಳ ಸೋಲು-ಗೆಲುವನ್ನು ವಿಮರ್ಶಿಸಿದ್ದರು.

    MORE
    GALLERIES

  • 49

    Virender Sehwag: IPLನ ಅತ್ಯಂತ ಕಳಪೆ ಆಟಗಾರರನ್ನು ಹೆಸರಿಸಿದ ಸೆಹ್ವಾಗ್

    ಅಷ್ಟೇ ಅಲ್ಲದೆ ಇದೀಗ 2020 ಐಪಿಎಲ್​ನ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಐವರು ವಿದೇಶಿ ಸ್ಟಾರ್ ಆಟಗಾರರನ್ನು ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ಇಬ್ಬರು ಆರ್​ಸಿಬಿ ಆಟಗಾರರು ಇರುವುದು ಮತ್ತೊಂದು ವಿಶೇಷ. ಹಾಗಿದ್ರೆ ಸೆಹ್ವಾಗ್ ತಿಳಿಸಿದ ಅತ್ಯಂತ ಕಳಪೆ ಆಟಗಾರರು ಯಾರು ನೋಡೋಣ.

    MORE
    GALLERIES

  • 59

    Virender Sehwag: IPLನ ಅತ್ಯಂತ ಕಳಪೆ ಆಟಗಾರರನ್ನು ಹೆಸರಿಸಿದ ಸೆಹ್ವಾಗ್

    ಆಂಡ್ರೆ ರಸ್ಸೆಲ್ (ಕೊಲ್ಕತ್ತಾ ನೈಟ್ ರೈಡರ್ಸ್): ಸ್ಪೋಟಕ ಆಟಕ್ಕೆ ಹೆಸರುವಾಸಿಯಾಗಿರುವ ರಸೆಲ್ ಈ ಬಾರಿಯ ಸೀಸನ್​ನಲ್ಲಿ 10 ಪಂದ್ಯಗಳಿಂದ ಗಳಿಸಿದ್ದು ಕೇವಲ 117 ರನ್ ಮಾತ್ರ. ಹಾಗೆಯೇ ಬೌಲಿಂಗ್​ನಲ್ಲಿ 6 ವಿಕೆಟ್ ಪಡೆದಿದ್ದರು.

    MORE
    GALLERIES

  • 69

    Virender Sehwag: IPLನ ಅತ್ಯಂತ ಕಳಪೆ ಆಟಗಾರರನ್ನು ಹೆಸರಿಸಿದ ಸೆಹ್ವಾಗ್

    ಗ್ಲೆನ್ ಮ್ಯಾಕ್ಸ್​ವೆಲ್ (ಕಿಂಗ್ಸ್ ಇಲೆವೆನ್ ಪಂಜಾಬ್): 13 ಪಂದ್ಯಗಳಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ ಬ್ಯಾಟ್​ನಿಂದ ಸಿಡಿದದ್ದು ಕೇವಲ 108 ರನ್​ ಮಾತ್ರ.

    MORE
    GALLERIES

  • 79

    Virender Sehwag: IPLನ ಅತ್ಯಂತ ಕಳಪೆ ಆಟಗಾರರನ್ನು ಹೆಸರಿಸಿದ ಸೆಹ್ವಾಗ್

    ಶೇನ್ ವಾಟ್ಸನ್ (ಚೆನ್ನೈ ಸೂಪರ್ ಕಿಂಗ್ಸ್): 11 ಪಂದ್ಯಗಳಲ್ಲಿ ಚೆನ್ನೈ ಪರ ಬ್ಯಾಟ್ ಬೀಸಿದ ಶೇನ್ ವಾಟ್ಸನ್ ಈ ಬಾರಿ ಕಲೆಹಾಕಿದ್ದು 299 ರನ್​.

    MORE
    GALLERIES

  • 89

    Virender Sehwag: IPLನ ಅತ್ಯಂತ ಕಳಪೆ ಆಟಗಾರರನ್ನು ಹೆಸರಿಸಿದ ಸೆಹ್ವಾಗ್

    ಆರೋನ್ ಫಿಂಚ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು): ಆರ್​ಸಿಬಿ ಪರ 12 ಪಂದ್ಯಗಳಲ್ಲಿ ಬ್ಯಾಟ್ ಮಾಡಿದ್ದ ಫಿಂಚ್ 268 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

    MORE
    GALLERIES

  • 99

    Virender Sehwag: IPLನ ಅತ್ಯಂತ ಕಳಪೆ ಆಟಗಾರರನ್ನು ಹೆಸರಿಸಿದ ಸೆಹ್ವಾಗ್

    ಡೇಲ್ ಸ್ಟೇನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು): ಆರ್​ಸಿಬಿ ಬೌಲಿಂಗ್​ ಲೈನ್​ನಲ್ಲಿ ಜಾದು ಮಾಡಲಿದ್ದಾರೆ ಎಂದು ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಸ್ಟೇನ್ ನಿರಾಸೆ ಮೂಡಿಸಿದ್ದರು. 3 ಪಂದ್ಯಗಳಲ್ಲಿ ಕಣಕ್ಕಿಳಿದ ಸ್ಟೇನ್ 133 ರನ್​ ನೀಡಿ 1 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು.

    MORE
    GALLERIES