ಮುಂಬೈ, ಏಪ್ರಿಲ್ 25: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಐಪಿಎಲ್ ವೇಳೆ ತನ್ನ ಗೆಳತಿ ಕಿಮ್ ವ್ಯಾಟ್ಸನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಕೆಲವು ದಿನಗಳ ಹಿಂದೆ ಬಯೋ ಬಬಲ್ನಿಂದ ಹೊರ ಬಂದಿದ್ದರು. ಬಳಿಕ ದಕ್ಷಿಣ ಆಫ್ರಿಕಾಗೆ ತೆರಳಿ ಮದುವೆಯಾಗಿದ್ದಾರೆ.
2/ 5
ಇವರಿಬ್ಬರ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರದಿಯ ಪ್ರಕಾರ, ಕಾನ್ವೇ ಮತ್ತು ಕಿಮ್ ಕಳೆದ 3 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು.
3/ 5
ಬಯೋ ಬಬಲ್ನಿಂದ ಹೊರಗಡೆ ಬರುವ ಮೊದಲು ಕಾನ್ವೇ, ಚೆನ್ನೈ ಸೂಪರ್ ಕಿಂಗ್ ತಂಡದ ಆಟಗಾರರಿಗೆ ಸಾಂಪ್ರದಾಯಿಕ ಮದುವೆಯ ಪೂರ್ವ ಪಾರ್ಟಿಯನ್ನು ಆಯೋಜಿಸಿದ್ದರು.
4/ 5
ಇದು ಕಾನ್ವೆ ಅವರ ಮೊದಲ ಐಪಿಎಲ್ ಸೀಸನ್ ಆಗಿದ್ದು, ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಮೂಲ ಬೆಲೆ 1 ಕೋಟಿಗೆ ಖರೀದಿಸಿದೆ.
5/ 5
ಈ ಋತುವಿನಲ್ಲಿ ಕಾನ್ವೇ ಕೇವಲ 1 ಪಂದ್ಯವನ್ನು ಆಡಿದ್ದಾರೆ. ಅದರಲ್ಲಿ ಅವರು ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದರು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯವಿರುವುದಿಲ್ಲ. ಮದುವೆಯ ನಂತರ ತಂಡವನ್ನು ಮತ್ತೆ ಸೇರುವ ಮೊದಲು ಅವರು 3 ದಿನಗಳ ಕಾಲ ಪ್ರತ್ಯೇಕವಾಗಿರಬೇಕಾಗುತ್ತದೆ.
First published:
15
IPL 2022: ಬಹುಕಾಲದ ಗೆಳತಿಯೊಂದಿಗೆ ಡೆವೊನ್ ಕಾನ್ವೇ ವಿವಾಹ! ಮದುವೆಗೂ ಮುನ್ನ ಸಿಎಸ್ಕೆ ಟೀಂ ಜೊತೆ ಬ್ಯಾಚುಲರ್ ಪಾರ್ಟಿ