#3 ಧವಲ್ ಕುಲಕರ್ಣಿ: ಈ ಸೀಸನ್ನಲ್ಲಿ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಆಡದ ಧವಲ್ ಕುಲಕರ್ಣಿ, ಹೊಸ ಚೆಂಡಿನೊಂದಿಗೆ ಐಪಿಎಲ್‌ನಲ್ಲಿ ಹಲವಾರು ಬಾರಿ ಬೌಲಿಂಗ್ ಮಾಡಿದ್ದರು. ಅಷ್ಟೇ ಅಲ್ಲದೆ ಆರಂಭದಲ್ಲೇ ಬ್ಯಾಟ್ಸ್‌ಮನ್‌ಗಳು ರನ್ ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಕುಲಕರ್ಣಿ 90 ಐಪಿಎಲ್ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಅದರಲ್ಲಿ 8 ಬಾರಿ ಮೇಡಿನ್ ಓವರ್ ಎಸೆದ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.