ಡೋಂಟ್ ವರಿ... IPL ನಮ್ಮಲ್ಲಿ ಆಯೋಜಿಸಿ ಎಂದು ಬಿಸಿಸಿಐಗೆ ಆಫರ್ ನೀಡಿದ ನೆರೆ ರಾಷ್ಟ್ರ..!

ಇನ್ನೊಂದೆಡೆ ಟಿ20 ವಿಶ್ವಕಪ್​ಗೂ ಮುನ್ನ ಭಾರತದಲ್ಲಿಯೇ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ  ನಡುವೆ ಐಪಿಎಲ್‌ ಆಯೋಜಿಸಲು ಬಿಸಿಸಿಐ ಕೂಡ ಚಿಂತನೆ ನಡೆಸಿದೆ .

First published:

 • 18

  ಡೋಂಟ್ ವರಿ... IPL ನಮ್ಮಲ್ಲಿ ಆಯೋಜಿಸಿ ಎಂದು ಬಿಸಿಸಿಐಗೆ ಆಫರ್ ನೀಡಿದ ನೆರೆ ರಾಷ್ಟ್ರ..!

  ರಂಗು ರಿಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಮರು ಆಯೋಜನೆ​ ಯಾವಾಗ ಎಂಬ ಪ್ರಶ್ನೆಯೊಂದು ಕ್ರಿಕೆಟ್ ಪ್ರೇಮಿಗಳಲ್ಲಿದೆ.

  MORE
  GALLERIES

 • 28

  ಡೋಂಟ್ ವರಿ... IPL ನಮ್ಮಲ್ಲಿ ಆಯೋಜಿಸಿ ಎಂದು ಬಿಸಿಸಿಐಗೆ ಆಫರ್ ನೀಡಿದ ನೆರೆ ರಾಷ್ಟ್ರ..!

  ಕೊರೋನಾ ಕಾರಣದಿಂದ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿರುವ ಟೂರ್ನಿಯನ್ನು ಮುಗಿಸಲೇಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ. ಒಂದು ವೇಳೆ ಈ ಸೀಸನ್ ಪೂರ್ತಿಗೊಳಿಸಲಾಗದಿದ್ದರೆ  ಬಿಸಿಸಿಐಗೆ 2500 ಕೋಟಿ ರೂ. ನಷ್ಟವಾಗಲಿದೆ.

  MORE
  GALLERIES

 • 38

  ಡೋಂಟ್ ವರಿ... IPL ನಮ್ಮಲ್ಲಿ ಆಯೋಜಿಸಿ ಎಂದು ಬಿಸಿಸಿಐಗೆ ಆಫರ್ ನೀಡಿದ ನೆರೆ ರಾಷ್ಟ್ರ..!

  ಹೀಗಾಗಿ ಟೂರ್ನಿಯನ್ನು ಮರು ಆಯೋಜಿಸಲು ಬಿಸಿಸಿಐ ಅನ್ಯ ಮಾರ್ಗಗಳನ್ನು ಎದುರು ನೋಡುತ್ತಿದೆ. ಈಗಾಗಲೇ ಯುಎಇ, ಹಾಗೂ ಇಂಗ್ಲೆಂಡ್ ಕೌಂಟಿ ಕ್ಲಬ್​ಗಳು ಟೂರ್ನಿ ಆಯೋಜನೆಗೆ ಮುಂದೆ ಬಂದಿದೆ. ಅದರ ಬೆನ್ನಲ್ಲೇ  ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ನಾವು ಸಿದ್ಧರಿರುವುದಾಗಿ ಎಸ್​ಎಲ್​ಸಿ ಘೋಷಿಸಿದೆ.

  MORE
  GALLERIES

 • 48

  ಡೋಂಟ್ ವರಿ... IPL ನಮ್ಮಲ್ಲಿ ಆಯೋಜಿಸಿ ಎಂದು ಬಿಸಿಸಿಐಗೆ ಆಫರ್ ನೀಡಿದ ನೆರೆ ರಾಷ್ಟ್ರ..!

  ಹೌದು, ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಇದೀಗ ಐಪಿಎಲ್​ನ ಉಳಿದ 31 ಪಂದ್ಯಗಳನ್ನು ನಮ್ಮ ದೇಶದಲ್ಲಿ ಆಯೋಜಿಸಿ ಎಂದು ಬಿಸಿಸಿಐಗೆ ಆಫರ್ ನೀಡಿದೆ. ಲಂಕಾ ಕ್ರಿಕೆಟ್ ಮಂಡಳಿಯ ಈ ನಿರ್ಧಾರ ಮತ್ತೆ ಐಪಿಎಲ್ ಆಸೆಯನ್ನು ಜೀವಂತವಾಗಿರಿಸಿದೆ.

