IPL 2023: ಮೂವರು ವಿದೇಶಿ ಆಟಗಾರರಿಗೆ ಗಾಳ ಹಾಕಲಿದೆ ಮುಂಬೈ! ರೋಹಿತ್ ಪಡೆ ಸೇರ್ತಾರಾ ವಿಶ್ವಕಪ್ ಹೀರೋ?
IPL 2023: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಗಾಯದಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡರೆ, ಮುಂಬೈ ತಂಡ ಐಪಿಎಲ್ನಲ್ಲಿ ಬಲಿಷ್ಠ ತಂಡವಾಗುವುದು ಖಚಿತ. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೇಸನ್ ಬೆಹ್ರೆನ್ ಡಾರ್ಫ್ ಅವರನ್ನು ಈಗಾಗಲೇ ನೇರವಾಗಿ ಖರೀದಿಸಿದೆ.
ಮುಂಬೈ ಇಂಡಿಯನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 5 ಬಾರಿ ಚಾಂಪಿಯನ್ ಆಗಿದೆ.
2/ 8
ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಗಾಯದಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡರೆ ಮುಂಬೈ ಲೀಗ್ ನಲ್ಲಿ ಬಲಿಷ್ಠ ತಂಡವಾಗುವುದು ಖಚಿತ. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೇಸನ್ ಬೆಹ್ರೆನ್ ಡಾರ್ಫ್ ಅವರನ್ನು ಖರೀದಿಸಿದೆ.
3/ 8
ಡಿಸೆಂಬರ್ನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಮುಂಬೈ ಗರಿಷ್ಠ 9 ಜನರನ್ನು ಖರೀದಿಸುವ ಸಾಧ್ಯತೆಯಿದೆ. ಇದರಲ್ಲಿ ಆರು ಭಾರತೀಯರು ಹಾಗೂ ಮೂವರು ವಿದೇಶಿಗರನ್ನು ಖರೀದಿಸುವ ಸಾಧ್ಯತೆಯಿದೆ. ಮುಂಬೈ ಬಳಿ ರೂ. 20.55 ಕೋಟಿ ಹಣ ಉಳಿದಿದೆ.
4/ 8
ಡಿಸೆಂಬರ್ 23 ರಂದು ನಡೆಯಲಿರುವ ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಮೂವರು ವಿದೇಶಿ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಈ ಆಟಗಾರರ ಮೇಲೆ ಸಾಕಷ್ಟು ಹಣ ಸುರಿಯಲು ಪ್ರಾಂಚೈಸಿ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.
5/ 8
ಆಸ್ಟ್ರೇಲಿಯಾದ ಯುವ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್ಗೂ ಮುನ್ನ ಭಾರತದಲ್ಲಿ ನಡೆದ ಟಿ20 ಸರಣಿ ರೋಚಕವಾಗಿರುವುದು ಗೊತ್ತೇ ಇದೆ. ಓಪನರ್ ಆಗಿ ಗ್ರೀನ್ ಭರ್ಜರಿ ಫಾರ್ಮ್ನಲ್ಲಿದ್ದಾರೆ.
6/ 8
ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಮ್ ಝಂಪಾಗಾಗಿ ಮುಂಬೈ ಕೂಡ ಪ್ರಯತ್ನಿಸುವ ಸಾಧ್ಯತೆಯಿದೆ. ಈ ಋತುವಿನಲ್ಲಿ ಸ್ಪಿನ್ನರ್ ಇಲ್ಲದ ಸಮಸ್ಯೆ ಮುಂಬೈಗೆ ಕಾಡುತ್ತಿದೆ. ಮುರುಗನ್ ಅಶ್ವಿನ್ ಮತ್ತು ಕುಮಾರ್ ಕಾರ್ತಿಕೇಯ ಅವರಂತಹ ಆಟಗಾರರು ಆಡಿದರೂ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ.
7/ 8
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಟೂರ್ನಿಯ ಆಟಗಾರನಾಗಿದ್ದ ಸ್ಯಾಮ್ ಕರನ್ಗೆ ಮುಂಬೈ ಕೂಡ ಪೈಪೋಟಿ ನಡೆಸಲಿದೆ. ಕರಣ್ ಟಿ20 ವಿಶ್ವಕಪ್ನಲ್ಲಿ 13 ವಿಕೆಟ್ಗಳನ್ನು ಕಬಳಿಸಿದ್ದಾರೆ. ಬೇಕಿದ್ದರೆ ಬ್ಯಾಟ್ ನಲ್ಲೂ ಮಿಂಚಬಹುದು. ಆದರೆ ಕರಣ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಪೈಪೋಟಿ ನೀಡುವ ಸಾಧ್ಯತೆ ಇದೆ.
8/ 8
ಆದರೆ ಇತರ ಫ್ರಾಂಚೈಸಿಗಳು ಕೂಡ ಮೂವರಿಗೆ ಪೈಪೋಟಿ ನೀಡುವ ಸಾಧ್ಯತೆಯಿದೆ. ವಿಶೇಷವಾಗಿ ಕರಣ್ ಮತ್ತು ಗ್ರೀನ್ಗಾಗಿ ಸನ್ರೈಸರ್ಸ್ ಮತ್ತು ಪಂಜಾಬ್ ಕಿಂಗ್ಸ್ ದೊಡ್ಡ ಮೊತ್ತವನ್ನು ಪಾವತಿಸಲು ಸಿದ್ಧವಾಗಿದೆ. ಈ ಎರಡು ತಂಡಗಳು ಅತ್ಯಧಿಕ ಪರ್ಸ್ ಹೊಂದಿವೆ. ಮುಂಬೈ ಬಳಿ ಕೇವಲ ರೂ. 20.55 ಕೋಟಿ ಮಾತ್ರ. ಹಣ ಉಳಿದಿದೆ.