ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್ 13ನೇ ಸೀಸನ್ ರಂಗೇರಲು ದಿನಗಣನೆಗೆ ಶುರುವಾಗಿದೆ. ಈಗಾಗಲೇ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಯುಎಇ ಗೆ ತೆರಳಿದೆ.
2/ 9
ಅರಬ್ ದೇಶದಲ್ಲಿ 6 ದಿನಗಳ ಐಸೋಲೇಷನ್ನಲ್ಲಿ ತಂಡಗಳಿರಲಿದ್ದು, ಆ ಬಳಿಕ ಸಂಪೂರ್ಣ ಸಂರಕ್ಷಣಾ ವಲಯದಲ್ಲಿ ಅಭ್ಯಾಸವನ್ನು ಆರಂಭಿಸಲಿದೆ. ಈ ಬಾರಿ ದುಬೈ ಪಿಚ್ಗಳಲ್ಲಿ ಐಪಿಎಲ್ ನಡೆಯುತ್ತಿರುವುದರಿಂದ ಮತ್ತಷ್ಟು ರೋಚಕ ಕಾದಾಟಕ್ಕೆ ಸಾಕ್ಷಿಯಾಗಲಿದೆ.
3/ 9
ಯುಎಇ ಪಿಚ್ಗಳು ಬೌಲಿಂಗ್ಗೆ ಸಹಕಾರಿ ಎನ್ನಲಾಗುತ್ತಿದ್ದು, ಅದರಲ್ಲೂ ಸ್ಪಿನ್ ಬೌಲಿಂಗ್ಗೆ ಉತ್ತಮ ಎಂಬ ಅಭಿಪ್ರಾಯಗಳಿವೆ. ಹೀಗಾಗಿ ಬ್ಯಾಟ್ಸ್ಮನ್ಗಳಷ್ಟೇ, ಬೌಲರುಗಳು ಕೂಡ ಈ ಬಾರಿ ಮಿಂಚುವ ಸಾಧ್ಯತೆಯಿದೆ.
4/ 9
ಇತ್ತ ಸ್ಪಿನ್ ಬೌಲಿಂಗ್ ಮೇಲೆ ಪಾರುಪತ್ಯ ಸಾಧಿಸುವ ಕೆಲ ಬ್ಯಾಟ್ಸ್ಮನ್ಗಳು ಯುಎಇ ಮೈದಾನದಲ್ಲೂ ಸಿಕ್ಸರ್ಗಳ ಸುರಿಮಳೆ ಸುರಿಸುವ ನಿರೀಕ್ಷೆಯಿದೆ. ಈಗಾಗಲೇ ಸಿಕ್ಸರ್ ಮೂಲಕ ಐಪಿಎಲ್ನಲ್ಲಿ ಅನೇಕ ಆಟಗಾರರು ಗಮನ ಸೆಳೆದಿದ್ದಾರೆ. ಅದರಲ್ಲೂ ಒಂದೇ ಇನಿಂಗ್ಸ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಬರೆದ ಟಾಪ್ 5 ಆಟಗಾರರ ಪರಿಚಯ ಇಲ್ಲಿದೆ.
5/ 9
5- ಕ್ರಿಸ್ ಗೇಲ್ : 2012 ರಲ್ಲಿ ಗೇಲ್ ಕಿಂಗ್ಸ್ ಇಲೆವೆನ್ ವಿರುದ್ಧ 12 ಸಿಕ್ಸ್ ಸಿಡಿಸಿ 117 ರನ್ ಬಾರಿಸಿದ್ದರು.
6/ 9
4- ಎಬಿ ಡಿವಿಲಿಯರ್ಸ್: 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ದ ಎಬಿಡಿ 129 ರನ್ ಬಾರಿಸಿದ್ದರು. ಇದರಲ್ಲಿ 12 ಸಿಕ್ಸರ್ಗಳು ಮೂಡಿಬಂದಿದ್ದವು.
7/ 9
3- ಕ್ರಿಸ್ ಗೇಲ್: 2012ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗೇಲ್ 13 ಸಿಕ್ಸರ್ಗಳೊಂದಿಗೆ 128 ರನ್ ಚಚ್ಚಿದ್ದರು.
8/ 9
2- ಬ್ರೆಂಡನ್ ಮೆಕಲಂ: 2008 ರ ಐಪಿಎಲ್ನ ಮೊದಲ ಪಂದ್ಯದಲ್ಲಿ ಮೆಕಲಂ ಆರ್ಸಿಬಿ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್ ಮೂಲಕ 158 ಬಾರಿಸಿದ್ದರು. ಇದರಲ್ಲಿ 13 ಸಿಕ್ಸ್ಗಳು ಸಿಡಿದಿದ್ದವು.
9/ 9
1- ಕ್ರಿಸ್ ಗೇಲ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗೇಲ್ ಹೊಸ ಇತಿಹಾಸ ಬರೆದಿದ್ದರು. ಪುಣೆ ಬೌಲರುಗಳನ್ನು ಬೆಂಡೆತ್ತಿದ್ದ ಗೇಲ್ 66 ಎಸೆತಗಳಲ್ಲಿ 175 ರನ್ ಬಾರಿಸಿದ್ದರು. ಈ ಭರ್ಜರಿ ಇನಿಂಗ್ಸ್ನಲ್ಲಿ ಮೂಡಿ ಬಂದಿದ್ದು ಬರೋಬ್ಬರಿ 17 ಸಿಕ್ಸರ್ಗಳು. ಇದು ಐಪಿಎಲ್ನಲ್ಲಿ ದಾಖಲೆಯಾಗಿ ಉಳಿದಿದೆ.