55 ಎಸೆತ , 20 ಸಿಕ್ಸ್, 5 ಬೌಂಡರಿ.. 154 ರನ್ಗಳು....ಹೌದು, ಭಾನುವಾರ ಆಸ್ಟ್ರೇಲಿಯಾದಲ್ಲಿ ನಡೆದ ಕ್ವೀನ್ಸ್ಲ್ಯಾಂಡ್ ಪ್ರೀಮಿಯರ್ ಕ್ರಿಕೆಟ್ ಲೀಗ್ನಲ್ಲಿ ಕ್ರಿಸ್ ಲಿನ್ ಅಕ್ಷರಶಃ ಅಬ್ಬರಿಸಿದ್ದರು.
2/ 9
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಒಂದೇ ಒಂದು ಮ್ಯಾಚ್ ಅವಕಾಶ ಪಡೆಯದ ಕ್ರಿಸ್ ಲಿನ್ ಕ್ವೀನ್ಸ್ಲ್ಯಾಂಡ್ ಲೀಗ್ನಲ್ಲಿ ಟೂಂಬುಲ್ ಪರ ಆಡುತ್ತಿದ್ದಾರೆ.
3/ 9
ಬ್ರಿಸ್ಬೇನ್ನ ಆಕ್ಸೆನ್ಹ್ಯಾಮ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸನ್ಶೈನ್ ಕೋಸ್ಟ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಕ್ರೀಸ್ಗೆ ಬರುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಲಿನ್ ಸಿಕ್ಸ್ - ಫೋರ್ಗಳ ಸುರಿಮಳೆಗೈದರು.
4/ 9
55 ಎಸೆತಗಳನ್ನು ಎದುರಿಸಿದ ಕ್ರಿಸ್ ಲಿನ್ ಅಂತಿಮವಾಗಿ 20 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಸ್ಪೋಟಕ 154 ರನ್ ಬಾರಿಸಿ ಔಟಾದರು. ಇಲ್ಲಿ 154 ರನ್ಗಳಲ್ಲಿ 140 ರನ್ಗಳು ಮೂಡಿಬಂದಿರುವುದು ಸಿಕ್ಸ್-ಫೋರ್ಗಳ ಮೂಲಕ ಎಂಬುದು ವಿಶೇಷ.
5/ 9
ಕ್ರಿಸ್ ಲಿನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಟೂಂಬುಲ್ ತಂಡ ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 266 ರನ್ಗೆ ಬಂದು ನಿಂತಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸನ್ಶೈನ್ ಕೋಸ್ಟ್ ತಂಡ ಕೂಡ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿತು.
6/ 9
43 ಎಸೆತಗಳಲ್ಲಿ 109 ರನ್ ಬಾರಿಸಿದ ಬೇ ಮಹೆರ್ ಒಂದು ಹಂತದಲ್ಲಿ ತಂಡವನ್ನು ಗೆಲುವಿನ ಸಮೀಪಕ್ಕೆ ತಲುಪಿಸಿದ್ದರು. ಆದರೆ ಅಂತಿಮ ಓವರ್ಗಳಲ್ಲಿ ಉತ್ತಮವಾಗಿ ದಾಳಿ ನಡೆಸಿದ ಟೂಂಬುಲ್ 18 ರನ್ಗಳ ರೋಚಕ ಜಯ ಸಾಧಿಸಿತು.
7/ 9
ಈ ಬಾರಿ ಐಪಿಎಲ್ನಲ್ಲಿ ಮೆಗಾ ಹರಾಜು ನಡೆಯುವುದು ಬಹುತೇಕ ಖಚಿತವಾಗಿದ್ದು, ಹೀಗಾಗಿ ಪ್ರತಿಯೊಂದು ತಂಡಗಳು 3 ಆಟಗಾರರನ್ನು ಹೊರತುಪಡಿಸಿ ಉಳಿದವರನ್ನು ಬಿಡುಗಡೆ ಮಾಡಬೇಕಿದೆ. ಅತ್ತ ಮುಂಬೈ ಇಂಡಿಯನ್ಸ್ ಪರ ಒಂದೇ ಒಂದು ಪಂದ್ಯವಾಡದ ಕ್ರಿಸ್ ಲಿನ್ ಈ ಬಾರಿ ಇತರೆ ಫ್ರಾಂಚೈಸಿಗಳಿಗೆ ಖರೀದಿಗೆ ಲಭ್ಯವಿರಲಿದ್ದಾರೆ.
8/ 9
ಕೆಕೆಆರ್ ಪರ 41 ಪಂದ್ಯಗಳನ್ನಾಡಿರುವ ಕ್ರಿಸ್ ಲಿನ್ 1280 ರನ್ ಕಲೆಹಾಕಿದ್ದಾರೆ. ಪವರ್ಪ್ಲೇನಲ್ಲಿ ಸ್ಪೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ಆಸಕ್ತಿ ಹೊಂದಿದೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳೆದ ಬಾರಿಯ ಹರಾಜಿನಲ್ಲಿ ಕ್ರಿಸ್ ಲಿನ್ ಮೇಲೆ ಕಣ್ಣಿಟ್ಟಿದ್ದರು.
9/ 9
ಆದರೆ ಅಂತಿಮವಾಗಿ ಆರೋನ್ ಫಿಂಚ್ ಅವರನ್ನು ಖರೀದಿಸಿ ಲಿನ್ ಅವರನ್ನು ಕೈ ಬಿಟ್ಟಿದ್ದರು. ಇದೀಗ ಈ ಬಾರಿ ಮೆಗಾ ಹರಾಜು ನಡೆಯುವುದರಿಂದ ಆರ್ಸಿಬಿ ಫಿಂಚ್ ಅವರನ್ನು ಬಿಡುಗಡೆ ಮಾಡಲಿದೆ. ಅಲ್ಲದೆ ಸ್ಪೋಟಕ ಆರಂಭಿಕ ಆಟಗಾರ ಕ್ರಿಸ್ ಲಿನ್ ಅವರ ಖರೀದಿಗೆ ಆಸಕ್ತಿ ಹೊಂದಿದೆ ಎಂಬ ಮಾತುಗಳು ಫ್ರಾಂಚೈಸಿ ಮೂಲಗಳಿಂದ ಕೇಳಿ ಬರುತ್ತಿದೆ.