KKR vs RR Playing 11 IPL 2020 - KKR vs RR Playing 11: ಸ್ಮಿತ್ ವರ್ಸಸ್ ಡಿಕೆ: ಉಭಯ ತಂಡಗಳು ಇಂತಿವೆ
ರಾಜ್ಯದೇಶ-ವಿದೇಶಸಿನಿಮಾಕ್ರೀಡೆಲೈಫ್ ಸ್ಟೈಲ್ಫೋಟೋLive TVCoronaಟೆಕ್ExplainedGamesಟ್ರೆಂಡ್Jobs ರಾಜ್ಯದೇಶ-ವಿದೇಶಸಿನಿಮಾಕ್ರೀಡೆಲೈಫ್ ಸ್ಟೈಲ್ಫೋಟೋLive TVCoronaಟೆಕ್ExplainedGamesಟ್ರೆಂಡ್Jobs ಹೋಮ್ » ಫೋಟೋ » IPL KKR vs RR Playing 11: ಸ್ಮಿತ್ ವರ್ಸಸ್ ಡಿಕೆ: ಉಭಯ ತಂಡಗಳು ಇಂತಿವೆ KKR vs RR Playing 11: ಉಭಯ ತಂಡಗಳು ಐಪಿಎಲ್ನಲ್ಲಿ 20 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿ ಅಂಕಿ-ಅಂಶಗಳಲ್ಲೂ ಎರಡು ತಂಡಗಳು ಸಮಬಲ ಸಾಧಿಸಿವೆ. ಕೆಕೆಆರ್ 10 ಬಾರಿ ಗೆದ್ದಿದ್ರೆ, ಆರ್ಆರ್ ಕೂಡ 10 ಬಾರಿ ವಿಜಯ ಸಾಧಿಸಿದೆ. News18 Kannada | September 30, 2020, 7:04 PM IST 1/ 10 ಐಪಿಎಲ್ನಲ್ಲಿ ಇಂದು ಸತತ ಗೆಲುವಿನ ಮೂಲಕ ಹ್ಯಾಟ್ರಿಕ್ ಬಾರಿಸುವ ಹುಮ್ಮಸ್ಸಿನಲ್ಲಿರುವ ರಾಜಸ್ಥಾನ್ ರಾಯಲ್ಸ್ ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. 2/ 10 ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸರ್ವಾಧಿಕ ಮೊತ್ತವನ್ನು ಬೆನ್ನಟ್ಟಿ ದಾಖಲೆ ಸ್ಥಾಪಿಸಿದ ಹೆಗ್ಗಳಿಕೆ ಹೊಂದಿರುವ ಸ್ಮಿತ್ ಬಳಗವನ್ನು ದಿನೇಶ್ ಕಾರ್ತಿಕ್ ನೇತೃತ್ವದ ಕೊಲ್ಕತ್ತಾ ಕಲಿಗಳು ಕಟ್ಟಿ ಹಾಕುತ್ತಾರೆಯೇ ಎಂಬ ಪ್ರಶ್ನೆಯೊಂದು ಕ್ರಿಕೆಟ್ ಪ್ರೇಮಿಗಳಲ್ಲಿದೆ. ಏಕೆಂದರೆ ಸನ್ರೈಸರ್ಸ್ ಹೈದರಬಾದ್ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ. 3/ 10 ಹಾಗೆಯೇ ಉಭಯ ತಂಡಗಳು ಕೂಡ ಸಮಬಲದಿಂದ ಕೂಡಿದೆ. ಆರ್ಆರ್ ಪರ ಸಿಡಿಲಮರಿಯಾಗಿ ಸಂಜು ಸ್ಯಾಮ್ಸನ್ ಇದ್ದರೆ, ಅತ್ತ ಕೆಕೆಆರ್ ಪರ ದೈತ್ಯ ಆಂಡ್ರೆ ರಸೆಲ್ ಎಂಬ ಡೇಂಜರಸ್ ಬ್ಯಾಟ್ಸ್ಮನ್ ಇದ್ದಾರೆ. ಇಲ್ಲಿ ಸ್ಮಿತ್ ಆರ್ಭಟಿಸಿದ್ರೆ, ಅಲ್ಲಿ ಇಯಾನ್ ಮೋರ್ಗನ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. 