ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರ್ಸಿಬಿ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದ ರಾಹುಲ್ 69 ಎಸೆತಗಳಲ್ಲಿ 132 ರನ್ ಚಚ್ಚಿ ಹೊಸ ದಾಖಲೆ ಬರೆದರು. ಈ ಸ್ಪೋಟಕ ಇನಿಂಗ್ಸ್ನಲ್ಲಿ ರಾಹುಲ್ ಬ್ಯಾಟ್ನಿಂದ ಸಿಡಿದದ್ದು ಭರ್ಜರಿ 7 ಸಿಕ್ಸರ್ಗಳು ಹಾಗೂ 14 ಬೌಂಡರಿಗಳು. ಈ ಒಂದು ಇನಿಂಗ್ಸ್ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಆ ದಾಖಲೆಗಳ ಮಾಹಿತಿ ಇಲ್ಲಿದೆ.
ಇನ್ನು ಭಾರತ ಹಾಗೂ ವಿದೇಶದಲ್ಲಿ ಐಪಿಎಲ್ ಶತಕ ಬಾರಿಸಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಈ ಹಿಂದೆ ಎಬಿ ಡಿವಿಲಿಯರ್ಸ್ 2009 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್‌ನಲ್ಲಿ ಶತಕ ಬಾರಿಸಿದ್ದರು. ಹಾಗೆಯೇ ಭಾರತದಲ್ಲಿ 2015, 2016 ಸೀಸನ್ನಲ್ಲಿ ಶತಕ ಸಿಡಿಸಿದ್ದರು. ಇದೀಗ ಈ ಪಟ್ಟಿಗೆ ರಾಹುಲ್ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಸೀಸನ್ನಲ್ಲಿ ರಾಹುಲ್ ಮುಂಬೈ ವಿರುದ್ಧ ಸ್ಪೋಟಕ ಸೆಂಚುರಿ ಸಿಡಿಸಿದ್ದರು. ಇದೀಗ ಆರ್ಸಿಬಿ ವಿರುದ್ದ ದುಬೈನಲ್ಲಿ ಮಿಂಚಿದ್ದಾರೆ.
ಆರ್ಸಿಬಿ-ಕಿಂಗ್ಸ್ ಇಲೆವೆನ್ ಪಂಜಾಬ್ ಪಂದ್ಯದಲ್ಲಿ ನಾಯಕ ರಾಹುಲ್ 132 ರನ್ ಬಾರಿಸಿದ್ರೆ, ಕೊಹ್ಲಿ ಗಳಿಸಿದ್ದು ಕೇವಲ ಒಂದು ರನ್. ಅದು ಐಪಿಎಲ್ ಪಂದ್ಯವೊಂದರ ನಾಯಕರಿಬ್ಬರ ಮೊತ್ತದ ಅತೀ ದೊಡ್ಡ ಅಂತರ (131 ರನ್ಗಳ ಅಂತರ). ಈ ಹಿಂದೆ ಈ ದಾಖಲೆ ವಾರ್ನರ್ (126) ಹಾಗೂ ಗಂಭೀರ್ (11) ಹೆಸರಿನಲ್ಲಿತ್ತು. ಕೆಕೆಆರ್ ಮಾಜಿ ನಾಯಕ ಹಾಗೂ ಎಸ್ಆರ್ಹೆಚ್ ನಾಯಕನ ಅಂತರವಿದ್ದದ್ದು 115 ರನ್ಗಳು. ಇದೀಗ ಈ ದಾಖಲೆ ರಾಹುಲ್ ಪಾಲಾಗಿದೆ.