  MORE
  GALLERIES

 • 58

  ಡೋಂಟ್ ವರಿ... IPL ನಮ್ಮಲ್ಲಿ ಆಯೋಜಿಸಿ ಎಂದು ಬಿಸಿಸಿಐಗೆ ಆಫರ್ ನೀಡಿದ ನೆರೆ ರಾಷ್ಟ್ರ..!

  ಈ ಬಗ್ಗೆ ಮಾತನಾಡಿರುವ  ಶ್ರೀಲಂಕಾ ಕ್ರಿಕೆಟ್​ನ ವ್ಯವಸ್ಥಾಪನಾ ಸಮಿತಿಯ ಮುಖ್ಯಸ್ಥ  ಅರ್ಜುನ ಡಿ ಸಿಲ್ವಾ 'ಐಪಿಎಲ್ ಆಯೋಜನೆಗೆ ಶ್ರೀಲಂಕಾ ಸೂಕ್ತ ಸ್ಥಳ. ಸೆಪ್ಟೆಂಬರ್​ನಲ್ಲಿ ಐಪಿಎಲ್​ನ 31 ಪಂದ್ಯಗಳಿಗೆ ಆತಿಥ್ಯವಹಿಸಲು ನಾವು ಸಿದ್ಧ ಎಂದು ತಿಳಿಸಿದ್ದಾರೆ.

  MORE
  GALLERIES

 • 68

  ಡೋಂಟ್ ವರಿ... IPL ನಮ್ಮಲ್ಲಿ ಆಯೋಜಿಸಿ ಎಂದು ಬಿಸಿಸಿಐಗೆ ಆಫರ್ ನೀಡಿದ ನೆರೆ ರಾಷ್ಟ್ರ..!

  ನಾವು ಜುಲೈ-ಆಗಸ್ಟ್​ನಲ್ಲಿ ಲಂಕಾ ಪ್ರೀಮಿಯರ್ ಲೀಗ್ ನಡೆಸಲಿದ್ದೇವೆ. ಆ ಬಳಿಕ ಸೆಪ್ಟೆಂಬರ್​ನಲ್ಲಿ ಐಪಿಎಲ್ ಆಯೋಜಿಸಲು ವೇದಿಕೆ ರೂಪಿಸಲು ನಾವು ರೆಡಿಯಾಗಿದ್ದೇವೆ. ಈ ಬಗ್ಗೆ ಬಿಸಿಸಿಐ ಜೊತೆ ಮಾತುಕತೆ ನಡೆಸುವುದಾಗಿ ಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

  MORE
  GALLERIES

 • 78

  ಡೋಂಟ್ ವರಿ... IPL ನಮ್ಮಲ್ಲಿ ಆಯೋಜಿಸಿ ಎಂದು ಬಿಸಿಸಿಐಗೆ ಆಫರ್ ನೀಡಿದ ನೆರೆ ರಾಷ್ಟ್ರ..!

  ಇನ್ನೊಂದೆಡೆ ಟಿ20 ವಿಶ್ವಕಪ್​ಗೂ ಮುನ್ನ ಭಾರತದಲ್ಲಿಯೇ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ  ನಡುವೆ ಐಪಿಎಲ್‌ ಆಯೋಜಿಸಲು ಬಿಸಿಸಿಐ ಕೂಡ ಚಿಂತನೆ ನಡೆಸಿದೆ . ಇದಾಗ್ಯೂ ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬರದಿದ್ದರೆ, ಇದೀಗ ಬಿಸಿಸಿಐ ಮುಂದೆ ಯುಎಇ, ಇಂಗ್ಲೆಂಡ್ ಹಾಗೂ ಶ್ರೀಲಂಕಾ ಆಯ್ಕೆಗಳಿವೆ.

  MORE
  GALLERIES

 • 88

  ಡೋಂಟ್ ವರಿ... IPL ನಮ್ಮಲ್ಲಿ ಆಯೋಜಿಸಿ ಎಂದು ಬಿಸಿಸಿಐಗೆ ಆಫರ್ ನೀಡಿದ ನೆರೆ ರಾಷ್ಟ್ರ..!

  ಹೀಗಾಗಿ ಐಪಿಎಲ್ ಅನ್ನು ಮರುಆಯೋಜಿಸುವುದು ಬಹುತೇಕ ಖಚಿತ. ಆದರೆ ಅದು ಎಲ್ಲಿ ಎಂಬುದೇ ಈಗ ಪ್ರಶ್ನೆಯಾಗಿದೆ. ಬಿಸಿಸಿಐ ಯಾವ ದೇಶವನ್ನು ಆಯ್ಕೆ ಮಾಡಿಕೊಳ್ಳಲಿದೆ ಕಾದು ನೋಡಬೇಕಿದೆ.

  MORE
  GALLERIES