IPL 2022 ರ ಮೊದಲ 30 ಪಂದ್ಯಗಳನ್ನು ನೋಡುವಾಗ, ಅನೇಕ ಫ್ರಾಂಚೈಸಿಗಳು ಖಂಡಿತವಾಗಿಯೂ ಉಳಿಸಿಕೊಂಡಿರುವ ಆಟಗಾರರ ಪ್ರದರ್ಶನದ ಬಗ್ಗೆ ಚಿಂತಿತರಾಗುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೊಹಮ್ಮದ್ ಸಿರಾಜ್ ಮತ್ತು ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್‌ಗೆ ನಾಯಕ ರೋಹಿತ್ ಶರ್ಮಾ ಮತ್ತು ಕೋಟಿಗಳಲ್ಲಿ ಉಳಿಸಿಕೊಂಡಿರುವ ಕೀರನ್ ಪೊಲಾರ್ಡ್ ಇದುವರೆಗೆ ವಿಫಲರಾಗಿದ್ದಾರೆ. ದೆಹಲಿ ಕ್ಯಾಪಿಟಲ್ಸ್‌ಗಾಗಿ ಅಕ್ಷರ್ ಪಟೇಲ್ ಮತ್ತು ಎನ್ರಿಕ್ ನಾರ್ಕಿಯಾ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ. ಅದೇ ಸಮಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಮೊಯಿನ್ ಅಲಿ ಮತ್ತು ನಾಯಕ ರವೀಂದ್ರ ಜಡೇಜಾ ಕೂಡ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ.
ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್‌ಗಾಗಿ ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿರುವ ರೋಹಿತ್ ಶರ್ಮಾ ನಾಯಕ ಮತ್ತು ಬ್ಯಾಟಿಂಗ್ ಪ್ರದರ್ಶನ ಈ ಸೀಸನ್ನಲ್ಲಿ ಡಲ್ ಹೊಡೆದಿದೆ. ಅವರನ್ನು ತಂಡ 16 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಆದರೆ ಈ ಋತುವಿನಲ್ಲಿ 6 ಪಂದ್ಯಗಳನ್ನು ಆಡಿದ ನಂತರ, ರೋಹಿತ್ ಸರಾಸರಿ 19 ಆಗಿದೆ. ಇದು ಕಳೆದ ಐದು ವರ್ಷಗಳಲ್ಲಿ ಕಡಿಮೆಯಾಗಿದೆ. ಅವರ ಸ್ಟ್ರೈಕ್ ರೇಟ್ ಕೂಡ 129 ಆಗಿದೆ.
ರವೀಂದ್ರ ಜಡೇಜಾ: ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾ ಅವರನ್ನು 16 ಕೋಟಿ ರೂ.ಗೆ ಮೊದಲ ಸ್ಥಾನದ ಆಟಗಾರನಾಗಿ ಉಳಿಸಿಕೊಂಡಿತ್ತು. ಲೀಗ್ ಆರಂಭಕ್ಕೆ ಎರಡು ದಿನಗಳ ಮೊದಲು ಮಹೇಂದ್ರ ಸಿಂಗ್ ಧೋನಿ ತಂಡದ ನಾಯಕತ್ವ ತ್ಯಜಿಸಿದ್ದರು. ಇದಾದ ನಂತರ ಜಡೇಜಾಗೆ ಈ ಜವಾಬ್ದಾರಿ ಸಿಕ್ಕಿತು. ಆದರೆ ನಾಯಕ ಮತ್ತು ಆಟಗಾರನಾಗಿ ತಮ್ಮ ಛಾಪು ಬಿಡಲು ವಿಫಲರಾದರು. ಜಡೇಜಾ ಈ ಋತುವಿನಲ್ಲಿ ತಂಡಕ್ಕೆ 6 ಪಂದ್ಯಗಳಲ್ಲಿ 1 ಪಂದ್ಯವನ್ನು ಮಾತ್ರ ಗೆದ್ದಿದ್ದಾರೆ.
ಮೊಯಿನ್ ಅಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊಯಿನ್ ಅವರನ್ನು ತಂಡ 8 ಕೋಟಿಗೆ ಉಳಿಸಿಕೊಂಡಿತ್ತು. ಆದರೆ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ ಮೊಯಿನ್ 17ರ ಬ್ಯಾಟಿಂಗ್ ಸರಾಸರಿ ಹಾಗೂ 124ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ಬೌಲಿಂಗ್‌ನಲ್ಲಿ ದುಬಾರಿ ಎಂದು ಸಾಬೀತುಪಡಿಸಿದ್ದಾರೆ. 8.50 ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ ಮತ್ತು ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.