ಈ ಒಂದು ನಿರ್ಧಾರ, ಸಿಎಸ್ಕೆ ಒಂದೇ ಏಟಿಗೆ ಮೂರು ಹಕ್ಕಿ ಸಿಕ್ಕಂತಾಯಿತು. ಮೊದಲನೆಯದಾಗಿ ಅವರು ಅತ್ಯುತ್ತಮ ನಾಯಕರಲ್ಲಿ ಒಬ್ಬರು. ಎರಡನೆದು ಧೋನಿ ಪ್ರಚಂಡ ಫಿನಿಶರ್. ಟಿ 20 ಯಲ್ಲಿ ಫಿನಿಶರ್ಗಳಿಗೆ ಬಹಳ ಮುಖ್ಯವಾದ ಪಾತ್ರವಿದೆ. ಮೂರನೆಯದಾಗಿ ಅವರು ಉತ್ತಮ ವಿಕೆಟ್ ಕೀಪರ್ ಕೂಡ ಹೌದು. ಹೀಗಾಗಿ ಸಿಎಸ್ಕೆ ತಂಡದ ಅಂದಿನ ತೀರ್ಮಾನ ಅತ್ಯುತ್ತಮವಾಗಿತ್ತು ಎಂದು ಬದ್ರಿನಾಥ್ ಹೇಳಿದರು.