ವರದಾನವಾದ ಕನ್ನಡಿಗ ದೇವದತ್ ಪಡಿಕ್ಕಲ್: ದೇವದತ್ ಪಡಿಕ್ಕಲ್ ವಯಸ್ಸು ಕೇವಲ 20. ಈ ಯುವಕನ್ನು ಬೇಗನೆ ಪೆವಿಲಿಯನ್ಗೆ ಅಟ್ಟಬಹುದು ಎಂಬುದು ಹೈದರಾಬಾದ್ ಬೌಲರ್ಗಳ ಲೆಕ್ಕಾಚಾರವಾಗಿತ್ತು. ಆದರೆ, ದೇವದತ್ ಪಡಿಕ್ಕಲ್ ಬ್ಯಾಟ್ ಬೀಸುವ ಶೈಲಿ ನೋಡಿ ಎಲ್ಲರೂ ಮಂತ್ರ ಮುಗ್ಧರಾದರು. ಎಲ್ಲಾ ಬಾಲ್ಗಳನ್ನು ಅತ್ಯುತ್ತಮವಾಗಿ ಎದುರಿಸುವ ಮೂಲಕ ಸೈ ಎನಿಸಿಕೊಂಡರು. ಮೊದಲ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿದರು. 42 ಬಾಲ್ಗಳಿಗೆ 56 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.
ಮಿಚೆಲ್ ಮಾರ್ಷ್ ಗಾಯಾಳು: ಸನ್ ರೈಸರ್ಸ್ ಹೈದಾರಾಬಾದ್ ತಂಡದ ಪ್ರಮುಖ ಬಾಲರ್ ಮಿಚೆಲ್ ಮಾರ್ಷ್ ಮೊದಲ ಓವರ್ನಲ್ಲೇ ಗಾಯಗೊಂಡು ಹೊರ ನಡೆದರು. ಇದು ನೇರವಾಗಿ ಆರ್ ಸಿಬಿಗೆ ವರದಾನಾವಯ್ತು ಎನ್ನಬಹುದು. ಐಪಿಎಲ್ನಲ್ಲಿ ಅವರು ಈವರೆಗೆ 21 ಪಂದ್ಯಗಳನ್ನಾಡಿದ್ದು, 20 ವಿಕೆಟ್ ತೆಗೆದಿದ್ದಾರೆ. 225 ರನ್ ಬಾರಿಸಿದ್ದಾರೆ. ಹೀಗಾಗಿ, ಅವರು ನಿನ್ನೆ ಇದ್ದಿದ್ದರೆ ಹೈದರಾಬಾದ್ಗೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಲ್ಲೂ ಆಧಾರವಾಗುತ್ತಿದ್ದರು.