3- ರಾಹುಲ್ ದ್ರಾವಿಡ್: ರಾಹುಲ್ ದ್ರಾವಿಡ್ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದಾರೆ. ಐಪಿಎಲ್ ವೃತ್ತಿಜೀವನದ 82 ಇನ್ನಿಂಗ್ಸ್ಗಳಲ್ಲಿ 2,174 ರನ್ ಕಲೆಹಾಕಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅರ್ಧಶತಕ ಸಿಡಿಸಿ ಆಟಗಾರರ ಪಟ್ಟಿಯಲ್ಲಿ ದ್ರಾವಿಡ್ ಮೂರನೇ ಸ್ಥಾನದಲ್ಲಿದ್ದಾರೆ. 2013 ರಲ್ಲಿ ದೆಹಲಿ ಡೇರ್ಡೆವಿಲ್ಸ್ ವಿರುದ್ಧ 53 ರನ್ಗಳನ್ನು ಬಾರಿಸಿದ್ದರು. ಈ ವೇಳೆ ಅವರ ವಯಸ್ಸು 40 ವರ್ಷ 116 ದಿನಗಳು.
1- ಆ್ಯಡಂ ಗಿಲ್ಕ್ರಿಸ್ಟ್: ಸ್ಪೋಟಕ ಬ್ಯಾಟಿಂಗ್ಗೆ ಮತ್ತೊಂದು ಹೆಸರು ಗಿಲ್ಕ್ರಿಸ್ಟ್. ಆ್ಯಡಂ ಗಿಲ್ಕ್ರಿಸ್ಟ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 138.89 ಸ್ಟ್ರೈಕ್ ದರದಲ್ಲಿ 80 ಇನ್ನಿಂಗ್ಸ್ಗಳಲ್ಲಿ 2069 ರನ್ ಗಳಿಸಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ ಅರ್ಧಶತಕ ಬಾರಿಸಿದ ಹಿರಿಯ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗಿಲ್ಕ್ರಿಸ್ಟ್ 85 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ವೇಳೆ ಗಿಲ್ಕ್ರಿಸ್ಟ್ ಅವರ ವಯಸ್ಸು 41 ವರ್ಷಗಳು ಮತ್ತು 181 ದಿನಗಳು.