ಐಪಿಎಲ್ ಅಂಗಳದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಪಂಜಾಬ್ ತಂಡವು ಹೊಸ ಹೆಸರಿನೊಂದಿಗೆ ಹುಮ್ಮಸ್ಸಿನಲ್ಲಿದ್ದರೆ, ರಾಜಸ್ಥಾನ್ ತಂಡವು ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ಆಡುವ ತವಕದಲ್ಲಿದೆ. ಇನ್ನು ಎರಡೂ ತಂಡಗಳನ್ನು ಮುನ್ನಡೆಸುತ್ತಿರುವುದು ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳು ಎಂಬುದು ವಿಶೇಷ. ಇದಾಗ್ಯೂ ಆರ್ಆರ್ ತಂಡದಲ್ಲಿ ಜೋಸ್ ಬಟ್ಲರ್ ಸ್ಥಾನ ಪಡೆದರೆ ಅವರೇ ಕೀಪಿಂಗ್ ಮಾಡಲಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಈ ಹಿಂದೆ ಪರಸ್ಪರ ತಂಡಗಳಲ್ಲಿ ಮಿಂಚಿದ್ದ ಆಟಗಾರರು ಪ್ರಸ್ತುತ ತಂಡಗಳಿಲ್ಲ ಎಂಬುದು ವಿಶೇಷ. ರಾಜಸ್ಥಾನ್ ವಿರುದ್ದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಪಿಯೂಷ್ ಚಾವ್ಲಾ ಇದ್ದಾರೆ. ಈ ಹಿಂದೆ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಚಾವ್ಲಾ ಆರ್ಆರ್ ವಿರುದ್ಧ 14 ವಿಕೆಟ್ ಕಬಳಿಸಿದ್ದರು. ಹಾಗೆಯೇ ಆರ್ಆರ್ ಪರ ಸಿದ್ಧಾರ್ಥ್ ತ್ರಿವೇದಿ 11 ವಿಕೆಟ್ ಪಡೆದಿದ್ದಾರೆ.