Chennai Super Kings: ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕ್ಯಾಪ್ಟಲ್ ಕೂಲ್ ಎಂಎಸ್ ಧೋನಿ ಈ ತಂಡವನ್ನು ಮುನ್ನಡೆಸುತ್ತಿರುವುದಲ್ಲದೆ, ಹೊಸ ಆಟಗಾರರಿಗೆ ಅವಕಾಶಗಳನ್ನು ನೀಡುತ್ತಾಬಂದಿದ್ದಾರೆ. ಕನ್ನಡಿಗರಿಗೆ ಆರ್ಸಿಬಿ ತಂಡದ ಮೇಲಿನ ಒಲವು ಎಷ್ಟಿದೆಯೋ ಅಂತೆಯೇ ಚೆನ್ನೈ ಜನರಿಗೆ ಸಿಎಸ್ಕೆ ತಂಡದ ಮೇಲೆ ಹೆಚ್ಚಿನ ವಿಶ್ವಾಸವಿದೆ. ಹಾಗಂತ ಕನ್ನಡಿಗರ್ಯಾರು ಸಿಎಸ್ಕೆ ಫ್ಯಾನ್ಸ್ ಇಲ್ಲವೆಂದಲ್ಲ. ಬಹುತೇಕರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬೆಂಬಲಿಸುವವರಿದ್ದಾರೆ. ಒಟ್ಟಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯುತ್ತಮ ಫ್ರಾಂಚೈಸಿಗಳಲ್ಲಿ ಒಂದಾಗಿ ಚೆನ್ನೈ ತಂಡ ಗುರುತಿಸಿಕೊಂಡಿದೆ