RR vs KXIP Playing 11: ಸ್ಮಿತ್ ಪಡೆಯಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

RR vs KXIP Playing 11: ಉಭಯ ತಂಡಗಳು 20 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ್ ರಾಯಲ್ಸ್ 11 ರಲ್ಲಿ ಗೆದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ 9 ರಲ್ಲಿ ಜಯ ಸಾಧಿಸಿದೆ.

First published:

 • 19

  RR vs KXIP Playing 11: ಸ್ಮಿತ್ ಪಡೆಯಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

  ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ  50ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್​ ಇಲೆವೆನ್ ಪಂಜಾಬ್ ಮುಖಾಮುಖಿಯಾಗಿವೆ. ಉಭಯ ತಂಡಗಳಿಗೂ ಇಂದಿನ ಪಂದ್ಯ ಮಹತ್ವದಾಗಿದ್ದು, ಗೆಲುವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ತವಕದಲ್ಲಿದೆ.

  MORE
  GALLERIES

 • 29

  RR vs KXIP Playing 11: ಸ್ಮಿತ್ ಪಡೆಯಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

  ಎರಡು ತಂಡಗಳು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ಹೀಗಾಗಿ ಇಂದಿನ ಪಂದ್ಯ ಭರ್ಜರಿ ಪೈಪೋಟಿಗೆ ಕಾರಣವಾಗಲಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬೆನ್ ಸ್ಟೋಕ್ಸ್​ ಕಳೆದ ಪಂದ್ಯದಲ್ಲಿ ಮಿಂಚಿದ್ರೆ, ಇತ್ತ ಪಂಜಾಬ್ ತಂಡದದಲ್ಲಿ ಕ್ರಿಸ್ ಗೇಲ್ ಕೊನೆಯ ಪಂದ್ಯದಲ್ಲಿ ಆರ್ಭಿಟಿಸಿದ್ದರು.  ಅದೇ ರೀತಿ ಆರಂಭಿಕರಾಗಿ ಮಯಾಂಕ್ ಅಗರ್ವಾಲ್ ಉತ್ತಮ ಫಾರ್ಮ್​ನಲ್ಲಿದ್ರೆ, ರಾಯಲ್ಸ್ ಪರ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

  MORE
  GALLERIES

 • 39

  RR vs KXIP Playing 11: ಸ್ಮಿತ್ ಪಡೆಯಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

  ಶಾರ್ಜಾ ಮೈದಾನ ಕೂಡ ಬ್ಯಾಟಿಂಗ್​​ಗೆ ಹೇಳಿ ಮಾಡಿಸಿದಂತಿದ್ದು, ಹೀಗಾಗಿ ಉಭಯ ತಂಡಗಳಿಂದ ರನ್​ ಸುರಿಮಳೆಯಾಗಬಹುದು. ಇನ್ನು ಎರಡು ತಂಡಗಳು ಈ ಬಾರಿ 200 ಕ್ಕೂ ಅಧಿಕ ರನ್​ ಬಾರಿಸಿರುವ ಕಾರಣ ಇಂದಿನ ಪಂದ್ಯದಲ್ಲೂ ಬೃಹತ್ ಟಾರ್ಗೆಟ್ ನಿರೀಕ್ಷಿಸಬಹುದು.

  MORE
  GALLERIES

 • 49

  RR vs KXIP Playing 11: ಸ್ಮಿತ್ ಪಡೆಯಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

  ಉಭಯ ತಂಡಗಳು  20 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ್ ರಾಯಲ್ಸ್ 11 ರಲ್ಲಿ ಗೆದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ 9 ರಲ್ಲಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ನಡೆದ ಪಂಜಾಬ್ ಮತ್ತು ರಾಜಸ್ಥಾನ್ ನಡುವಣ ಪಂದ್ಯ ರೋಚಕತೆಗೆ ಸಾಕ್ಷಿಯಾಗಿತ್ತು. ಸಂಜು ಸ್ಯಾಮ್ಸನ್ ಅವರ 42 ಎಸೆತಗಳ 85 ಮತ್ತು ರಾಹುಲ್ ತೆವಾಠಿಯಾ ಹಾಗೂ ಸ್ಟೀವ್ ಸ್ಮಿತ್‌ರ ಅರ್ಧಶತಕಗಳ ನೆರವಿನಿಂದ ಆರ್‌ಆರ್ ಪಂಜಾಬ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು . ಕಿಂಗ್ಸ್ ಇಲೆವೆನ್ ಓಪನರ್ ಮಯಾಂಕ್ ಅಗರ್ವಾಲ್ ಅವರ ಸ್ಪೋಟಕ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 223 ರನ್ ಪೇರಿಸಿತ್ತು. ಆದರೆ ಈ ಮೊತ್ತವನ್ನು 19.3 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ಹೊಸ ಇತಿಹಾಸ ಬರೆದಿದ್ದರು. ಇದೇ ಆತ್ಮ ವಿಶ್ವಾಸದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿಯಲಿದೆ.

