ಇಶಾನ್ ಕಿಶನ್: ಮುಂಬೈ ಇಂಡಿಯನ್ಸ್ ತಂಡದ ಪಾಕೆಟ್ ಡೈನಾಮೋ ಇಶಾನ್ ಕಿಶನ್ ಅವರು ಕೂಡ ಹರಾಜಿಗೆ ಲಭ್ಯರಾಗಲಿದ್ದಾರೆ. ಏಕೆಂದರೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಪೊಲಾರ್ಡ್, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಉಳಿಸಿಕೊಳ್ಳಲಿದೆ. ಹೀಗಾಗಿ ಪಾಕೆಟ್ ಡೈನಾಮೋವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆರ್ಸಿಬಿ ಆಸಕ್ತಿ ಹೊಂದಿದೆ. ಇದರಿಂದ ಡೆತ್ ಓವರ್ ಸ್ಪೆಷಲಿಸ್ಟ್ ಅಥವಾ ಆರಂಭಿಕರಾಗಿ ಇಶಾನ್ ಕಿಶನ್ ಅವರನ್ನು ಬಳಸಿಕೊಳ್ಳಬಹುದು ಎಂಬುದು ಆರ್ಸಿಬಿಯ ಲೆಕ್ಕಚಾರ. ಒಟ್ಟಿನಲ್ಲಿ 2021ರಲ್ಲಿ ಕಪ್ ತನ್ನದಾಗಿಸಿಕೊಳ್ಳಲು ಆರ್ಸಿಬಿ ಫ್ರಾಂಚೈಸಿ ಈಗಾಗಲೇ ಸಕಲ ಸಿದ್ಧತೆಯಲ್ಲಿದ್ದು, ಅಂತಿಮವಾಗಿ ಯಾರು ತಂಡದಿಂದ ಹೊರಬೀಳಲಿದ್ದಾರೆ. ಯಾರು ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.