4/ 10 ಇತ್ತ ಪ್ಯಾಟ್ ಕಮಿನ್ಸ್ ಮಾರಕ ದಾಳಿ ಮೂಲಕ ಗಮನ ಸೆಳೆದರೆ, ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ ಮ್ಯಾಜಿಕ್ ಬೌಲರ್ ಇದ್ದಾರೆ. ಹಾಗೆಯೇ ಕೆಕೆಆರ್ನಲ್ಲಿ ಶುಭ್ಮನ್ ಗಿಲ್ ಎಂಬ ಯುವ ದಾಂಡಿಗ ಮಿಂಚುತ್ತಿದ್ದರೆ, ಆರ್ಆರ್ನಲ್ಲಿ ರಾಹುಲ್ ತೆವಾಠಿಯಾ ಎಂಬ ಹೊಸ ಹೀರೋ ಉದಯಿಸಿದ್ದಾನೆ. 5/ 10 ಒಟ್ಟಾರೆ ನೋಡುವುದಾದರೆ ಉಭಯ ತಂಡಗಳು ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿದೆ. ಹೀಗಾಗಿ ಎರಡೂ ತಂಡಗಳಿಂದ ಇಂದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ನ್ನು ನಿರೀಕ್ಷಿಸಬಹುದಾಗಿದೆ. 6/ 10 ಇನ್ನು ಈ ಹಿಂದಿನ ಅಂಕಿ ಅಂಶಗಳನ್ನು ನೋಡುವುದಾದ್ರೆ ಉಭಯ ತಂಡಗಳು ಐಪಿಎಲ್ನಲ್ಲಿ 20 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿ ಅಂಕಿ-ಅಂಶಗಳಲ್ಲೂ ಎರಡು ತಂಡಗಳು ಸಮಬಲ ಸಾಧಿಸಿವೆ. ಕೆಕೆಆರ್ 10 ಬಾರಿ ಗೆದ್ದಿದ್ರೆ, ಆರ್ಆರ್ ಕೂಡ 10 ಬಾರಿ ವಿಜಯ ಸಾಧಿಸಿದೆ. ಹೀಗಾಗಿ ಅಂಕಿ ಅಂಶಗಳ ಪ್ರಕಾರ ಎರಡು ಸಮಾನವಾಗಿದೆ ಎಂದೇ ಹೇಳಬಹುದು. 7/ 10 ಇನ್ನು ಕಳೆದ ಸೀಸನ್ನಲ್ಲಿನ ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ, 2 ಮುಖಾಮುಖಿಯಲ್ಲಿ ರಾಜಸ್ಥಾನ್ ಒಂದು ಗೆದ್ದರೆ, ಮತ್ತೊಂದನ್ನು ಕೊಲ್ಕತ್ತಾ ಗೆದ್ದು ಬೀಗಿತ್ತು. ಹಾಗೆಯೇ 2014ರ ಯುಎಇ ಐಪಿಎಲ್ನಲ್ಲೂ ಉಭಯ ತಂಡಗಳು ಒಂದು ಪಂದ್ಯವನ್ನು ಆಡಿದೆ. ಅಬುಧಾಬಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತನ್ನ 20 ಓವರ್ಗಳಲ್ಲಿ 152/5 ರನ್ ಗಳಿಸಿತ್ತು. ಇದನ್ನು ಚೇಸ್ ಮಾಡಿದ್ದ ಕೆಕೆಆರ್ ಕೂಡ 152/8 ಬಾರಿಸಿತ್ತು. 8/ 10 ಬಳಿಕ ಸೂಪರ್ ಓವರ್ನಲ್ಲೂ ಎರಡೂ ತಂಡಗಳು 11 ರನ್ ಬಾರಿಸಿದ್ದವು. ಹೀಗಾಗಿ ಬೌಂಡರಿ ಎಣಿಕೆ ನಿಯಮದಲ್ಲಿ ಕೊಲ್ಕತ್ತಾ ವಿರುದ್ಧ ರಾಜಸ್ಥಾನ್ನ್ನು ವಿಜಯಿ ಎಂದು ಘೋಷಿಸಲಾಯಿತು. ಹಾಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. 