ಆದರೆ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ಧೋನಿ ನಿವೃತ್ತಿ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ. ಧೋನಿ ಈಗ ನಿವೃತ್ತಿಯಾಗುವುದಿಲ್ಲ, ಇನ್ನೂ ಎರಡು ಅಥವಾ ಮೂರು ವರ್ಷ ಐಪಿಎಲ್ ಆಡಬಹುದು ಎಂದು ಹೇಳಿದ್ದಾರೆ. ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಹಿನ್ನಲೆಯಲ್ಲಿ ಮುಂಬೈ ಇಂಡಿಯನ್ಸ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಪ್ರಿ-ಸೆಷನ್ ಪತ್ರಿಕಾಗೋಷ್ಠಿ ನಡೆಸಿದ್ದರು.
ಧೋನಿ ಈಗಲೂ ಚೆನ್ನೈ ತಂಡದಲ್ಲಿ ಪ್ರಮುಖ ಆಟಗಾರ. ಟೂರ್ನಿಯ ಆರಂಭದಿಂದಲೂ ಚೆನ್ನೈ ಪರ ಆಡುತ್ತಿರುವ ಧೋನಿ 234 ಪಂದ್ಯಗಳಲ್ಲಿ 4,978 ರನ್ ಗಳಿಸಿದ್ದಾರೆ. ಅವರು ನಾಲ್ಕು ಬಾರಿ ಕಪ್ ಗೆದ್ದಿದ್ದಾರೆ. ಐಪಿಎಲ್ 2023 ತನ್ನ ಕೊನೆಯ ಸೀಸನ್ ಎಂದು ಧೋನಿ ಈ ಹಿಂದೆ ಸುಳಿವು ನೀಡಿದ್ದರು. 2023ರಲ್ಲಿ ಇಡೀ ದೇಶ ಸುತ್ತಿ ಅಭಿಮಾನಿಗಳಿಗೆ ವಿದಾಯ ಹೇಳಲು ಇಚ್ಛಿಸುತ್ತೇನೆ ಎಂದು ಅವರು ಹೇಳಿದ್ದರು. ಇದರ ನಡುವೆ ರೋಹಿತ್ ಕಾಮೆಂಟ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಖುಷಿಯಾಗಿದ್ದಾರೆ.