ಸ್ಟಾರ್ ಕನ್ನಡಿಗ ಸೇರಿ ಐದು ಆಟಗಾರರನ್ನು ಕೈಬಿಡೋಕೆ ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್
ತಂಡವನ್ನು ಮತ್ತಷ್ಟು ಬಲಗೊಳಿಸೋಕೆ ಮುಂದಾಗಿರುವ ಪಂಜಾಬ್, ಕಳೆ ಪ್ರದರ್ಶನ ನೀಡಿದ ಐದು ಆಟಗಾರರನ್ನು ಕೈಬಿಡೋಕೆ ಮುಂದಾಗಿದೆ. ಹಾಗಾದರೆ, ಆ ಐದು ಆಟಗಾರರು ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
News18 Kannada | November 19, 2020, 12:37 PM IST
1/ 7
ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಈ ಬಾರಿ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಕೊನೆಗೆ ಸತತ ಐದು ಗೆಲುವು ಕಂಡಿತ್ತು. ಆದಾಗ್ಯೂ ಪ್ಲೇಆಫ್ಗೆ ಏರಲು ಪಂಜಾಬ್ ಬಳಿ ಸಾಧ್ಯವಾಗಿಲ್ಲ.
2/ 7
ಹೀಗಾಗಿ, ತಂಡವನ್ನು ಮತ್ತಷ್ಟು ಬಲಗೊಳಿಸೋಕೆ ಮುಂದಾಗಿರುವ ಪಂಜಾಬ್, ಕಳೆ ಪ್ರದರ್ಶನ ನೀಡಿದ ಐದು ಆಟಗಾರರನ್ನು ಕೈಬಿಡೋಕೆ ಮುಂದಾಗಿದೆ. ಈ ಮೂಲಕ ಪ್ರಮುಖ ಬದಲಾವಣೆ ಮಾಡೋಕೆ ಮುಂದಾಗಿದೆ ಪಂಜಾಬ್ ತಂಡ. ಹಾಗಾದರೆ, ಆ ಐದು ಆಟಗಾರರು ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
3/ 7
ಗ್ಲೇನ್ ಮ್ಯಾಕ್ಸ್ವೆಲ್ ಬಗ್ಗೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಭಾರೀ ನಿರೀಕ್ಷೆ ಇಟ್ಟುಕೊಂಡಿತ್ತು. ಇದಕ್ಕಾಗಿಯೇ 10.75 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತ್ತು. ಆದರೆ, ಇವರು ತುಂಬಾನೇ ಕಳಪೆ ಪ್ರದರ್ಶನ ನೀಡಿದ್ದರು. ಇವರ ಎವರೇಜ್ ರನ್ ರೇಟ್ ಕೇವಲ 15.35 ಇದ್ದರೆ, ಸ್ಟ್ರೈಕ್ ರೇಟ್, 101.88 ಇದೆ. ಸತತ ಕಳಪೆ ಪ್ರದರ್ಶನ ನೀಡಿದ್ದರೂ ಅವರನ್ನು ನಿರಂತರವಾಗಿ ಆಡಿಸಲಾಗಿತ್ತು. ಆದಾಗ್ಯೂ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
4/ 7
ಜೇಮ್ಸ್ ನೀಶಮ್: ಜೇಮ್ಸ್ ನೀಶಮ್ ಆಲ್ರೌಂಡರ್ ಎನ್ನುವ ಕಾರಣಕ್ಕೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ, ಮೊದಲು ಆಡಿದ ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ. ಆಡಿದ ಐದು ಪಂದ್ಯಗಳಲ್ಲಿ ಕೇವಲ 19ರನ್ ಕಲೆ ಹಾಕಿದ್ದಾರೆ. ಬೌಲಿಂಗ್ನಲ್ಲಿ ಕಿತ್ತಿದ್ದು ಕೇವಲ 2 ವಿಕೆಟ್ ಮಾತ್ರ.
5/ 7
ಕೃಷ್ಣಪ್ಪ ಗೌತಮ್:ಕನ್ನಡಿಗ ಕೃಷ್ಣಪ್ಪ ಗೌತಮ್ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದೇ ಕಾರಣಕ್ಕೆ ಅವರನ್ನು ಕಿಂಗ್ಸ್ ಇಲವೆನ್ ಪಂಜಾಬ್ ಖರೀದಿ ಮಾಡಿತ್ತು. ಈ ವೇಳೆ ಅವರು ಹೊಡೆದಿದ್ದು ಕೇವಲ 42 ರನ್. ಬೌಲಿಂಗ್ನಲ್ಲಿ ಎರಡು ವಿಕೆಟ್ ಕಿತ್ತಿದ್ದರೂ ಎಕಾನಮಿ 10.50 ಇದೆ. ಇದು ಪಂಜಾಬ್ ತಂಡಕ್ಕೆ ತುಟ್ಟಿ ಆಗಿತ್ತು.
6/ 7
ಸರ್ಫರಾಜ್ ಖಾನ್: ಮುಂಬೈ ಪರ ರಣಜಿ ಮ್ಯಾಚ್ನಲ್ಲಿ ಆಡಿದ್ದ ಸರ್ಫರಾಜ್ ಖಾನ್ ಸತತ ಎರಡು ಡಬಲ್ ಸೆಂಚುರಿ ಬಾರಿಸಿದ್ದರು. ಇದರಿಂದ ಇಂಪ್ರೆಸ್ ಆಗಿದ್ದ ಪಂಜಾಬ್ ಸರ್ಫರಾಜ್ ಅವರನ್ನು ಖರೀದಿಸಿತ್ತು. ಐದು ಪಂದ್ಯಗಳಲ್ಲಿ ಇವರು ಕೇವಲ 33 ರನ್ ಬಾರಿಸಿದ್ದರು.
7/ 7
ಕರುಣ್ ನಾಯರ್: ಟೆಸ್ಟ್ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ನಂತರ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಎನ್ನುವ ಖ್ಯಾತಿ ಕರುಣ್ ನಾಯರ್ ಅವರದ್ದು. ಆದರೆ, ಐಪಿಎಲ್ ಮ್ಯಾಚ್ನಲ್ಲಿ ಅವರಿಗೆ ಸೂಕ್ತ ರೀತಿಯಲ್ಲಿ ಪ್ರದರ್ಶನ ನೀಡೋಕೆ ಸಾಧ್ಯವಾಗಿಲ್ಲ.