  MORE
  GALLERIES

 • 59

  RR vs KXIP Playing 11: ಸ್ಮಿತ್ ಪಡೆಯಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

  ಹಾಗೆಯೇ ಕಳೆದ ಸೀಸನ್​ನಲ್ಲಿ ಆಡಿದ 2 ಪಂದ್ಯಗಳಲ್ಲೂ ಕಿಂಗ್ಸ್​ ಇಲೆವೆನ್ ಗೆದ್ದು ಬೀಗಿತ್ತು. ಈ ಎರಡು ಪಂದ್ಯಗಳಲ್ಲೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ 180ಕ್ಕಿಂತ ಹೆಚ್ಚು ರನ್ ಬಾರಿಸಿತ್ತು ಎಂಬುದು ವಿಶೇಷ.

  MORE
  GALLERIES

 • 69

  RR vs KXIP Playing 11: ಸ್ಮಿತ್ ಪಡೆಯಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

  ಹಾಗೆಯೇ ಇದನ್ನು ಚೇಸ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್​ ಕೂಡ ಎರಡು ಬಾರಿ ಕೂಡ 170 ರನ್ ಗಳಿಸಿರುವುದು ಮತ್ತೊಂದು ವಿಶೇಷ. ಹೀಗಾಗಿ ಇಂದಿನ ಪಂದ್ಯದಲ್ಲೂ ಉತ್ತಮ ಚೇಸಿಂಗ್​ನ್ನು ಉಭಯ ತಂಡಗಳಿಂದ ನಿರೀಕ್ಷಿಸಬಹುದು.

  MORE
  GALLERIES

 • 79

  RR vs KXIP Playing 11: ಸ್ಮಿತ್ ಪಡೆಯಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

  ಇನ್ನು ಇಂದು ಕಣಕ್ಕಿಳಿಯುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಜೈಸ್ವಾಲ್ ಬದಲು ಅಂಕಿತ್, ಹಾಗೆಯೇ ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ರಾಜಸ್ಥಾನ್ ಆರಂಭಿಕ ಜೋಶ್ ಬಟ್ಲರ್ ಇಂದು ಇನಿಂಗ್ಸ್ ಆರಂಭಿಸಲಿದ್ದಾರೆ. ಆದರೆ ಪಂಜಾಬ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.  ಉಭಯ ತಂಡಗಳು ಇಂತಿವೆ.

  MORE
  GALLERIES

 • 89

  RR vs KXIP Playing 11: ಸ್ಮಿತ್ ಪಡೆಯಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

  RR: ಜೋಸ್ ಬಟ್ಲರ್, ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತೆವಾಠಿಯಾ, ಬೆನ್ ಸ್ಟೋಕ್ಸ್, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ವರುಣ್ ಆರೋನ್ , ಕಾರ್ತಿಕ್ ತ್ಯಾಗಿ

  MORE
  GALLERIES

 • 99

  RR vs KXIP Playing 11: ಸ್ಮಿತ್ ಪಡೆಯಲ್ಲಿ 1 ಬದಲಾವಣೆ: ಉಭಯ ತಂಡಗಳು ಇಂತಿವೆ

  KXIP: ಕೆ.ಎಲ್. ರಾಹುಲ್ (ನಾಯಕ) , ಕ್ರಿಸ್ ಗೇಲ್, ನಿಕೋಲಸ್ ಪೂರನ್,  ಮಂದೀಪ್ ಸಿಂಗ್, ದೀಪಕ್ ಹೂಡ, ಗ್ಲೆನ್ ಮ್ಯಾಕ್ಸ್ ವೆಲ್, ಕ್ರಿಸ್ ಜೋರ್ಡನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್, ಅರ್ಷದೀಪ್ ಸಿಂಗ್

  MORE
  GALLERIES