ರಾಬಿನ್ ಉತ್ತಪ್ಪ: ರಾಬಿನ್ ಉತ್ತಪ್ಪ ಅವರು ಕೆಕೆಆರ್ ಪರ ಆರು ವರ್ಷಗಳ ಕಾಲ ಆಡಿದ್ದರು. ಕೆಕೆಆರ್ ಪರ ಆಡುವಾಗ ರಾಬಿನ್ ಉತ್ತಪ್ಪ 84 ಇನ್ನಿಂಗ್ಸ್‌ಗಳಲ್ಲಿ 2400 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2014 ರಲ್ಲಿ ಕೆಕೆಆರ್ ಪ್ರಶಸ್ತಿ ಗೆದ್ದ ಸಮಯದಲ್ಲಿ ಉತ್ತಪ್ಪ ಅವರು ಪರ್ಪಲ್ ಕ್ಯಾಪ್ ಪಡೆದಿದ್ದರು. ಒಂದಾರ್ಥದಲ್ಲಿ ಆಂಡ್ರೆ ರಸೆಲ್ ನಂತರದ ಕೆಕೆಆರ್ನ ಬ್ಯಾಟಿಂಗ್ ಬೆನ್ನೆಲುಬಾಗಿ ಉತ್ತಪ್ಪ ಕಾಣಿಸಿಕೊಂಡಿದ್ದರು.
ಕ್ರಿಸ್ ಲಿನ್: ಕೆಕೆಆರ್ ಪರ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕ್ರಿಸ್ ಲಿನ್ 40 ಪಂದ್ಯಗಳಲ್ಲಿ 1200 ರನ್ ಗಳಿಸಿದ್ದಾರೆ. ಸುನಿಲ್ ನರೈನ್ ಅವರೊಂದಿಗೆ, ಕೆಕೆಆರ್ ಪರ ಸ್ಪೋಟಕ ಇನಿಂಗ್ಸ್ ಆರಂಭಿಸುತ್ತಿದ್ದರು. ಲಿನ್ ಕೈ ಬಿಟ್ಟ ಬಳಿಕ ಕೆಕೆಆರ್ ತಂಡ ಓಪನರ್ ಆಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಇತ್ತ ಮುಂಬೈ ಇಂಡಿಯನ್ಸ್ ಪರ ಕ್ರಿಸ್ ಲಿನ್ ಆರಂಭಿಕರಾಗಿ ಬ್ಯಾಟ್ ಬೀಸಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ.
ಪಿಯೂಷ್ ಚಾವ್ಲಾ: ಕೋಲ್ಕತಾ ನೈಟ್ ರೈಡರ್ಸ್ ಪರ ಪಿಯುಷ್ ಚಾವ್ಲಾ 66 ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಈಡನ್ ಗಾರ್ಡನ್‌ನಲ್ಲಿ ಪಿಯೂಷ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಯುಎಇಯಲ್ಲಿ ನಡೆಯುತ್ತಿರುವ ಈ ಐಪಿಎಲ್ ಸೀಸನ್ನಲ್ಲಿ ಚಾವ್ಲಾ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಕೆಕೆಆರ್ ಕೈ ಬಿಟ್ಟರೂ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಚಾವ್ಲಾ ಮೇಲೆ ವಿಶ್ವಾಸವಿರಿಸಿದ್ದಾರೆ. ಹೀಗಾಗಿ ಸಿಎಸ್ಕೆ ಪರ ಮಿಂಚಿದ್ರೆ ಕೆಕೆಆರ್ ಪಶ್ಚಾತ್ತಾಪ ಪಡಬೇಕಾಗಬಹುದು.