RR vs MI Playing 11: ಮುಂಬೈ ತಂಡದಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

ಐಪಿಎಲ್‌ನಲ್ಲಿ ಇದುವರೆಗೆ ಉಭಯ ತಂಡಗಳು 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಮುಂಬೈ 11 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ 10 ರಲ್ಲಿ ವಿಜಯ ಸಾಧಿಸಿದೆ.

First published:

  • 17

    RR vs MI Playing 11: ಮುಂಬೈ ತಂಡದಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

    ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ.

    MORE
    GALLERIES

  • 27

    RR vs MI Playing 11: ಮುಂಬೈ ತಂಡದಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

    ಇಂದಿನ ಪಂದ್ಯವು ರಾಜಸ್ಥಾನ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆಲ್ಲುವ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದೆ. ಹಾಗೆಯೇ ಮುಂಬೈ ಇಂಡಿಯನ್ಸ್​ ಇಂದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್​ ಅನ್ನು ಖಚಿತಪಡಿಸಿಕೊಳ್ಳಲಿದೆ.

    MORE
    GALLERIES

  • 37

    RR vs MI Playing 11: ಮುಂಬೈ ತಂಡದಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

    ಐಪಿಎಲ್‌ನಲ್ಲಿ ಇದುವರೆಗೆ ಉಭಯ ತಂಡಗಳು 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಮುಂಬೈ 11 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ 10 ರಲ್ಲಿ ವಿಜಯ ಸಾಧಿಸಿದೆ.

    MORE
    GALLERIES

  • 47

    RR vs MI Playing 11: ಮುಂಬೈ ತಂಡದಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

    ಈ ಸೀಸನ್​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಜಸ್ಥಾನ್ ವಿರುದ್ದ 20 ಓವರ್‌ಗಳಲ್ಲಿ 193 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಸ್ಮಿತ್ ಪಡೆ ಕೇವಲ 18.1 ಓವರ್‌ಗಳಲ್ಲಿ 136 ರನ್​ಗಳಿಗೆ ಆಲೌಟ್ ಆಗುವ ಮೂಲಕ 57 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಇದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ರೋಹಿತ್ ಪಡೆ ಕಣಕ್ಕಿಳಿಯಲಿದೆ.

    MORE
    GALLERIES

  • 57

    RR vs MI Playing 11: ಮುಂಬೈ ತಂಡದಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

    ಇಂದಿನ ಪಂದ್ಯದಲ್ಲೂ ರೋಹಿತ್ ಶರ್ಮಾ ಕಣಕ್ಕಿಳಿಯುತ್ತಿಲ್ಲ. ಅವರ ಬದಲಾಗಿ ಮುಂಬೈ ತಂಡವನ್ನು ಪೊಲಾರ್ಡ್ ಮುನ್ನಡೆಸಲಿದ್ದಾರೆ. ಹಾಗೆಯೇ ನಾಥನ್ ಕೌಲ್ಟರ್​ನೈಲ್ ಸ್ಥಾನದಲ್ಲಿ ಜೇಮ್ಸ್ ಪ್ಯಾಟಿನ್ಸನ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಆದರೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇಲ್ಲಿದೆ ಉಭಯ ತಂಡಗಳು.

    MORE
    GALLERIES

  • 67

    RR vs MI Playing 11: ಮುಂಬೈ ತಂಡದಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

    ಮುಂಬೈ ಇಂಡಿಯನ್ಸ್ ತಂಡ: ಕೀರನ್ ಪೊಲಾರ್ಡ್​ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಜೇಮ್ಸ್ ಪ್ಯಾಟಿನ್ಸನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್​ಪ್ರೀತ್ ಬುಮ್ರಾ, ಸೌರಭ್ ತಿವಾರಿ

    MORE
    GALLERIES

  • 77

    RR vs MI Playing 11: ಮುಂಬೈ ತಂಡದಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

    ರಾಜಸ್ಥಾನ್ ರಾಯಲ್ಸ್ ತಂಡ: ಬೆನ್ ಸ್ಟೋಕ್ಸ್ , ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸ್ಟೀವನ್ ಸ್ಮಿತ್ (ನಾಯಕ), ಜೋಸ್ ಬಟ್ಲರ್, ರಿಯಾನ್ ಪರಾಗ್, ರಾಹುಲ್ ತೇವಟಿಯಾ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಅಂಕಿತ್ ರಜ‌ಪೂತ್, ಕಾರ್ತಿಕ್ ತ್ಯಾಗಿ.

    MORE
    GALLERIES