ಐಪಿಎಲ್ 2022 ರ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 61 ರನ್ ಗಳಿಂದ ಸೋಲಿಸಿತು. ಅಲ್ಲದೇ ಧನ್ಯಶ್ರೀ ವರ್ಮಾ ಈ ಪಂದ್ಯದಲ್ಲಿ ವಿಶೇಷ ಆಕರ್ಷಣೆಯಾಗಿದ್ದರು. ರಾಜಸ್ಥಾನವನ್ನು ಪ್ರಮೋಟ್ ಸಪೋರ್ಟ್ ಮಾಡಿದ ಆ ಚೆಲುವೆ ಬೇರೆ ಯಾರೋ ಅಲ್ಲ.. ಯುಜ್ವೇಂದ್ರ ಚಹಾಲ್ ಪತ್ನಿ ಧನುಶ್ರೀ ವರ್ಮಾ. ಈ ಡ್ಯಾನ್ಸಿಂಗ್ ಬ್ಯೂಟಿ ಪಿಂಕ್ ಟಾಪ್ ನಲ್ಲಿ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಯುಜುವೇಂದ್ರ ಚಹಾಲ್ ತಮ್ಮ 4 ಓವರ್‌ಗಳ ಕೋಟಾದಲ್ಲಿ 22 ರನ್‌ಗಳಿಗೆ ಮೂರು ವಿಕೆಟ್ ಪಡೆದರು. ಆರಂಭಿಕರಾದ ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್ ಮತ್ತು ರೊಮಾರಿಯೊ ಶೆಫರ್ಡ್ ಚಹಾಲ್ ಪೆವಿಲಿಯನ್ಗೆ ಕಳುಹಿಸಿದರು. ಚಹಾಲ್ ವಿಕೆಟ್ ಪಡೆದಾಗ ಧನಶ್ರೀ ಖುಷಿಗೆ ಪಾರವೇ ಇರಲಿಲ್ಲ. ಪಂದ್ಯದಲ್ಲಿ ತಮ್ಮ ಪ್ರದರ್ಶನದಿಂದ ಸಂತಸಗೊಂಡಿರುವ ಚಹಾಲ್, ಸ್ಟ್ಯಾಂಡ್‌ನಲ್ಲಿ ಪತ್ನಿ ಧನಶ್ರೀಗೆ ಫ್ಲೈಯಿಂಗ್ ಕಿಸ್ ನೀಡಿದರು.