ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ಗೆ ತಾತ್ಕಾಲಿಕ ಬ್ರೇಕ್ ಬೀಳುತ್ತಿದ್ದಂತೆ, ಅತ್ತ ಇಂಗ್ಲೆಂಡ್ ಆಟಗಾರರು ತವರಿನತ್ತ ಮುಖ ಮಾಡಿದ್ದಾರೆ. ಹೀಗೆ ಹಿಂತಿರುಗುವ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ತಮ್ಮ ಬ್ಯಾಟ್ನ್ನು ಸಹ ಆಟಗಾರನಿಗೆ ವಿಶೇಷ ಉಡುಗೊರೆಯಾಗಿ ನೀಡಿದ್ದಾರೆ.
2/ 6
ಹೌದು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಭರ್ಜರಿ ಶತಕ ಸಿಡಿಸಿದ ಬ್ಯಾಟ್ನ್ನು ಜೋಸ್ ಬಟ್ಲರ್ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಉಡುಗೊರೆಯಾಗಿ ನೀಡಿದ್ದಾರೆ.
3/ 6
ತಮ್ಮದೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಜೈಸ್ವಾಲ್‌ಗೆ ಬ್ಯಾಟ್ ನೀಡಿದ ಬಟ್ಲರ್ ಅದ ಮೇಲೆ ಯುವ ಕ್ರಿಕೆಟಿಗನ ಭವಿಷ್ಯವನ್ನು ವಿಶೇಷ ಸಂದೇಶ ಬರೆದಿದ್ದಾರೆ.
4/ 6
ಜೋಸ್ ಬಟ್ಲರ್ ನೀಡಿದ ಬ್ಯಾಟ್ ಅವರ ಪಾಲಿಗೆ ವಿಶೇಷವಾದ ಬ್ಯಾಟ್ ಆಗಿತ್ತು. ಏಕೆಂದರೆ ಇದೇ ಮೊದಲ ಬಾರಿ ಬಟ್ಲರ್ ಐಪಿಎಲ್ ಶತಕ ಸಿಡಿಸಿದ್ದರು. ಕೇವಲ 64 ಎಸೆತಗಳನ್ನು ಎದುರಿಸಿದ್ದ ಬಟ್ಲರ್ 8 ಭರ್ಜರಿ ಸಿಕ್ಸರ್ನೊಂದಿಗೆ 124 ರನ್ ಬಾರಿಸಿದ್ದರು.
5/ 6
ಈ ಅಮೋಘ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 55 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು.
6/ 6
ಇದೀಗ ಅದೇ ಬ್ಯಾಟ್ ಅನ್ನು ಯುವ ಕ್ರಿಕೆಟಿಗನಿಗೆ ಉಡುಗೊರೆಯಾಗಿ ನೀಡಿ ಎಲ್ಲರ ಮನಗೆದ್ದಿದ್ದಾರೆ ಜೋಸ್ ಬಟ್ಲರ್.
First published:
16
IPL 2021: ಯುವ ಕ್ರಿಕೆಟಿಗನಿಗೆ ವಿಶೇಷ ಉಡುಗೊರೆ ನೀಡಿದ ಜೋಸ್ ಬಟ್ಲರ್..!