IPL 2020: 13ನೇ ಸೀಸನ್ ಐಪಿಎಲ್ನ ಮೊದಲ ಪಂದ್ಯಗಳಲ್ಲಿ ಸೋಲು ಕಂಡಿರುವ ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಇಂದು ಮುಖಾಮುಖಿಯಾಗಲಿವೆ.
2/ 8
ಆರ್ಸಿಬಿ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್ರೈಸರ್ಸ್ ತಂಡವು 10 ರನ್ಗಳಿಂದ ಸೋಲು ಕಂಡಿದ್ದರೆ, ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 49 ರನ್ಗಳಿಂದ ಪರಾಜಯಗೊಂಡಿತ್ತು.
3/ 8
ಉಭಯ ತಂಡಗಳು ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ಜಯದ ಖಾತೆಯನ್ನು ತೆರೆಯಲು ಸಕಲ ರೀತಿಯಲ್ಲೂ ಸನ್ನದ್ಧವಾಗಿವೆ.
4/ 8
ಹಾಗೆಯೇ ಮೊದಲ ಸೋಲಿನ ಪರಿಣಾಮ ಉಭಯ ತಂಡಗಳಲ್ಲೂ ಕೆಲವು ಬದಲಾವಣೆಯಾಗುವ ಸಾಧ್ಯತೆಯಿದೆ. ಗಾಯಗೊಂಡಿರುವ ಎಸ್ಆರ್ಹೆಚ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಟೂರ್ನಿಯಿಂದ ಹೊರಗುಳಿದಿದ್ದು, ಇವರ ಸ್ಥಾನದಲ್ಲಿ ಇಂದು ಮೊಹಮ್ಮದ್ ನಬಿ ಕಣಕ್ಕಿಳಿಯುವ ನಿರೀಕ್ಷೆಯಿದೆ.
5/ 8
ಅತ್ತ ಕೊಲ್ಕತ್ತಾ ತಂಡವು ಮೊದಲ ಸೋಲಿನ ಹೊರತಾಗಿಯೂ ಅದೇ ತಂಡವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದ್ದು, ಒಂದು ವೇಳೆ ಕಳೆದ ಪಂದ್ಯದಲ್ಲಿ ದುಬಾರಿ ಎನಿಸಿದ್ದ ವೇಗಿ ಪ್ಯಾಟ್ ಕಮಿನ್ಸ್ ಬದಲು ಕೆರಿಬಿಯನ್ ಸೂಪರ್ ಲೀಗ್ನಲ್ಲಿ ಮಿಂಚಿದ್ದ ಅಮೆರಿಕ ಕ್ರಿಕೆಟಿಗ ಅಲಿ ಖಾನ್ಗೆ ಅವಕಾಶ ನೀಡಬಹುದು.
6/ 8
ಎರಡು ತಂಡಗಳು ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದ್ದು, ಹೀಗಾಗಿ ಸಿಕ್ಸ್ -ಫೋರ್ಗಳ ಸುರಿಮಳೆಯನ್ನು ನಿರೀಕ್ಷಿಸಬಹುದು. ಅದರಲ್ಲೂ ಸಿಪಿಎಲ್ನಲ್ಲಿ ಗಮನ ಸೆಳೆದ ರಶೀದ್ ಖಾನ್ ಹಾಗೂ ಆಂಡ್ರೆ ರಸೆಲ್ ಹಣಾಹಣಿ ಇಲ್ಲೂ ಕೂಡ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ಒಟ್ಟಿನಲ್ಲಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಂಭನೀಯ ಆಟಗಾರರು ಯಾರೆಂದರೆ...