9/ 10 RR: ಜೋಸ್ ಬಟ್ಲರ್ , ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತಿವಾಠಿಯಾ, ಶ್ರೇಯಾಸ್ ಗೋಪಾಲ್, ಟಾಮ್ ಕರ್ರನ್, ಜೋಫ್ರಾ ಆರ್ಚರ್, ಅಂಕಿತ್ ರಾಜ್ಪೂತ್, ಜಯದೇವ್ ಉನಾದ್ಕತ್. 10/ 10 KKR : ಸುನಿಲ್ ನರೈನ್, ಶುಭ್ಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮೋರ್ಗಾನ್, ದಿನೇಶ್ ಕಾರ್ತಿಕ್ (ನಾಯಕ), ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಕಮಲೇಶ್ ನಾಗರ್ಕೋಟಿ. ತಾಜಾ ಸುದ್ದಿಕೊಪ್ಪಳದಲ್ಲಿ ನಾಳೆಯಿಂದ ಆರಂಭವಾಗಲಿದೆ ಬಸ್ ಸಂಚಾರ; ಇಡೀ ಬಸ್ ನಿಲ್ದಾಣ ಸ್ಯಾನಿಟೈಜ್Unlock| ಇಳಿಯುತ್ತಿರುವ ಕೊರೋನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ!Crime News| ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಗೆ ವಾಮಾಚಾರ ಮಾಡಿ ನರಬಲಿಗೆ ಯತ್ನ; ಅದೃಷ್ಟವಶಾತ್ ತಪ್ಪಿದ ಅನಾಹುತRamesh Jarkiholi| ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ; ಮುಂಬೈನಲ್ಲಿ ಹಿರಿಯ ನಾಯಕರ ಜತೆಗೆ ಮಹತ್ವ ಚರ್ಚೆ! Top Stories ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ; ಮುಂಬೈನಲ್ಲಿ ಹಿರಿಯ ನಾಯಕರ ಜತೆಗೆ ಮಹತ್ವ ಚರ್ಚೆ! ಕರ್ನಾಟಕದಲ್ಲಿ 3.4 ಲಕ್ಷ ಮಕ್ಕಳನ್ನು ಬಾಧಿಸಲಿದೆ ಕೊರೋನಾ ಮೂರನೇ ಅಲೆ?; ತಜ್ಞರ ಎಚ್ಚರಿಕೆ! ಪ್ರಧಾನಿ ಮೋದಿ ಅವಧಿಯಲ್ಲಾದ ಐದು ಮಹಾ ಪ್ರಮಾದಗಳು; ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಬಿಜೆಪಿ! ಆರ್ಥಿಕತೆಯನ್ನು ಕಾಡುತ್ತಿದೆ ಕೊರೋನಾ, ಬಡವರ ತವರಾಯಿತೇ ಭಾರತ? ಇಲ್ಲಿದೆ ವಾಸ್ತವ ಚಿತ್ರಣ! ಕೊಪ್ಪಳದಲ್ಲಿ ನಾಳೆಯಿಂದ ಆರಂಭವಾಗಲಿದೆ ಬಸ್ ಸಂಚಾರ; ಇಡೀ ಬಸ್ ನಿಲ್ದಾಣ ಸ್ಯಾನಿಟೈಜ್